PubG ಲವ್‌: ನಾನೀಗ ಹಿಂದೂ, ಭಾರತವೀಗ ನಂದೇ ಎಂದ ಪಾಕ್‌ನಿಂದ ಓಡಿ ಬಂದ ಮಹಿಳೆ!

By BK Ashwin  |  First Published Jul 9, 2023, 12:59 PM IST

ನನ್ನ ಪತಿ ಹಿಂದೂ, ಹೀಗಾಗಿ ನಾನೂ ಸಹ ಹಿಂದೂ. ನಾನೀಗ ಭಾರತೀಯಳು ಎನಿಸುತ್ತಿದೆ ಎಂದು ಪಾಕ್‌ ಮೂಲದ ಮಹಿಳೆ ಹೇಳಿಕೊಂಡಿದ್ದಾಳೆ. 


ನೋಯ್ಡಾ (ಜುಲೈ 9, 2023): ಇತ್ತೀಚೆಗೆ ಪಾಕಿಸ್ತಾನದ ಮಹಿಳೆಯೊಬ್ಬಳು ಪಬ್‌ಜಿ ಆಡ್ತಾ ಭಾರತೀಯ ಯುವಕನ ಜತೆ ಪ್ರೀತಿಯಲ್ಲಿ ಬಿದ್ದಿದ್ದು, ಈಗ ಅವರಿಬ್ಬರೂ ಮದುವೆಯಾಗಿ ಹೊಸ ಜೀವನ ಆರಂಭಿಸಲು ತಯಾರಿ ನಡೆಸ್ತಿದ್ದಾರೆ. ಪಾಕ್‌ನಿಂದ ಬಂದ ಕಾರಣ ಗೂಢಚಾರದ ಶಂಕೆಯಲ್ಲಿ ಆಕೆಯನ್ನು ಬಂಧಿಸಲಾಗಿತ್ತಾದ್ರೂ, ಸದ್ಯ ಬಿಡುಗಡೆಯಾಗಿದ್ದಾರೆ. 

ಉತ್ತರ ಪ್ರದೇಶದ ಸಚಿನ್‌ ಮೀನಾ ಜತೆ ಲವ್‌ ಆಗಿ ಭಾರತಕ್ಕೆ ಓಡಿಬಂದ ಪಾಕ್‌ನ ಸೀಮಾ ಹೈದರ್‌ ನೇಪಾಳದ ಮೂಲಕ ವೀಸಾ ಇಲ್ಲದೆ ಅಕ್ರಮವಾಗಿ ಭಾರತ ಪ್ರವೇಶಿಸಿದ್ಳು. ಈ ಕಾರಣ ಆಕೆಯನ್ನು ಬಂಧಿಸಲಾಗಿತ್ತು. ತಾನು ಮಾತ್ರವಲ್ಲದೆ ತನ್ನ ನಾಲ್ವರು ಚಿಕ್ಕ ಮಕ್ಕಳನ್ನು ಸಹ ಆಕೆ ಕರೆದುಕೊಂಡು ಬಂದಿದ್ದಾಳೆ. ಅಕ್ರಮ ವಲಸಿಗರಿಗೆ ಆಶ್ರಯ ನೀಡಲಾಗ್ತಿದೆ ಅಂತ ಸಚಿನ್‌ನನ್ನೂ ಬಂಧಿಸಲಾಗಿತ್ತು. 

Tap to resize

Latest Videos

ಇದನ್ನು ಓದಿ: PubG ಆಡ್ತಾ ಭಾರತೀಯ ಯುವಕನ ಜೊತೆ ಪಾಕ್‌ ಮಹಿಳೆಯ ಪ್ರೇಮ, ಗೂಢಚಾರದ ಶಂಕೆಯಲ್ಲಿ ಪೊಲೀಸ್‌

ಈ ದಂಪತಿ ಬಿಡುಗಡೆಯಾದ ನಂತರ ರಾಷ್ಟ್ರೀಯ ಮಾಧ್ಯಮ ಎನ್‌ಡಿಟಿವಿಗೆ ಹೇಳಿಕೆ ನೀಡಿದ ಮಹಿಳೆ, ‘’ನನ್ನ ಪತಿ ಹಿಂದೂ, ಹೀಗಾಗಿ ನಾನೂ ಸಹ ಹಿಂದೂ. ನಾನೀಗ ಭಾರತೀಯಳು ಎನಿಸುತ್ತಿದೆ’’ ಎಂದೂ ಪಾಕ್‌ ಮೂಲದ ಮಹಿಳೆ ಹೇಳಿಕೊಂಡಿದ್ದಾಳೆ. ಈ ಜೋಡಿಯ ಪ್ರೇಮಕಥೆ ಬಾಲಿವುಡ್ ಸಿನಿಮಾದಷ್ಟೇ ಕುತೂಹಲ ಮೂಡಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅವರು ಆನ್‌ಲೈನ್ ಆಟ PUBG ಆಡುವಾಗ ಸಂಪರ್ಕಕ್ಕೆ ಬಂದರು. ಅಪ್ಲಿಕೇಷನ್‌ನಲ್ಲೇ ಪ್ರೀತಿಯಲ್ಲಿ ಬಿದ್ದರು. ಬಳಿಕ, ಸೀಮಾ, 30 ಮತ್ತು ಸಚಿನ್, 25, ಈ ವರ್ಷದ ಮಾರ್ಚ್‌ನಲ್ಲಿ ನೇಪಾಳದಲ್ಲಿ ವಿವಾಹವಾಗಿದ್ದಾರೆ. ಅಲ್ಲದೆ, ಇದು ಅವರ ಮೊದಲ ಮುಖಾಮುಖಿ ಭೇಟಿ ಅನ್ನೋದು ವಿಶೇಷ.

ಈ ಬಗ್ಗೆ ತನ್ನ ಕತೆ ಹಂಚಿಕೊಂಡಿರುವ ಮಹಿಳೆ, "ಇದು ತುಂಬಾ ದೀರ್ಘವಾದ ಮತ್ತು ಕಠಿಣ ಪ್ರಯಾಣವಾಗಿತ್ತು. ನನಗೂ ತುಂಬಾ ಭಯವಾಯಿತು. ನಾನು ಮೊದಲು ಕರಾಚಿಯಿಂದ ದುಬೈಗೆ ಹೋದೆ, ಅಲ್ಲಿ ನಾವು (ಮಕ್ಕಳ ಜತೆ) 11 ಗಂಟೆಗಳ ಕಾಲ ಕಾಯುತ್ತಿದ್ದೆವು ಮತ್ತು ನಿದ್ರೆ ಮಾಡಲು ಸಾಧ್ಯವಾಗಲಿಲ್ಲ. ನಂತರ ನಾವು ನೇಪಾಳಕ್ಕೆ ಹಾರಿದೆವು, ಅಂತಿಮವಾಗಿ ಪೋಖರಾಗೆ ರಸ್ತೆ ಮಾರ್ಗ ಹಿಡಿದ ಬಳಿಕ ಅಲ್ಲಿ ನಾನು ಸಚಿನ್ ಅವರನ್ನು ಭೇಟಿಯಾದೆ," ಎಂದು ಸೀಮಾ ಹೇಳುತ್ತಾರೆ.

ಇದನ್ನೂ ಓದಿ: PubG ಆಡ್ತಾ ಯುಪಿ ಯುವಕನೊಂದಿಗೆ ಲವ್‌, ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್‌ ಮಹಿಳೆ!

ನಂತರ ಆಕೆ ಪಾಕಿಸ್ತಾನಕ್ಕೆ ಹೋದರು ಮತ್ತು ಸಚಿನ್ ಭಾರತಕ್ಕೆ ಮರಳಿದರು. ಆದರೆ, ಮನೆಗೆ ಹಿಂತಿರುಗಿ, ತನ್ನ ಪತಿಯೊಂದಿಗೆ ಭಿನ್ನಾಭಿಪ್ರಾಯವನ್ನು ಹೇಳಿಕೊಂಡ ಸೀಮಾ, ಪಾಕಿಸ್ತಾನಿ ರೂಪಾಯಿ 12 ಲಕ್ಷ ರೂ. ನಲ್ಲಿ ಒಂದು ಸೈಟ್‌ ಮಾರಾಟ ಮಾಡಿ ತನಗೆ ಮತ್ತು ತನ್ನ ನಾಲ್ಕು ಮಕ್ಕಳಿಗೆ ವಿಮಾನ ಟಿಕೆಟ್ ಮತ್ತು ನೇಪಾಳ ವೀಸಾವನ್ನು ಮಾಡಿಸಿಕೊಂಡಿದ್ದಾರೆ. 

ಮೇ ತಿಂಗಳಲ್ಲಿ ಅವರು ದುಬೈ ಮೂಲಕ ನೇಪಾಳವನ್ನು ತಲುಪಿದರು ಮತ್ತು ನೇಪಾಳದ ಪ್ರವಾಸಿ ನಗರವಾದ ಪೋಖರಾದಲ್ಲಿ ಸ್ವಲ್ಪ ಸಮಯ ಕಳೆದರು. ನಂತರ ಆಕೆ ಕಠ್ಮಂಡುವಿನಿಂದ ದೆಹಲಿಗೆ ಬಸ್ ಹಿಡಿದು ಮೇ 13 ರಂದು ಗ್ರೇಟರ್ ನೋಯ್ಡಾಗೆ ತನ್ನ ಮಕ್ಕಳೊಂದಿಗೆ ತಲುಪಿದಳು. ಅಲ್ಲಿ ಸಚಿನ್ ಮಹಿಳೆಯ ಪಾಕಿಸ್ತಾನಿ ಗುರುತನ್ನು ಬಹಿರಂಗಪಡಿಸದೆ ಬಾಡಿಗೆ ವಸತಿಗೃಹದಲ್ಲಿ ಇರಲು ವ್ಯವಸ್ಥೆ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಪಬ್‌ಜಿ ಪ್ರಿಯರಿಗೆ ಡಬಲ್ ಖುಷಿ, ಮೊಬೈಲ್ ಗೇಮ್ ರಿ ಲಾಂಚ್‌ಗೆ ಸರ್ಕಾರ ಅನುಮತಿ!

ಈ ಹಿನ್ನೆಲೆ, ಜುಲೈ 4 ರಂದು ಅವರನ್ನು ಬಂಧಿಸಿ ಜೈಲಿಗೆ ಹಾಕಲಾಯ್ತು. ಸೀಮಾ ವಿರುದ್ಧ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಆರೋಪ ಹೊರಿಸಿದ್ದರೆ, ಸಚಿನ್ ಮೇಲೆ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ ಆರೋಪ ಹೊರಿಸಲಾಗಿತ್ತು.

ನಿನ್ನೆ, ಸೀಮಾ ಅವರಿಗೆ ಜಾಮೀನು ನೀಡಲಾಯಿತು ಮತ್ತು ಈಗ ಅವರು ಭಾರತಕ್ಕೆ ಅಧಿಕೃತವಾಗಿ ತೆರಳಲು ದಾಖಲೆಗಳ ಮೇಲೆ ಕೇಂದ್ರೀಕರಿಸುತ್ತಾರೆ ಎಂದು ತಿಳಿದುಬಂದಿದೆ. ಇನ್ನು, ತನ್ನ ಬಿಡುಗಡೆಯ ಕುರಿತು ಮಾತನಾಡಿದ ಸೀಮಾ, "ಸುದ್ದಿ ಕೇಳಿದಾಗ ನಾನು ಸಂತೋಷದಿಂದ ಕೂಗಾಡಿದೆ. ನಾನು ತಿಂಗಳುಗಟ್ಟಲೆ ಜೈಲಿನಲ್ಲಿ ಇರುತ್ತೇನೆ ಎಂದು ಭಾವಿಸಿದ್ದೆ" ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಭೂತದ ಬಾಯಲ್ಲಿ ಭಗವದ್ಗೀತೆ! PUBG-TikTokನಿಂದ ಯುವಸಮೂಹ ಹಾಳು, ಬ್ಯಾನ್‌ ಮಾಡಿದ ಅಫ್ಘಾನಿಸ್ತಾನ

ಸೀಮಾ ಅವರ ಮೊದಲ ಪತಿ ಗುಲಾಮ್ ಹೈದರ್ ಅವರು ತಮ್ಮ ಪತ್ನಿಯೊಂದಿಗೆ ಮತ್ತೆ ಒಂದಾಗಲು ಸಹಾಯ ಮಾಡುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆದರೆ, ಗುಲಾಮ್ ಹೈದರ್ ಬಳಿಗೆ ಹಿಂತಿರುಗಲು ಬಯಸುವುದಿಲ್ಲ ಎಂದು ಸೀಮಾ ಹೇಳಿಕೊಂಡಿದ್ದು, ಅಲ್ಲಿ ತನಗೆ ಜೀವ ಬೆದರಿಕೆ ಇದೆ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ. 

click me!