ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದವರಿಗೆ ಕೊರೊನಾ ಸೋಂಕು| ತಮಿಳುನಾಡಿನ ಚೆನ್ನೈ ನಲ್ಲಿ ಓರ್ವನಿಗೆ ಸೋಂಕು ಪತ್ತೆ| 15 ಮಂದಿ ಯುಕೆಯಿಂದ ಈತನಕ ಚೆನ್ನೈಗೆ ಆಗಮಿಸಿದ್ದಾರೆ
ಚೆನ್ನೈ(ಡಿ.22): ಬ್ರಿಟನ್‌ನಲ್ಲಿ ಭಾರೀ ಆತಂಕ ಸೃಷ್ಟಿಸಿರುವ ಕೊರೋನಾ ಸೋಂಕಿನ ಹೊಸ ಮಾದರಿ ಭಾರತಕ್ಕೂ ಲಗ್ಗೆ ಇಟ್ಟಿದೆ. ಹೌದು ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದಿರುವ ಒಬ್ಬನಲ್ಲಿ ಈ ಸೋಂಕು ಪತ್ತೆಯಾಗಿದೆ.
ಈವರೆಗೆ ಒಟ್ಟು 15 ಮಂದಿ ಯುಕೆಯಿಂದ ಚೆನ್ನೈಗೆ ಆಗಮಿಸಿದ್ದಾರೆ. ಆದರೀಗ ಇವರಲ್ಲಿ ಒಬ್ಬಾತನಿಗೆ ಹೊಸ ಮಾದರಿಯ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
ಹೀಗಿದ್ದರೂ ಇವರೆಲ್ಲರನ್ನೂ ಪ್ರತ್ಯೇಕವಾಗಿಸಲಾಗಿದೆ ಎಂದ ತಮಿಳುನಾಡಿನ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಬೆಂಗಳೂರಿಗೂ ಪ್ರಯಾಣಿಕರು
ಇನ್ನು ಬೆಂಗಳೂರಿಗೂ 138 ಮಂದಿ ಬ್ರಿಟನ್‌ನಿಂದ ಆಗಮಿಸಿದ್ದು, ಇವರನ್ನು ತಪಾಸಣೆ ನಡೆಸುವ ನಿಟ್ಟಿನಲ್ಲಿ ಬಿಬಿಎಂಪಿ ಪ್ರತ್ಯೇಕ ತಂಡವನ್ನು ರಚಿಸಿದೆ.