ಗುಡ್‌ ನ್ಯೂಸ್: ಭಾರತದ ಮೊದಲ ಕೊರೋನಾ ಔಷಧ ಸಿದ್ಧ!

By Kannadaprabha News  |  First Published Jun 30, 2020, 8:11 AM IST

ವಿಶ್ವದಲ್ಲಿ 1 ಕೋಟಿಗೂ ಹೆಚ್ಚು ಜನರಿಗೆ ಕಾಡಿರುವ ಕೊರೋನಾ ವೈರಸ್| ಭಾರತದ ಮೊದಲ ಕೊರೋನಾ ಔಷಧದ ಮಾನವ ಪ್ರಯೋಗಕ್ಕೆ ಕೇಂದ್ರ ಸರ್ಕಾರದ ಅನುಮತಿ| 


ನವದೆಹಲಿ(ಜೂ.30): ವಿಶ್ವದಲ್ಲಿ 1 ಕೋಟಿಗೂ ಹೆಚ್ಚು ಜನರಿಗೆ ಕಾಡಿರುವ ಕೊರೋನಾ ವೈರಸ್‌ಗೆ ಭಾರತದಲ್ಲೂ ಔಷಧವೊಂದನ್ನು ಸಿದ್ಧಪಡಿಸಲಾಗಿದೆ.

ಭಾರತದ ಭಾರತ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ ಎಂಬ ಔಷಧವನ್ನು ಮಾನವರ ಮೇಲೆ ಪ್ರಯೋಗ ಮಾಡಲು ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ ಒಪ್ಪಿಗೆ ನೀಡಿದೆ. ಈ ಒಪ್ಪಿಗೆ ಪಡೆದ ದೇಶದ ಮೊದಲ ಲಸಿಕೆ ಇದಾಗಿದೆ. ಮಾನವರ ಮೇಲೆ ಮೊದಲ ಮತ್ತು ಎರಡನೇ ಹಂತದ ಪ್ರಯೋಗ ನಡೆಸಲು ಸಂಸ್ಥೆಗೆ ಅನುಮತಿ ನೀಡಲಾಗಿದೆ.

Tap to resize

Latest Videos

ಕೊರೋನಾ ವೈರಸ್‌ಗೆ ಔಷಧಿ ಇಲ್ಲ, ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಗೆ ಬಿಡಿಗಾಸು ಮನ್ನಣೆ ಇಲ್ಲ!

ಈ ಪ್ರಯೋಗವು ಜುಲೈ ತಿಂಗಳಲ್ಲಿ ದೇಶಾದ್ಯಂತ ನಡೆಯಲಿದೆ ಎಂದು ಹೈದ್ರಾಬಾದ್‌ ಮೂಲದ ಕಂಪನಿ ಹೇಳಿಕೊಂಡಿದೆ. '

ಮಾನವ ಪ್ರಯೋಗ ಪರೀಕ್ಷೆ ವೇಳೆ ಲಸಿಕೆಯು ಭರವಸೆದಾಯಕವಾಗಿತ್ತು ಜೊತೆಗೆ ಸುರಕ್ಷತೆ ಮತ್ತು ಪರಿಣಾಮಕಾರಿ ಜೀವರಕ್ಷಕ ವ್ಯವಸ್ಥೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಕಂಪನಿ ಹೇಳಿಕೊಂಡಿದೆ.

click me!