ಕೋವಿಡ್, ರೂಪಾಂತರಿ ತಳಿಗಳಾದ ಒಮಿಕ್ರಾನ್ ಸೇರಿದಂತೆ ಇತರ ತಳಿಗಳು ನಿಯಂತ್ರಣವಾಗುತ್ತಿದ್ದಂತೆ ಭಾರತ ಸಹಜ ಸ್ಥಿತಿಯತ್ತ ಮರಳಿದೆ. ಎಲ್ಲಾ ಕಠಿಣ ನಿಯಮಗಳನ್ನು ತೆರವುಗೊಳಿಸಲಾಗಿದೆ. ಕಳೆದೆರಡು ವರ್ಷದಿಂದ ನಿರ್ಬಂಧಿಸಲಾಗಿದ್ದ ಹಲವು ಆಚರಣೆಗಳು ಮತ್ತೆ ಆರಂಭಗೊಂಡಿದೆ. ಇದರ ನಡುವೆ ಭಾರತದಲ್ಲಿ ಒಮಿಕ್ರಾನ್ BA.7 ಹಾಗೂ BA.5.1.7 ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಇದೀಗ ಮೊದಲ ಒಮಿಕ್ರಾನ್ BQ.1 ಪ್ರಕರಣ ಪತ್ತೆಯಾಗಿದೆ.
ನವದೆಹಲಿ(ಅ.18): ಭಾರತದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಒಮಿಕ್ರಾನ್ ಸೇರಿದಂತೆ ಇತರ ಪ್ರಕರಣಗಳು ಕೂಡ ನಿಯಂತ್ರಣದಲ್ಲಿದೆ. ಹೀಗಾಗಿ ಭಾರತದಲ್ಲಿ ಎಲ್ಲಾ ಹಬ್ಬ, ಸಮಾರಂಭ, ರ್ಯಾಲಿ ನಡೆಯುತ್ತಿದೆ. ಎಲ್ಲಾ ನಿರ್ಬಂಧಗಳು ತೆರವುಗೊಳಿಸಲಾಗಿದೆ. ಜನರು ಯಾವುದೇ ಆತಂಕವಿಲ್ಲದೆ ಓಡಾಡುತ್ತಿದ್ದಾರೆ. ಈಗಾಗಲೇ ವಿಜ್ರಂಭಣೆಯಿಂದ ದಸರಾ ಹಬ್ಬ ಆಚರಿಸಿದ್ದಾರೆ. ಇದೀಗ ದೀಪಾವಳಿ ಹಬ್ಬಕ್ಕೆ ಸಜ್ಜಾಗುತ್ತಿರುವ ಭಾರತೀಯರಿಗೆ ಕೊರೋನಾ ಮತ್ತೆ ಹಾವಳಿ ನೀಡುವ ಸಾಧ್ಯತೆಗಳು ಕಾಣಿಸುತ್ತಿದೆ. ಇತ್ತೀಚೆಗೆ ಗುಜಾರಾತ್ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರದಲ್ಲಿ ಒಮಿಕ್ರಾನ್ BA.7 ಹಾಗೂ BA.5.1.7 ತಳಿ ಪತ್ತೆಯಾಗಿತ್ತು. ಈ ಮೂಲಕ ಆತಂಕ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಭಾರತದಲ್ಲಿ ಮೊದಲ ಒಮಿಕ್ರಾನ್ ಉಪತಳಿ BQ.1 ಪ್ರಕರಣ ಪತ್ತೆಯಾಗಿದೆ. ಪುಣೆಯಲ್ಲಿ ಈ ಪ್ರಕರಣ ಪತ್ತೆಯಾಗಿದ್ದು, ಇದೀಗ ಮತ್ತೆ ಮಹಾರಾಷ್ಟ್ರದಲ್ಲಿ ಆತಂಕ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ಉಪತಳಿ BQ.1 ಪ್ರಕರಣ ಮಾತ್ರವಲ್ಲ, ಮಹಾರಾಷ್ಟ್ರದಲ್ಲಿ ಈ ವಾರ 17.1 ಶೇಕಡಾ ಕೊರೋನಾ ಪ್ರಕರಣಗಳು ಏರಿಕೆಯಾಗಿದೆ. ಇದರ ಬೆನ್ನಲ್ಲೇ ಹೊಸ ಹೊಸ ತಳಿಗಳು ಪತ್ತೆಯಾಗುತ್ತಿರುವುದು ಆತಂಕ ಹೆಚ್ಚಿಸಿದೆ.
ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಕೋವಿಡ್ ಹಾಗೂ ಉಪತಳಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಚಳಿಗಾಲದಲ್ಲಿ ಎಚ್ಚರ ತಪ್ಪಿದರೆ ಭಾರತಕ್ಕೆ ಮತ್ತೊಂದು ಗಂಡಾಂತರ ಎದುರಾಗಬುಹುದು ಎಂದು ಮಹಾರಾಷ್ಟ್ರ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಪುಣೆ, ಮುಂಬೈ, ರಾಯ್‌ಘಡ್, ಥಾಣೆ ಭಾಗಗಳಲ್ಲಿ ಒಮಿಕ್ರಾನ್ ಉಪತಳಿಗಳ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ.
ಮಾಸ್ಕ್ ಹಾಕ್ಕೊಳ್ಳಿ, ಹರಡ್ತಿದೆ ಡೇಂಜರಸ್ ಓಮಿಕ್ರಾನ್ ರೂಪಾಂತರ BF.7 ತಳಿ
ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವಿಟಿ ದರ ಏರಿಕೆ!
ನಗರದಲ್ಲಿ ಸೋಮವಾರ 84 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಪಾಸಿಟಿವಿಟಿ ದರ ಶೇಕಡ 5.58 ದಾಖಲಾಗಿದೆ. 41 ಜನರು ಗುಣಮುಖರಾಗಿದ್ದು, ಸೋಂಕಿನಿಂದ ಮೃತಪಟ್ಟಬಗ್ಗೆ ವರದಿಯಾಗಿಲ್ಲ. ನಗರದಲ್ಲಿ ಸದ್ಯ 2678 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 8 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಎಚ್‌ಡಿಯು ಮತ್ತು 7 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 796 ಮಂದಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು, 94 ರಾರಯಪಿಡ್ ಪರೀಕ್ಷೆಗೆ ಮತ್ತು 702 ಮಂದಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದರು. 80 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದು ಕೊಂಡಿದ್ದಾರೆ. 18 ಮಂದಿ ಮೊದಲ ಡೋಸ್, 18 ಮಂದಿ ಎರಡನೇ ಡೋಸ್ ಮತ್ತು 44 ಮಂದಿ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಭಾರತದಲ್ಲಿ ಅತೀ ವೇಗವಾಗಿ ಹರಡುವ, ಅಪಯಕಾರಿ ಹೊಸ ಒಮಿಕ್ರಾನ್ ಉಪತಳಿ ಪತ್ತೆ, ಹೈ ಅಲರ್ಟ್!
2060 ಹೊಸ ಕೋವಿಡ್ ಕೇಸು, 10 ಜನರ ಸಾವು
ಸೋಮವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳಲ್ಲಿ ಒಟ್ಟು 2,060 ಹೊಸ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 10 ಸೋಂಕಿತರು ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 26,834 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ 4.46 ಕೋಟಿ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೈನಂದಿನ ಪಾಸಿಟಿವಿಟಿ ದರ ಶೇ.1.86 ರಷ್ಟಿದೆ. ಚೇತರಿಕೆಯ ಪ್ರಮಾಣವು 98.75 ರಷ್ಟಿದ್ದು, ದೇಶದಲ್ಲಿ ಈವರೆಗೆ 219.33 ಕೋಟಿ ಕೋವಿಡ್ ಡೋಸ್ಗಳ ವಿತರಣೆಯಾಗಿದೆ.