ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ವಿಶ್ವದ ನಾಯಕತ್ವ ವಹಿಸಿದೆ. ಕಾಲು ಕೆರೆದುಕೊಂಡು ನಾವು ಯಾರ ಜೊತೆಯೂ ತಗಾದೆ ಶುರು ಮಾಡುವುದಿಲ್ಲ. ಆದರೆ ಭಾರತದ ತಂಟೆಗೆ ಬಂದರೆ ತಕ್ಕ ಉತ್ತರ ನೀಡಲು ನಾವು ಸಶಕ್ತರಾಗಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
ಉಡುಪಿ (ನ.18): ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ವಿಶ್ವದ ನಾಯಕತ್ವ ವಹಿಸಿದೆ. ಕಾಲು ಕೆರೆದುಕೊಂಡು ನಾವು ಯಾರ ಜೊತೆಯೂ ತಗಾದೆ ಶುರು ಮಾಡುವುದಿಲ್ಲ; ಆದರೆ ಭಾರತದ ತಂಟೆಗೆ ಬಂದರೆ ತಕ್ಕ ಉತ್ತರ ನೀಡಲು ನಾವು ಸಶಕ್ತರಾಗಿದ್ದೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಉಡುಪಿಯ ಮಣಿಪಾಲ ಮಾಹೆ ವಿವಿಯ ಘಟಿಕೋತ್ಸವ ಕಾರ್ಯಕ್ರಮ ದಲ್ಲಿ ಭಾಗಿಯಾಗಿ,ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದ ರಾಜನಾಥ್ ಸಿಂಗ್ ಮಾತನಾಡಿದರು. ಇಡೀ ಪ್ರಪಂಚ ಭಾರತದ ಮಾತು ಕೇಳುವ ಕಾಲ ಬಂದಿದೆ.ಮುಂದಿನ ಐದು ವರ್ಷದಲ್ಲಿ ವಿಶ್ವದ ಮೂರನೇ ಆರ್ಥಿಕ ದೇಶವಾಗಿ ಭಾರತ ಸದೃಢವಾಗಿ ನಿಲ್ಲಲಿದೆ. ಭಾರತ 2047ಕ್ಕೆ ಆರ್ಥಿಕ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಲಿದೆ ಎಂದು ಆತ್ಮವಿಶ್ವಾಸದ ಮಾತನಾಡಿದರು. ದೇಶವನ್ನು ಐದು ಟ್ರಿಲಿಯನ್ ಆರ್ಥಿಕ ರಾಷ್ಟ್ರ ಮಾಡುವುದು ಪ್ರಧಾನಿ ಮೋದಿ ಕನಸು. ದೇಶದ ಯುವ ಜನಾಂಗ ಇದಕ್ಕೆ ಕೊಡುಗೆ ನೀಡುತ್ತಿದೆ.ಗ್ಲೋಬಲ್ ಸಿಟಿಜನ್ ನಿರ್ಮಿಸಲು ಎನ್ ಇ ಪಿ ಜಾರಿಗೆ ತಂದಿದ್ದೇವೆ. ಭಾರತದ ಶೈಕ್ಷಣಿಕ ಗುಣಮಟ್ಟವನ್ನು ವಿಶ್ವವೇ ಗಮನಿಸುತ್ತಿದೆ. ಮಾಹೆ ವಿವಿಯ ಸತ್ಯ ನಾಡೆಳ್ಳಾ ಮೈಕೋಸಾಫ್ಟ್ ನ ನೇತೃತ್ವ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೈಕ್ರೋಸಾಫ್ಟ್ ಮೀರಿಸುವಂತಹ ಕಂಪನಿ ಭಾರತದಲ್ಲಿ ಸ್ಥಾಪನೆ ಆಗಬೇಕು ಎಂದರು.
ಅಂತಾರಾಷ್ಟ್ರೀಯ ಕಂಪನಿ ಸಿಇಒಗಳು ಭಾರತ ಮೂಲದವರು ಎಂಬೂದು ನಮ್ಮ ಹೆಗ್ಗಳಿಕೆ. ವಿದ್ಯಾರ್ಥಿಗಳಲ್ಲಿ ಜ್ಞಾನದ ಜೊತೆ ಬುದ್ದಿವಂತಿಕೆಯೂ ಅಗತ್ಯ ರಾಮನಿಗಿಂತ ರಾವಣ ಜ್ಞಾನಿಯಾಗಿದ್ದ. ಆದರೆ ರಾಮನಿಗೆ ವಿವೇಕ ಇತ್ತು. ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ.ಸಂಸ್ಕೃತಿ ಮತ್ತು ಸಂಪ್ರದಾಯ ಇಲ್ಲದ ನಾಗರಿಕ ಜೀವನಕ್ಕೆ ಅರ್ಥ ಇಲ್ಲ ಎಂದು ಹೇಳಿದರು.
undefined
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಹಲವಾರು ವರ್ಷಗಳಿಂದ ಸಾಧನೆ ಮಾಡಿದೆ. ಈ ಬಗೆಗಿನ ನಮ್ಮ ಅಭಿಮಾನವನ್ನು ಕೆಲವರು ಹೆಚ್ಚುಗಾರಿಕೆ ಎಂದು ಟೀಕಿಸುತ್ತಾರೆ. ಆದರೆ ಇತಿಹಾಸವನ್ನು ತಿಳಿದುಕೊಳ್ಳದ ವ್ಯಕ್ತಿಗಳು ಇಂತಹ ಟೀಕೆಗಳನ್ನು ಮಾಡುತ್ತಾರೆ ಎಂದರು.
ಒಂದು ಕಾಲದಲ್ಲಿ ಭಾರತ ಜ್ಞಾನಕ್ಕೆ ಜಗತ್ತಿನಲ್ಲಿಯೇ ನಂ.1 ಆಗಿತ್ತು. ಆದರೆ ಭಾರತದ ಈ ಜ್ಞಾನ ಪರಂಪರೆಯನ್ನು ಟೀಕಿಸುವವರು ಬಹಳ ಜನರಿದ್ದಾರೆ. ಇತಿಹಾಸ ತಿಳಿಯದೆ ಭವಿಷ್ಯದ ನಾಗರಿಕತೆ ಉಳಿಯುವುದು ಸಾಧ್ಯವಿಲ್ಲ. ಬ್ರಹ್ಮಗುಪ್ತ, ಕಣಾದ, ಆರ್ಯಭಟ, ಚರಕ ಹೇಳಿದ್ದನ್ನು ಇಂದು ಜಗತ್ತೇ ಒಪ್ಪಿಕೊಳ್ಳುತ್ತಿದೆ. ಗ್ರೀಕ್‌ನ ಪೈಥಾಗೊರಸ್ ಕಂಡುಹಿಡಿದ ಎನ್ನಲಾಗುವ ಗಣಿತದ ನಿಯಮಗಳನ್ನು ಆತನಿಗಿಂತ 300 ವರ್ಷಗಳ ಹಿಂದೆಯೇ ಭಾರತದ ಬೌಧಾಯಾನ ನಿರೂಪಿಸಿದ್ದ, ಇಂತಹ ನೂರಾರು ಉದಾಹರಣೆಗಳನ್ನು ತಾನು ನೀಡಬಲ್ಲೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಕಾಂಗ್ರೆಸ್ ವೈಡ್ ಬಾಲ್, ಆಪ್ ನೋ ಬಾಲ್, ಬಿಜೆಪಿ ಗುಡ್ ಲೆಂಥ್ ಬಾಲ್, ರಾಜನಾಥ್ ಮಾತಿಗೆ ಕೆಲವರು ಕಂಗಾಲ್!
ಭಾರತೀಯರು ಕೊಟ್ಟ ಶೂನ್ಯ ಇರದ ಗಣಿತವನ್ನು ಊಹಿಸಲು ಸಾಧ್ಯವಿಲ್ಲ. ಪೈಥಾಗೋರಸನ ಪ್ರಮೇಯವನ್ನು ಬೋದಾಯನ ಋಷಿ 300 ವರ್ಷಗಳ ಹಿಂದೆಯೇ ಹೇಳಿದ್ದ. ಭಾರತದ ಆರ್ಥಿಕ ಸದೃಢತೆ ಗುಣಮಟ್ಟದ ಮಾನವ ಸಂಪನ್ಮೂಲಗಳಲ್ಲಿ ಇದೆ. ಅಂತಹ ಗುಣಮಟ್ಟದ ಮಾನವ ಸಂಪನ್ಮೂಲವನ್ನು ನಮ್ಮ ಯುವ ಜನಾಂಗ ಹೊಂದಿರುವುದರಿಂದ ವಿಶ್ವವೇ ಭಾರತದತ್ತ ನೋಡುತ್ತಿದೆ ಎಂದರು.
MAHE University convocation: ಮುಖ್ಯ ಅತಿಥಿಯಾಗಿ ರಾಜನಾಥ್ ಸಿಂಗ್
ಇದೆ ವೇಳೆ ಚಿನ್ನದ ಪದಕ ಪಡೆದ ಇವರು ವಿದ್ಯಾರ್ಥಿಗಳನ್ನು ರಾಜನಾಥ್ ಸಿಂಗ್ ಪುರಸ್ಕರಿಸಿದ್ದರು. ಪಟ್ಟು ಮೂರು ದಿನಗಳ ಕಾಲ ಮಾಹೆ ವಿಶ್ವವಿದ್ಯಾಲಯ ಆವರಣದಲ್ಲಿ ಘಟಿಕೋತ್ಸವ ನಡೆಯಲಿದ್ದು, ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. 28 ಸಂಶೋಧಕರಿಗೆ ಪಿಎಚ್ ಡಿ ನೀಡಲಾಗುತ್ತಿದೆ.