ಮೋದಿ ಭಾಷಣ: ಒಂದೆಡೆ ಕೊರೋನಾ ಕಾಟ, ಮತ್ತೊಂದೆಡೆ ಚೀನಾ ಬಿಕ್ಕಟ್ಟು

Published : Jun 30, 2020, 07:57 AM ISTUpdated : Jun 30, 2020, 10:08 AM IST
ಮೋದಿ ಭಾಷಣ: ಒಂದೆಡೆ ಕೊರೋನಾ ಕಾಟ, ಮತ್ತೊಂದೆಡೆ ಚೀನಾ ಬಿಕ್ಕಟ್ಟು

ಸಾರಾಂಶ

ಮಂಗಳವಾರ ಪ್ರಧಾನ ನರೇಂದ್ರ ಮೋದಿ ಅವರು ಮತ್ತೆ ದೇಶವನ್ನುದ್ದೇಶಿಸಿ ಮಾತು| ಸಂಜೆ 4 ಗಂಟೆಗೆ ಪ್ರಧಾನಿ ಮೋದಿ ಭಾಷಣ| ಕುತೂಹಲ ಮೂಡಿಸಿದೆ ಟ್ವೀಟ್

ನವದೆಹಲಿ(ಜೂ.30):ಮಂಗಳವಾರ ಪ್ರಧಾನ ನರೇಂದ್ರ ಮೋದಿ ಅವರು ಮತ್ತೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ಪ್ರಧಾನಿ ಕಚೇರಿ ಟ್ವಿಟರ್‌ ಖಾತೆ ಮಾಹಿತಿ ಹಂಚಿಕೊಂಡಿದ್ದು, ಸಂಜೆ 4 ಗಂಟೆಗೆ ಪ್ರಧಾನಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದೆ.

ಒಂದನೇ ಹಂತದ ಅನ್‌ಲಾಕ್‌ ಪ್ರಕ್ರಿಯೆಯ ದಿನ ಕೊನೆಗೊಳ್ಳುವ ದಿನದಂತೆ ಪ್ರಧಾನಿ ಮೋದಿ ಭಾಷಣ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

"

ಭಾರತದಲ್ಲಿ ಹೆಚ್ಚುತ್ತಿದೆ ಕೊರೋನಾ ಅಟ್ಟಹಾಸ:

ಇನ್ನು ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಸೋಮವಾರ ಒಂದೇ ದಿನ 18584 ಪ್ರಕರಣಗಳು ದಾಖಲಾಗಿದ್ದು, 415 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,59,426 ಆಗಿದೆ.

ಚೀನಾ ಭಾರತ ಬಿಕ್ಕಟ್ಟು:
ಲಡಾಖ್ ಗಡಿಯಲ್ಲಿ ಚೀನಾ ಮತ್ತೆ ನರಿ ಬುದ್ಧಿ ಪ್ರದರರ್ಶಿಸುತ್ತಿದೆ. ಹೀಗಿರುವಾಗ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷದ ಕುರಿತಾಗಿಯೂ ಮೋದಿ ತಮ್ಮ ಭಾಷಣದಲ್ಲಿ ಮಾತನಾಡುವ ಸಾಧ್ಯತೆಗಳಿವೆ ಎಂದೂ ಹೇಳಲಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ಸಿಇಒ ವಜಾಕ್ಕೆ ಕೇಂದ್ರ ಸೂಚನೆ ಸಾಧ್ಯತೆ
ಗುಲಾಮಿ ಮನಃಸ್ಥಿತಿ ಬಿಡಲು 2035ರ ಗಡುವು : ಮೋದಿ