ಕೇಂದ್ರ ಸರ್ಕಾರದಲ್ಲಿ ತ್ರಿಮೂರ್ತಿಗಳು ಇರುವವರೆಗೆ ಯಾರೂ ಭಯಪಡಬೇಕಾದ ಅಗತ್ಯ ಇಲ್ಲ/ ಮೋದಿ ಆಡಳಿತದಲ್ಲಿ ಲಡಾಕ್ ಸುರಕ್ಷಿತ/ ಚೀನಾಕ್ಕೆ ಹೇಗೆ ಪಾಠ ಕಲಿಸಬೇಕು ಎಂಬುದು ಗೊತ್ತಿದೆ/ ಗುಡುಗಿದ ಲಡಾಕ್ ಸಂಸದ ಜಮ್ಯಾಂಗ್ ತ್ಸೆರಿಂಗ್
ಅಡಾಖ್(ಡಿ. 25) ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಕೇಂದ್ರ ಸರ್ಕಾರದ ಭಾಗವಾಗುವವರೆಗೂ ಭಾರತದ ಜನರು ಚಿಂತಿಸಬೇಕಾಗಿಲ್ಲ ಎಂದು ಲಡಾಖ್ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಹೇಳಿದ್ದಾರೆ.
ಚೀನಾದವರು ಏನೇ ಆಟ ಆಡಿದರೂ ಈ ಮೂವರು ಇರುವವರೆಗೆ ನಡೆಯುವುದಿಲ್ಲ. ಲಡಾಕ್ ಸುರಕ್ಷಿತವಾಗಿದೆ ಎಂದಿದ್ದಾರೆ.
ಪಿಎಂ ಮೋದಿಗೆ ಅಮೆರಿಕದ ಅತ್ಯುನ್ನತ ಗೌರವ
ಮೋದಿ ಜಿ, ಅಮಿತ್ ಶಾ ಜಿ ಅವರು ಕೇಂದ್ರ ರಾಜನಾಥ್ ಸಿಂಗ್ ರಕ್ಷಣಾ ಸಚಿವರಾಗಿರುವ ತನಕ ಚಿಂತೆ ಮಾಡಬೇಕಾಗಿಲ್ಲ ಲಡಾಖ್ ಆಗಿರಲಿ ಅಥವಾ ಅರುಣಾಚಲ ಪ್ರದೇಶವಾಗಲಿ ಒಂದು ಇಂಚು ಭೂಮಿಯನ್ನು ಸಹ ಹೊರಗಿನವರು ಆಕ್ರಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಬಾಲ ಮುದುರಿಕೊಂಡಿರುವ ಚೀನಾ ಪ್ರಸ್ತಾವ ಕಳಿಸುವ ನಾಟಕ ಆಡುತ್ತಿದೆ. ಇದಕ್ಕೆಲ್ಲ ಕೇಂದ್ರ ಸರ್ಕಾರ ತಕ್ಕ ಉತ್ತರ ನೀಡಿದೆ. ಇಂಥ ನಾಟಕಗಳು ಬಹಳ ದಿನ ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಚೀನಾದ ಸೈನ್ಯವು ಕಳುಹಿಸಿದ ಪ್ರಸ್ತಾಪವನ್ನು ಭಾರತ ನಿರಾಕರಿಸಿದೆ ಮತ್ತು ಲಡಾಕ್‌ನ ಸ್ಥಳೀಯರಾಗಿ ಮತ್ತು ಜನರ ಪ್ರತಿನಿಧಿಯಾಗಿ ಅವರು ನೆರೆಹೊರೆಯ ರಾಷ್ಟ್ರಗಳಿಂದ ಸಾಕಷ್ಟು ಸಮಯದಿಂದ ನಾಟಕಗಳಿಗೆ ಸಾಕ್ಷಿಯಾಗುತ್ತಿದ್ದಾರೆ ಎಂದು ಅವರು ಹೇಳಿದರು.
ಮೊದಲ ಬಾರಿಗೆ, ಪಿಎಂ ಮೋದಿಯವರ ನೇತೃತ್ವದಲ್ಲಿ, ಲಡಾಖ್ ಜನರು ಸುರಕ್ಷಿತವಾಗಿರುತ್ತಾರೆ" ಎಂದು ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಪುನರ್ ಉಚ್ಚಾರ ಮಾಡಿದ್ದಾರೆ.