ಕೀಳು ರಾಜಕೀಯಕ್ಕೆ ರೈತರ ಬಲಿಕೊಡಬೇಡಿ; ದೀದಿ ಸೇರಿದಂತೆ ವಿಪಕ್ಷಗಳ ವಿರುದ್ಧ ಮೋದಿ ಗುಡುಗು!

ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 18,000 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ರೈತರನ್ನುದ್ದೇಶಿ ಮಾತನಾಡಿದ್ದಾರೆ. ಈ ವೇಳೆ ಮಮತಾ ಬ್ಯಾನರ್ಜಿ ಸೇರಿದಂತೆ ವಿರೋಧ ಪಕ್ಷಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ.
 


ನವದೆಹಲಿ(ಡಿ.25): ಪ್ರಧಾನಿ ನರೇಂದ್ರ ಮೋದಿ ಮತ್ತೆ ವಿರೋಧ ಪಕ್ಷಗಳ ವಿರುದ್ಧ ಗುಡುಗಿದ್ದಾರೆ. ರೈತರ ಬಾಳು ಹಸನು ಮಾಡುವ ಕೃಷಿ ಮಸೂದೆ ಕುರಿತು ತಪ್ಪು ಮಾಹಿತಿ ನೀಡಿ, ರೈತರ ಭವಿಷ್ಯ ಹಾಳು ಮಾಡುತ್ತಿರುವುದು ಕೀಳುಮಟ್ಟದ ರಾಜಕೀಯ ಎಂದಿದ್ದಾರೆ. ವಿಶೇಷವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳ ರೈತರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಬಂಗಾಳ ರೈತರನ್ನು ಕೇಂದ್ರದ ಯೋಜನೆಗಳ ಲಾಭದಿಂದ ವಂಚಿತರನ್ನಾಗಿಸುತ್ತಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ನೂತನ ಕೃಷಿ ಮಸೂದೆ ಒಂದೇ ರಾತ್ರಿಯಲ್ಲಿ ಜಾರಿಗೆ ಬಂದಿಲ್ಲ; ರೈತರ ಹಾದಿ ತಪ್ಪಿಸಬೇಡಿ; ಮೋದಿ

Latest Videos

ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 18,000 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಮೋದಿ, ರೈತರನ್ನದ್ದೇಶಿಸಿ ವಿಡಿಯೋ ಕಾನ್ಫೆರನ್ಸ್ ಮೂಲಕ ಮಾತನಾಡಿದ್ದಾರೆ. ಈ ವೇಳೆ ಮೋದಿ ಸೂಕ್ಷ್ಮವಾಗಿ ರೈತ ಮಸೂದೆ ಲಾಭವನ್ನು ಕಿಸಾನ್ ಸಮ್ಮಾನ್ ಕಂತು ಹಣ ಬಿಡುಗಡೆಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಇಂದು 18,000 ಕೋಟಿ ರೂಪಾಯಿಗಳನ್ನು ರೈತರಿಗೆ ಬಿಡುಗಡೆ ಮಾಡಲಾಗಿದೆ. ನೇರವಾಗಿ ರೈತರ ಖಾತೆಗೆ ಹಣ ಹಾಕಲಾಗಿದೆ. ಇಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲ ಹಾಗೂ ಯಾವುದೇ ಕಮಿಶನ್ ನೀಡಬೇಕಿಲ್ಲ ಎಂದು ಮೋದಿ ಹೇಳಿದರು.

ಕಬ್ಬು ಬೆಳಗಾರರಿಗೆ ವಿಶೇಷ ಪ್ಯಾಕೇಜ್; 3,500 ಕೋಟಿ ರೂಪಾಯಿ ಸಬ್ಸಿಡಿ!...

ದೇಶದ ಇತರ ಎಲ್ಲಾ ರಾಜ್ಯದ ರೈತರಿಗೆ ಕೇಂದ್ರದ ಯೋಜನೆಗಳು ತಲುಪುತ್ತಿದೆ. ರೈತರ ಜೀವನ ಸುಗಮವಾಗುತ್ತಿದೆ. ಆದರೆ ಮಮತಾ ಬ್ಯಾನರ್ಜಿ, ರೈತರಿಗೆ ತಪ್ಪು ಮಾಹಿತಿ ನೀಡಿ, ಬಂಗಾಳದ ರೈತರನ್ನು ಕೇಂದ್ರದ ಯೋಜನೆಗಳಿಂದ ವಂಚಿಸುತ್ತಿದ್ದಾರೆ. ಬಂಗಾಳದ ರೈತರಿಗೆ ಕೇಂದ್ರದ ಯಾವುದೇ ಯೋಜನೆ ತಲುಪದಂತೆ ಮಾಡುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

 

Working for the welfare of our hardworking farmers. https://t.co/sqBuBM1png

— Narendra Modi (@narendramodi)

ಜಮ್ಮು ಕಾಶ್ಮೀರ ನಿವಾಸಿಗಳಿಗೆ ಆಯುಷ್ಮಾನ್ ಭಾರತ್ ಜಯ್ ಸೆಹತ್ ಸ್ಕೀಮ್; ಡಿ.26ಕ್ಕೆ ಮೋದಿ ಉದ್ಘಾಟನೆ

ಮಮತಾ ಬ್ಯಾನರ್ಜಿ ಸಿದ್ದಾಂತಗಳು ಪಶ್ಚಿಮ ಬಂಗಾಳವನ್ನು ವಿನಾಶಕ್ಕೆ ತಳ್ಳುತ್ತಿದೆ. ರೈತರ ವಿರುದ್ಧ ಮಮತಾ ಕೈಗೊಂಡ ನಿರ್ಧಾರಗಳು ತೀವ್ರ ನೋವುಂಟು ಮಾಡುತ್ತಿದೆ. ಆದರೆ ಪ್ರತಿಪಕ್ಷಗಳು ಮೌನವಾಗಿದೆ ಎಂದು ಮೋದಿ ಹೇಳಿದ್ದಾರೆ. ಕೇರಳದಲ್ಲಿ ಎಪಿಎಂಸಿ ಹಾಗೂ ಮಂಡಿಗಳಲ್ಲಿ. ಆದರೆ ಕೇರಳದಲ್ಲಿ ಯಾವುದೇ ಪ್ರತಿಭಟನೆಗಳಿಲ್ಲ. ಕೇವಲ ಪಂಜಾಬ್‌ನಲ್ಲಿ ಮಾತ್ರ ಯಾಕೆ? ಪಂಜಾಬ್‌ನಲ್ಲಿ ರೈತರ ಹಾದಿ ತಪ್ಪಿಸಲಾಗುತ್ತಿದೆ ಎಂದು ಮೋದಿ ದೂರಿದ್ದಾರೆ.

ಭಾರತ ಬದಲಾಗಿದೆ. ದೇಶದ ಮೂಲೆ ಮೂಲೆಗಳ ಮಾರುಕಟ್ಟೆ ಬೆಲೆಗಳು ರೈತರಿಗೆ ಲಭ್ಯವಿದೆ ಹಾಗೂ ರೈತರಿಗೆ ಈ ಕುರಿತು ಹೆಚ್ಚಿನ ಮಾಹಿತಿ ಇದೆ. ಇವರಿಗೆ ಉತ್ತಮ ಬೆಲೆ ಸಿಗುವಲ್ಲಿ ಅವರ ಉತ್ಪನ್ನ ಮಾರಾಟ ಮಾಡುವ ಅಧಿಕಾರ ರೈತರಿಗೆ ನೀಡಲಾಗಿದೆ. ಇದರಲ್ಲಿ ತಪ್ಪೇನು? ಎಂದು ಮೋದಿ ಹೇಳಿದ್ದಾರೆ.
 

click me!