ಗ್ರೀನ್‌ವಿಚ್‌ಗಿಂತ ಮುನ್ನ ಪ್ರಧಾನಮಧ್ಯರೇಖೆ ಭಾರತದಲ್ಲಿತ್ತು: ಎನ್‌ಸಿಇಆರ್‌ಟಿ ಪುಸ್ತಕ

By Ravi Janekal  |  First Published Jul 22, 2024, 5:43 AM IST

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರೀನ್‌ವಿಚ್‌ ಅನ್ನು ಪ್ರಧಾನ ಮಧ್ಯ ರೇಖೆ ಎಂದು ಪರಿಗಣಿಸಲಾಗಿದೆ. ಆದರೆ ಅದಕ್ಕೂ ಮುನ್ನವೇ ಪ್ರಧಾನ ಮಧ್ಯರೇಖೆ ಭಾರತದಲ್ಲಿತ್ತು. ಅದು ಮಧ್ಯಪ್ರದೇಶದ ಉಜ್ಜಯಿನಿ ಮೂಲಕ ಹಾದು ಹೋಗುತ್ತಿತ್ತು ಎಂದು ಎನ್‌ಸಿಇಆರ್‌ಟಿ ಮುದ್ರಿಸಿರುವ 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.


ಪಿಟಿಐ ನವದೆಹಲಿ (ಜು.22): ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರೀನ್‌ವಿಚ್‌ ಅನ್ನು ಪ್ರಧಾನ ಮಧ್ಯ ರೇಖೆ ಎಂದು ಪರಿಗಣಿಸಲಾಗಿದೆ. ಆದರೆ ಅದಕ್ಕೂ ಮುನ್ನವೇ ಪ್ರಧಾನ ಮಧ್ಯರೇಖೆ ಭಾರತದಲ್ಲಿತ್ತು. ಅದು ಮಧ್ಯಪ್ರದೇಶದ ಉಜ್ಜಯಿನಿ ಮೂಲಕ ಹಾದು ಹೋಗುತ್ತಿತ್ತು ಎಂದು ಎನ್‌ಸಿಇಆರ್‌ಟಿ ಮುದ್ರಿಸಿರುವ 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.

ಗ್ರೀನ್‌ವಿಚ್‌ ಪ್ರಧಾನ ಮಧ್ಯರೇಖೆ ಮೊದಲ ಮಧ್ಯರೇಖೆ ಏನಲ್ಲ. ಅದಕ್ಕಿಂತ ಮೊದಲೇ ಪ್ರಧಾನ ಮಧ್ಯರೇಖೆಗಳು ಇದ್ದವು. ಯುರೋಪ್‌ಗಿಂತ ಹಲವು ಶತಮಾನಗಳ ಮೊದಲೇ ಭಾರತ ತನ್ನದೇ ಆದ ಪ್ರಧಾನ ಮಧ್ಯರೇಖೆಯನ್ನು ಹೊಂದಿತ್ತು. ಅದನ್ನು ‘ಮಧ್ಯ ರೇಖೆ’ ಎಂದು ಕರೆಯಲಾಗುತ್ತಿತ್ತು. ಹಲವಾರು ಶತಮಾನಗಳ ಕಾಲ ಖಗೋಳಶಾಸ್ತ್ರ ಕೇಂದ್ರವಾಗಿದ್ದ ಉಜ್ಜಯಿನಿ ಮೂಲಕ ಪ್ರಧಾನ ಮಧ್ಯರೇಖೆ ಹಾದು ಹೋಗುತ್ತಿತ್ತು. ಪ್ರಸಿದ್ಧ ಖಗೋಳಶಾಸ್ತ್ರಜ್ಞರಾಗಿದ್ದ ವರಹಾಮಿಹಿರ ಅವರು ಅಲ್ಲಿ ಬದುಕಿದ್ದರು. 1500 ವರ್ಷಗಳ ಹಿಂದೆ ಅಲ್ಲಿ ಕೆಲಸ ಮಾಡಿದ್ದರು. ಅಕ್ಷಾಂಶ ಹಾಗೂ ರೇಖಾಂಶ ಪರಿಕಲ್ಪನೆಯ ಬಗ್ಗೆಯೂ ಭಾರತೀಯರಿಗೂ ಗೊತ್ತಿತ್ತು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

Latest Videos

ಇನ್ನು ಡಾ.ಬಿ.ಆರ್‌. ಅಂಬೇಡ್ಕರ್‌ ಅನುಭವಿಸಿದ ತಾರತಮ್ಯದ ಕುರಿತ ಪಠ್ಯದಲ್ಲಿ ಜಾತಿ ಆಧರಿತ ತಾರತಮ್ಯ ಅಂಶ ಕೈಬಿಡಲಾಗಿದೆ. ಜೊತೆಗೆ ಹರಪ್ಪಾ ನಾಗರಿಕತೆಯನ್ನು ಸಿಂಧೂ- ಸರಸ್ವತಿ ನಾಗರಿಕತೆ ಎಂದು ಪ್ರಸ್ತಾಪಿಸಲಾಗಿದೆ.

click me!