ನಮ್ಮದೇ ಗ್ಯಾರಂಟಿಗಳಿಂದ ರೈತರ ಸಾಲ ಮನ್ನಾ ವಿಳಂಬವಾಗಿದೆ: ಸಚಿವ

Published : Jan 07, 2025, 07:22 AM IST
ನಮ್ಮದೇ ಗ್ಯಾರಂಟಿಗಳಿಂದ ರೈತರ ಸಾಲ ಮನ್ನಾ ವಿಳಂಬವಾಗಿದೆ: ಸಚಿವ

ಸಾರಾಂಶ

ಕರ್ನಾಟಕದ ಗೃಹ ಲಕ್ಷ್ಮೀ ಯೋಜನೆ ರೀತಿ ಮಹಾರಾಷ್ಟ್ರದ ಲಡ್ಕಿ ಬಹೆನ್‌ ಯೋಜನೆಯಿಂದಾಗಿ ರೈತರ ಸಾಲಮನ್ನ ವಿಳಂಬವಾಗುತ್ತಿದೆ ಎಂದು ಮಹಾರಾಷ್ಟ್ರ ಸಚಿವರೊಬ್ಬರು ಹೇಳಿದ್ದಾರೆ.

ಮುಂಬೈ: ಕರ್ನಾಟಕದ ಗೃಹ ಲಕ್ಷ್ಮೀ ಯೋಜನೆ ರೀತಿ ಮಹಾರಾಷ್ಟ್ರದ ಲಡ್ಕಿ ಬಹೆನ್‌ ಯೋಜನೆಯಿಂದಾಗಿ ರೈತರ ಸಾಲಮನ್ನ ವಿಳಂಬವಾಗುತ್ತಿದೆ ಎಂದು ಮಹಾರಾಷ್ಟ್ರ ಸಚಿವರೊಬ್ಬರು ಹೇಳಿದ್ದಾರೆ.ಈ ಬಗ್ಗೆ ಮಾತನಾಡಿದ ಸಚಿವ ಮಾಣಿಕ್‌ರಾವ್‌ ಕೊಕಾಟೆ, ಮಹಿಳೆಯರಿಗೆ ತಿಂಗಳಿಗೆ 1500 ರು. ಭತ್ಯೆ ನೀಡುವ ಯೋಜನೆಯಿಂದಾ ಬೊಕ್ಕಸಕ್ಕೆ ಸ್ವಲ್ಪ ಹೊರೆಯಾಗಿದೆ. ಇದರಿಂದ ಚುನಾವಣೆ ಮುನ್ನ ಮಹಾಯುತಿ ಕೂಟ ಘೋಷಿಸಿದ್ದ ರೈತರ ಸಾಲ ಮನ್ನಾ ಸ್ವಲ್ಪ ಕಾಲ ವಿಳಂಬವಾಗುತ್ತಿದೆ. ಒಮ್ಮೆ ಆದಾಯ ಒಳಹರಿವಾದ ಬಳಿಕ ರೈತರ ಸಾಲ ಮನ್ನ ಮಾಡಲಾಗುತ್ತದೆ ಎಂದು ತಿಳಿಸಿದರು. 
ಲಡ್ಕಿ ಬಹೆನ್‌ ಯೋಜನೆಯು ಮಹಿಳೆಯರಿಗೆ ತಿಂಗಳಿಗೆ 1500 ರು. ಮಾಸಾಶನ ನೀಡುವ ಯೋಜನೆಯಾಗಿದೆ.

ದೇಶದಲ್ಲಿ ಮೊದಲ ಬುಲೆಟ್‌ ರೈಲು ಸಂಚರಿಸುವ ಸಮಯ ದೂರವಿಲ್ಲ: ಪ್ರಧಾನಿ ನರೇಂದ್ರ ಮೋದಿ

 ನವದೆಹಲಿ : ‘ಭಾರತದಲ್ಲಿ ಮೊದಲ ಬುಲೆಟ್‌ ರೈಲು ಸಂಚರಿಸುವ ಸಮಯ ದೂರವಿಲ್ಲ. ಇದು ಐತಿಹಾಸಿಕ ಬದಲಾವಣೆ ಆಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಹಾಗೂ ಜನರ ಬಹುಬೇಡಿಕೆಯ ಹೈಸ್ಪೀಡ್‌ ರೈಲು ಸಂಚಾರ ಸಾಕಾರವಾಗಲಿದೆ ಎಂದು ಭರವಸೆ ನೀಡಿದ್ದಾರೆ. 

ಜಮ್ಮು ರೈಲ್ವೆ ವಿಭಾಗದ ಉದ್ಘಾಟನೆ ಸೇರಿದಂತೆ ದೇಶದ ಹಲವು ರೈಲು ಕಾಮಗಾರಿಗಳಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, ‘ ಜನರು ಹೆಚ್ಚು ದೂರವನ್ನು ಕ್ರಮಿಸಲು ಕಡಿಮೆ ಸಮಯವನ್ನು ಬಯಸುತ್ತಾರೆ. ಇದು ಹೈಸ್ಪೀಡ್‌ ರೈಲು ಸಂಚಾರದ ಬೇಡಿಕೆ ಹೆಚ್ಚಳಕ್ಕೆ ಕಾರಣ. ಈಗಾಗಲೇ 136ಕ್ಕೂ ಹೆಚ್ಚು ರೈಲುಗಳು 50 ಮಾರ್ಗಗಳಲ್ಲಿ ಸಂಚರಿಸುತ್ತಿವೆ. ದೇಶದಲ್ಲಿ ಬುಲೆಟ್‌ ರೈಲುಗಳು ಓಡಾಡುವ ಸಮಯ ದೂರವಿಲ್ಲ. ಭಾರತದ ರೈಲ್ವೆ ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಲಿದೆ.’ ಎಂದರು.

‘ಹೊಸ ವರ್ಷದಲ್ಲಿ ಭಾರತವು ಸಂಪರ್ಕದಲ್ಲಿ ವೇಗ ಪಡೆದುಕೊಂಡಿದೆ. ದೇಶದ ಅನೇಕ ಮಾರ್ಗಗಳಿಗೆ ಹೊಸ ಯುಗದ ಸಂಪರ್ಕದಲ್ಲಿ ಇದು ಪ್ರಮುಖ ದಿನವಾಗಿದೆ. ಇಡೀ ದೇಶ ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌ದತ್ತ ಹೆಜ್ಜೆ ಇಡುತ್ತಿದೆ’ ಎಂದರು.ಇದೇ ವೇಳೆ ಮೋದಿ, ‘ಮೂಲ ಸೌಕರ್ಯಗಳ ಆಧುನೀಕರಣ, ಪ್ರಯಾಣಿಕರಿಗೆ ಆಧುನಿಕ ಸೌಕರ್ಯಗಳನ್ನು ಒದಗಿಸುವುದು, ದೇಶದ ಎಲ್ಲ ಭಾಗಗಳಿಗೆ ಸಂಪರ್ಕವನ್ನು ಹೆಚ್ಚಿಸುವುದು, ಉದ್ಯೋಗ ಮತ್ತು ಉದ್ಯಮವನ್ನು ಬೆಂಬಲಿಸುವುದು- ಇವು ರೈಲು ಕ್ಷೇತ್ರದ ಅಭಿವೃದ್ಧಿಗೆ ಮಾರ್ಗದರ್ಶನ ನೀಡುವ ಯೋಜನೆಗಳು’ ಎಂದು ಹೇಳಿದರು.

ಬಿಹಾರ ಪರೀಕ್ಷಾ ಅಕ್ರಮ: ಉಪವಾಸ ನಿರತ ಪಿಕೆ ಬಂಧನ, ಬೇಲ್‌

ಪಟನಾ: ಬಿಹಾರ ಲೋಕಸೇವಾ ಆಯೋಗದ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಪರೀಕ್ಷೆ ರದ್ದತಿಗೆ ಆಗ್ರಹಿಸಿ ಗಾಂಧಿ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜನ ಸೂರಜ್‌ ಪಕ್ಷದ ಸ್ಥಾಪಕ ಪ್ರಶಾಂತ್‌ ಕಿಶೋರ್‌ರನ್ನು ಸೋಮವಾರ ಬೆಳಿಗ್ಗೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಸಂಜೆ ಅವರಿಗೆ ಜಾಮೀನು ಸಿಕ್ಕಿದೆ.

‘ನಿಷೇಧಿತ ಪ್ರದೇಶದಲ್ಲಿ ಪ್ರಶಾಂತ್‌ ಕಿಶೋರ್ (ಪಿಕೆ) ಮತ್ತು ಅವರ ಬೆಂಬಲಿಗರು ಧರಣಿ ನಡೆಸುತ್ತಿದ್ದರು. ಇದು ಕಾನೂನುಬಾಹಿರ ಆದ್ದರಿಂದ ಅವರನ್ನು ಬಂಧಿಸಲಾಗಿತ್ತು’ ಎಂದು ಪೊಲೀಸರು ಹೇಳಿದ್ದಾರೆ. ಪ್ರಶಾಂತ್‌ ಸತ್ಯಾಗ್ರಹ 5ನೇ ದಿನಕ್ಕೆ ಕಾಲಿಟ್ಟಿತ್ತು. ಡಿ.13ರಂದು ನಡೆದ ಪಿಎಸ್‌ಸಿ ಪರೀಕ್ಷೆ ಪತ್ರಿಕೆ ಸೋರಿಕೆ ಆಗಿತ್ತು.

ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಆರ್ಥಿಕ ಸಮಸ್ಯೆ?: ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು

ಅಭಿವೃದ್ಧಿ ದುಡ್ಡು ಗ್ಯಾರಂಟಿಗೆ, ಸರ್ಕಾರದ ಖಜಾನೆ ಖಾಲಿ ಖಾಲಿ: ಅನುದಾನಕ್ಕೆ ಕುಸ್ತಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!