ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರ ಕೊರೋನಾ ವೈರಸ್ ಆತಂಕ ಹೆಚ್ಚಿಸಿದೆ. ಪತ್ತೆಯಾಗಿರುವ ಹೊಸ ಕೊರೋನಾ ವೈರಸ್ ಅತೀ ವೇಗದಲ್ಲಿ ಹರಡುವಿಕೆ ಸಾಮರ್ಥ್ಯ ಹೊಂದಿದೆ. ಇದೀಗ ಹೊಸ ಕೊರೋನಾ ಭಾರತದಲ್ಲೂ ಆತಂಕ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಯುಕೆಯಿಂದ ಭಾರತಕ್ಕೆ ಬಂದಿಳಿದವರ ಪೈಕಿ 13 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ.
ನವದೆಹಲಿ(ಡಿ.22): ಹೊಸ ಕೊರೋನಾ ವೈರಸ್ ಪತ್ತೆಯಾಗಿರುವ ಕಾರಣ ಭಾರತದಲ್ಲಿ ಅಲರ್ಟ್ ಘೋಷಿಸಲಾಗಿದೆ. ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಿದ ಬೆನ್ನಲ್ಲೇ ಮತ್ತೊಂದು ಆಘಾತ ಎದುರಾಗಿದೆ. ಯುನೈಟೆಡ್ ಕಿಂಗ್‌ಡಮ್‌ನಿಂದ ಆಗಮಿಸಿದ ಪ್ರಯಾಣಿಕರ ಪೈಕಿ 13 ಮಂದಿಯಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ.
undefined
ಒಂದೂವರೆ ತಿಂಗಳಲ್ಲಿ ಹೊಸ ಕೊರೋನಾ ವೈರಸ್‌ಗೂ ಲಸಿಕೆ ಸಿದ್ಧ; ಬಯೋNಟೆಕ್!.
ಈ 13 ಮಂದಿಯಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರಗೊಂಡಿರುವ ಕೊರೋನಾ ವೈರಸ್ ಅನ್ನೋದು ಇನ್ನು ದೃಢಪಟ್ಟಿಲ್ಲ. ಈ 13 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇದರ ಬೆನ್ನಲ್ಲೇ ಯುನೈಟೆಡ್ ಕಿಂಗ್‌ಡಮ್ ಹಾಗೂ ಯುರೋಪಿಯನ್ ವಿಮಾನಕ್ಕೆ ಭಾರತ ನಿರ್ಬಂಧ ಹೇರಲಾಗಿದೆ. ಇಂದಿನಿಂದ(ಡಿ.22)ಡಿಸೆಂಬರ್ 31ರ ವರೆಗೆ ಯುಕೆ ವಿಮಾನ ಬ್ಯಾನ್ ಮಾಡಲಾಗಿದೆ.
ಲಂಡನ್‌ನಿಂದ ಬೆಂಗಳೂರಿಗೆ ಬಂತಾ ರೂಪಾಂತರಿ ವೈರಸ್.. ಮಹಿಳೆ ತಂದ ಆತಂಕ!..
ಯುಕೆಯಿಂದ ಅಹಮ್ಮದಾಬಾದ್‌ಗೆ ಬಂದಿಳಿದ 275 ಪ್ರಯಾಣಿಕರ ಪೈಕಿ ಐವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಲಂಡನ್-ದೆಹಲಿ ವಿಮಾನದಲ್ಲಿದ್ದ ಐವರಲ್ಲೂ ಕೊರೋನಾ ಕಾಣಿಸಿಕೊಂಡಿದೆ. ಯುಕೆಯಿಂದ ಕೋಲ್ಕತಾಗೆ ಬಂದಿಳಿದ ಇಬ್ಬರು ಪ್ರಯಾಣಿಕರಲ್ಲಿ ಕೊರೋನಾ ಕಾಣಿಸಿಕೊಂಡಿದೆ.
ಇತ್ತೀಚೆಗೆ ಯುಕೆಯಿಂದ ಭಾರತಕ್ಕೆ ಆಗಮಿಸಿದ ಐವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಹೋಮ್ ಐಸೋಲೇಶನ್‌ಗೆ ಸೂಚಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ಸೇರಿದಂತೆ ದೇಶದ ಎಲ್ಲಾ ವಿಮಾನ ನಿಲ್ದಾಣಗಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಯುಕೆ, ಯೂರೋಪಿಯನ್ ರಾಷ್ಟ್ರಗಳಿಂದ ಭಾರತಕ್ಕೆ ಆಗಮಿಸುವವರ ಕೊರೋನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕಿದೆ.