Novo Nordisk Awiqli: ವಿಶ್ವದಲ್ಲೇ ಮೊದಲು, ವಾರಕ್ಕೊಮ್ಮೆ ಮಾತ್ರ ನೀಡುವ ಇನ್ಸುಲಿನ್ ಭಾರತದಲ್ಲಿ ಬಿಡುಗಡೆ, ಬೆಲೆ ಕೇವಲ ₹263!!

Kannadaprabha News   | Kannada Prabha
Published : Jul 10, 2026, 06:01 AM IST
India gets world s first once a week insulin All about Novo Nordisk Awiqli

ಸಾರಾಂಶ

ಡೆನ್ಮಾರ್ಕ್‌ನ ಔಷಧ ಕಂಪನಿ ನೊವೊ ನಾರ್ಡಿಸ್ಕ್ ಭಾರತದ ಮಧುಮೇಹಿಗಳಿಗೆ ಸಿಹಿ ಸುದ್ದಿ ನೀಡಿದ್ದು, ನಿತ್ಯದ ಬದಲು ವಾರಕ್ಕೊಮ್ಮೆ ಮಾತ್ರ ಪಡೆಯುವ ಇನ್ಸುಲಿನ್‌ ಇಂಜೆಕ್ಷನ್‌ ಬಿಡುಗಡೆ. ದಿನ ಇಂಜೆಕ್ಷನ್‌ನಿಂದ ಭಯಪಡುವ ಡಯಾಬಿಟಿಸ್‌ ರೋಗಿಗಳು ಇನ್ನು ವರ್ಷಕ್ಕೆ 365ರ ಬದಲು ಕೇವಲ 52 ಇಂಜೆಕ್ಷನ್‌ ಪಡೆದರೆ ಸಾಕು!

  • ವರ್ಷಕ್ಕೆ 365ರ ಬದ್ಲು 52 ಇಂಜೆಕ್ಷನ್‌, ದರ ₹263
  •  ಡೆನ್ಮಾರ್ಕ್‌ ಕಂಪನಿಯಿಂದ ‘ಅವಿಕ್ಲಿ’ ಬಿಡುಗಡೆ

ನವದೆಹಲಿ (ಜು.10): ಡೆನ್ಮಾರ್ಕ್‌ನ ಔಷಧ ಕಂಪನಿ ನೊವೊ ನಾರ್ಡಿಸ್ಕ್ ಭಾರತದ ಮಧುಮೇಹಿಗಳಿಗೆ ಸಿಹಿ ಸುದ್ದಿ ನೀಡಿದ್ದು, ನಿತ್ಯದ ಬದಲು ವಾರಕ್ಕೊಮ್ಮೆ ಮಾತ್ರ ಪಡೆಯುವ ಇನ್ಸುಲಿನ್‌ ಇಂಜೆಕ್ಷನ್‌ ಬಿಡುಗಡೆ ಮಾಡಿದೆ. ದೈನಂದಿನ ಇಂಜೆಕ್ಷನ್‌ನಿಂದ ಭಯಭೀತರಾಗುವ ಡಯಾಬಿಟಿಸ್‌ ರೋಗಿಗಳು ಇನ್ನು ವರ್ಷಕ್ಕೆ 365ರ ಬದಲು ಕೇವಲ 52 ಇಂಜೆಕ್ಷನ್‌ಗಳನ್ನು ಪಡೆದರೆ ಸಾಕಾಗಲಿದೆ.

ಜಗತ್ತಿನ ಮೊದಲ ವಾರಕ್ಕೊಮ್ಮೆ ಬಳಸುವ ಇನ್ಸುಲಿನ್ ಇಂಜೆಕ್ಷನ್!

ನೊವೊ ನಾರ್ಡಿಸ್ಕ್ ಭಾರತದಲ್ಲಿ ಇನ್ಸುಲಿನ್ ‘ಅವಿಕ್ಲಿ’ಯನ್ನು (ಇನ್ಸುಲಿನ್ ಐಕೋಡೆಕ್) ಬಿಡುಗಡೆ ಮಾಡಿದೆ. ಇದು ಜಗತ್ತಿನ ಮೊದಲ ವಾರಕ್ಕೊಮ್ಮೆ ಬಳಸುವ ಬೇಸಲ್ ಇನ್ಸುಲಿನ್ ಆಗಿದ್ದು, ಭಾರತವು ಇದನ್ನು ಪಡೆದ 6ನೇ ದೇಶವಾಗಿದೆ. ಈ ಇಂಜೆಕ್ಷನ್‌ಗಳು ಡೆನ್ಮಾರ್ಕ್‌ನಲ್ಲಿ ತಯಾರಾಗಲಿದ್ದು, ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ.

ಇನ್ಸುಲಿನ್ ‘ಅವಿಕ್ಲಿ ಪಡೆಯಲು ಎಷ್ಟು ಖರ್ಚು?

ವಯಸ್ಕರ ಟೈಪ್-1 ಮತ್ತು ಟೈಪ್-2 ಡಯಾಬಿಟಿಸ್ ಎರಡಕ್ಕೂ ಅವಿಕ್ಲಿಗೆ ಅನುಮೋದನೆ ದೊರಕಿದೆ. ಫ್ಲೆಕ್ಸ್‌ಟಚ್‌ ಎಂಬ ಪೆನ್‌ ಮೂಲಕ ಈ ಇಂಜೆಕ್ಷನ್‌ ಪಡೆಯಬಹುದಾಗಿದೆ. 1 ಮಿ.ಲೀ. ಫ್ಲೆಕ್ಸ್‌ಟಚ್ ಪೆನ್‌ನಲ್ಲಿ 700 ಯೂನಿಟ್ ಇನ್ಸುಲಿನ್ ಇರುತ್ತದೆ. ಅದರ ಬೆಲೆ 2,611 ರು. ಆಗಿದೆ. ಇದೇ ರೀತಿ 3 ಮಿ.ಲೀ. ಪೆನ್‌ನಲ್ಲಿ 2,100 ಯೂನಿಟ್ ಇದ್ದು, ಅದರ ಬೆಲೆ 7,833 ರು. ಆಗಿದೆ. ಸಾಮಾನ್ಯ ವಾರದ ಡೋಸ್ ಸುಮಾರು 70 ಯೂನಿಟ್ ಆಗಿರುವುದರಿಂದ, ಒಬ್ಬ ರೋಗಿಗೆ ವಾರಕ್ಕೆ ಸುಮಾರು 261-263 ರು. ವೆಚ್ಚವಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲಕ್ಷ, ಲಕ್ಷ ಹಣ ಕೊಟ್ಟು ಇಂಜಿನಿಯರಿಂಗ್‌ ಓದಿದ್ದೆಲ್ಲ ವೇಸ್ಟ್;‌ 10-15 ಸಾವಿರಕ್ಕೂ ಸಿಗದ IT JOB; ಕಾರಣ ಏನು?
ರೈಲಿನಲ್ಲೇ ಹನಿಮೂನ್‌ ಮಾಡೋ ಕನಸು ಕಂಡಿದ್ದ ಜೋಡಿಗೆ ಶಾಕ್​: ಅಲಂಕಾರಕ್ಕೆ ಅವಕಾಶ- ಅಧಿಕಾರಿಗಳು ಸಸ್ಪೆಂಡ್​