
ಭೋಪಾಲ್(ಫೆ.26): ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಮಧ್ಯಪ್ರದೇಶದಲ್ಲಿ ಮಾ.8ರಂದು ಜನಾಂದೋಲನಕ್ಕಾಗಿ ಸಿದ್ಧತೆ ನಡೆಸಿರುವ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರು ಅಂದಿನ ದಿನವೇ ರಾಜ್ಯ ಪೊಲೀಸರಿಂದ ಬಂಧನವಾಗುವ ಸಾಧ್ಯತೆಯಿದೆ.
ಮಾ.8ರಂದು ಇಲ್ಲಿನ ಶಿಯೋಪುರ, ರೇವಾ ಮತ್ತು ದೇವಾಸ್ನಲ್ಲಿ ರೈತರ ರಾರಯಲಿಗಳನ್ನುದ್ದೇಶಿಸಿ ರಾಕೇಶ್ ಟಿಕಾಯತ್ ಭಾಷಣ ಮಾಡಬೇಕಿದೆ. ಏತನ್ಮಧ್ಯೆ, 2012ರ ಹತ್ಯೆ ಮತ್ತು ಗಲಭೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ನ್ಯಾಯಾಲಯವೊಂದು ಟಿಕಾಯತ್ ಅವರಿಗೆ ಬಂಧನದ ವಾರಂಟ್ ಜಾರಿ ಮಾಡಿದೆ.
ಹೀಗಾಗಿ ಅಂದಿನ ದಿನವೇ ಟಿಕಾಯತ್ ಬಂಧನವಾಗಬಹುದು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ