ಭಾರತದಲ್ಲಿ ಏಳಕ್ಕೆರಿದ HMPV ಕೇಸ್, ನಿಜವಾಗುತ್ತಾ ಬಾಬಾ ವಂಗಾ, ನಾಸ್ಟ್ರಡಾಮಸ್ ಭವಿಷ್ಯ?

By Chethan Kumar  |  First Published Jan 7, 2025, 1:11 PM IST

ಭಾರತದಲ್ಲಿ HMPV ಪ್ರಕರಣ ಸಂಖ್ಯೆ ಎರಡೇ ದಿನದಲ್ಲಿ 7ಕ್ಕೇರಿದೆ. ಬೆಂಗಳೂರಲ್ಲಿ 2 ಪ್ರಕರಣ ಪತ್ತೆಯಾಗುವ ಮೂಲಕ ಆರಂಭಗೊಂಡ ವೈರಸ್ ಪ್ರಕರಣ ಇದೀಗ 7 ಪ್ರಕರಣಗಳು ಖಚಿತಗೊಂಡಿದೆ. ಇದರ ಬೆನ್ನಲ್ಲೇ ಬಾಬಾ ವಂಗಾ ಹಾಗಾ ನಾಸ್ಟ್ರಡಾಮಸ್ ನುಡಿದ ಭವಿಷ್ಯ ನಿಜವಾಗುತ್ತಾ ಅನ್ನೋ ಚರ್ಚೆಗಳು ಶುರುವಾಗಿದೆ.


ನವದೆಹಲಿ(ಜ.07) ಭಾರತದಲ್ಲಿ ಹ್ಯೂಮನ್ ಮೆಟಾನ್ಯೂಮೋವೈರಸ್ ಪ್ರಕರಣ ಸಂಖ್ಯೆ ಏಳಕ್ಕೆರಿದೆ. ಬೆಂಗಳೂರಿನಲ್ಲಿ 2 ಪ್ರಕರಣ ಪತ್ತೆಯಾಗುವ ಮೂಲಕ ಆರಂಭಗೊಂಡಿದ್ದ ಈ ವೈರಸ್ ಇದೀಗ ಎರಡೇ ದಿನಕ್ಕೆ 7ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಮತ್ತೆರೆಡು ಪ್ರಕರಣ ಪತ್ತೆಯಾಗುವ ಮೂಲಕ ಒಟ್ಟು ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ನಾಗ್ಪುರದಲ್ಲೂ ಮಕ್ಕಳಲ್ಲಿ ಈ HMPV ಪತ್ತೆಯಾಗಿದೆ. 7 ವರ್ಷ ಹಾಗೂ 14 ವರ್ಷದ ಇಬ್ಬರಲ್ಲಿ ಪ್ರಕರಣ ಪತ್ತೆಯಾಗಿದೆ. ನಾಗ್ಪುರದ 2 ಪ್ರಕರಣಗಳ ಮಾದರಿ ಸಂಗ್ರಹಿಸಿ ಏಮ್ಸ್ ವಿರೋಲಜಿ ವಿಭಾಗಕ್ಕೆ ಕಳುಹಿಸಲಾಗಿದೆ.  ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇದೀಗ 2025ರ ಕುರಿತು ಖ್ಯಾತ ಭವಿಷ್ಯಕಾರರಾದ ಬಾಬಾ ವಂಗಾ ಹಾಗೂ ನಾಸ್ಟ್ರಡಾಮಸ್ ನುಡಿದ ಭವಿಷ್ಯ ನಿಜವಾಗುತ್ತಾ ಅನ್ನೋ ಚರ್ಚೆ ಶುರುವಾಗಿದೆ.

ಚೀನಾದ ಕೆಲ ಪ್ರಾಂತ್ಯದಲ್ಲಿ HMPV ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಚೀನಾ ಕೋವಿಡ್ ಸಂದರ್ಭದಲ್ಲಿ ಎದುರಿಸಿದ ಪರಿಸ್ಥಿತಿಯನ್ನು ಕೆಲ ಪ್ರದೇಶದಲ್ಲಿ ಎದುರಿಸುತ್ತಿದೆ. ಚೀನಾದ ಆಸ್ಪತ್ರೆಗಳು ಭರ್ತಿಯಾಗುತ್ತಿದೆ. ಚೀನಾದ HMPV ಆತಂಕ ಹೆಚ್ಚಾಗುತ್ತಿದಂತೆ ಇದೀಗ ಭಾರತದಲ್ಲಿ HMPV ಪ್ರಕರಣ ಪತ್ತೆಯಾಗಿದೆ. ಆದರೆ ಭಾರತದಲ್ಲಿ ಪತ್ತೆಯಾಗಿರುವ HMPV ಪ್ರಕರಣದಿಂದ ಆಂತಕ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. 

Tap to resize

Latest Videos

ಬೆಂಗಳೂರಲ್ಲಿ 2ನೇ HMP ವೈರಸ್ 3 ತಿಂಗಳ ಮಗುವಿನಲ್ಲಿ ಪತ್ತೆ, ಮಾರ್ಗಸೂಚಿ ಪ್ರಕಟ!

ಜ್ವರ, ಶೀತ ಹಾಗೂ ಕೆಮ್ಮು ಸಮಸ್ಯೆಯಿಂದ ನಾಗ್ಪುರದ ಖಾಸಗಿ ಆಸ್ಪತ್ರೆಗೆ ಇಬ್ಬರು ಮಕ್ಕಳು ದಾಖಲಾಗಿದ್ದರು. ಇವರ ಪರೀಕ್ಷಿಸಿದಾಗ HMPV ವೈರಸ್ ಪತ್ತೆಯಾಗಿತ್ತು. ಆದರೆ ಮಾದರಿ ಸಂಗ್ರಹಿಸಿ ಅದರ ಫಲಿತಾಂಶ ಬರುವ ವೇಳೆ ಅಂದರೆ ಇಂದು(ಜ.07) ಇಬ್ಬರು ಮಕ್ಕಳು ಗುಣಮುಖರಾಗಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಪತ್ತೆಯಾದ 2 ಪ್ರಕರಣಗಳಲ್ಲಿ 3 ತಿಂಗಳ ಮಗು ಈಗಾಗಲೆ ಆಸ್ಪತ್ರೆಯಿಂದ  ಬಿಡುಗಡೆಯಾಗಿದೆ. ಇನ್ನು 8 ತಿಂಗಳ ಮಗು ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಭಾರತದಲ್ಲಿ ಪತ್ತೆಯಾಗಿರುವ ಈ ವೈರಸ್‌ನಿಂದ ಯಾವುದೇ ಆತಂಕವಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಇಷ್ಟೇ ಅಲ್ಲ ಇದು ಕೋವಿಡ್ ರೀತಿಯ ಯಾವುದೇ ಪರಿಣಾಮ ಸೃಷ್ಟಿಸುವುದಿಲ್ಲ ಎಂದಿದೆ.

2025ರ ಭವಿಷ್ಯ ಏನು ಹೇಳುತ್ತಿದೆ.
ಖ್ಯಾತ ಭವಿಷ್ಯಕಾರರಾದ ಬಾಬಾ ವಂಗಾ ಹಾಗೂ ನಾಸ್ಟ್ರಡಾಮಸ್ ಹೇಳಿರುವ 2025ರ ಸಾಲಿನ ಭವಿಷ್ಯದಲ್ಲಿ ಕೆಲ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಜಗತ್ತಿನ ಹಲವು ಭಾಗದಲ್ಲಿ ಹಲವು ದೇಶಗಳು ಯುದ್ಧದಲ್ಲಿ ತೊಡಗಿಸಿಕೊಳ್ಳುತ್ತದೆ. ಇದರಿಂದ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಲಿದೆ. ಯುದ್ಧ ಹಲವು ದೇಶಗಳ ನಾಶ ಮಾಡಲಿದೆ. ಜನಸಾಮಾನ್ಯರು ಸಮಸ್ಯೆಗೆ ಸಿಲುಕುತ್ತಾರೆ ಎಂದಿದ್ದಾರೆ. ಇದರ ಜೊತೆಗೆ 2025ರಲ್ಲಿ ಕೆಲ ಆರೋಗ್ಯ ಸಮಸ್ಯೆಗಳು, ಸಾಂಕ್ರಾಮಿಕ ರೋಗಗಳು ಕಾಡಲಿದೆ ಎಂದಿದ್ದಾರೆ. ಕೋವಿಡ್ ರೀತಿಯ ಸಾಂಕ್ರಾಮಿಕ ರೋಗ ಎಂದು ಸ್ಪಷ್ಟವಾಗಿ ಎಲ್ಲೂ ಉಲ್ಲೇಖವಾಗಿಲ್ಲ. ಆದರೆ ಜನರ ಆರೋಗ್ಯವನ್ನು ಹದಗೆಡಿಸುವ ರೋಗಗಳು ಬಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇಬ್ಬರು ಭವಿಷ್ಯಕಾರರು ರೋಗಗಳ ಕುರಿತು ಉಲ್ಲೇಖಿಸಿದ್ದಾರೆ. ಇಡೀ ಜಗತ್ತೇ ಈ ರೀತಿಯ ರೋಗಗಳಿಂದ ಸಮಸ್ಯೆಗೆ ಸಿಲುಕಲಿದೆ ಎಂದು ಭವಿಷ್ಯ ಹೇಳಿದ್ದಾರೆ. ಇದೀಗ ನಾಸ್ಟ್ರಡಾಮಸ್ ಹಾಗೂ ಬಾಬಾ ವಂಗಾ ನುಡಿದ ಭವಿಷ್ಯ ಇದೀಗ ಕಾಣಿಸಿಕೊಳ್ಳುತ್ತಿರುವ HMPV ವೈರಸ್ ಕುರಿತಾಗಿತ್ತಾ ಅನ್ನೋ ಪ್ರಶ್ನೆಗಳು ಉದ್ಭವಿಸಿದೆ.

HMPV ವೈರಸ್ ಕುರಿತು ಕೇಂದ್ರ ಹಾಗೂ ಕರ್ನಾಟಕ ಆರೋಗ್ಯ ಇಲಾಖೆಗಳು ಮಾರ್ಗಸೂಚಿ ಪ್ರಕಟಿಸಿದೆ. ಜನಸಂದಣಿ ಪ್ರದೇಶಗಳಿಂದ ದೂರವಿರಿ ಎಂದು ಸೂಚಿಸಿದೆ. ಶುಚಿತ್ವಕ್ಕೆ ಹೆಚ್ಚಿನ ಆದ್ಯತ ನೀಡಲು ಸೂಚಿಸಿದೆ.ಕೈಗಗಳನ್ನು ಸೋಪಿನಿಂದ ಅಥವಾ ಸ್ಯಾನಿಟೈಸರ್‌ನಿಂದ ತೊಳೆಯಲು ಸೂಚಿಸಿದೆ. ಕೆಮ್ಮುವಾಗಿ ಮೂಗು, ಬಾಯಿ ಮುಚ್ಚಿಕೊಳ್ಳಲು ಸೂಚಿಸಲಾಗಿದೆ. HMPV  ಯಾವುದೇ ರೋಗಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಲು ಸೂಚಿಸಿದ್ದಾರೆ.

ಬೆಂಗಳೂರಲ್ಲಿ 8 ತಿಂಗಳ ಮಗುವಿನಲ್ಲಿ HMPV ವೈರಸ್ ಪತ್ತೆ, ಭಾರತದಲ್ಲಿ ಮೊದಲ ಪ್ರಕರಣ
 

click me!