ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನ: 30 ಕೋಟಿ ಗಡಿ ದಾಟಿದ ಭಾರತ!

By Suvarna NewsFirst Published Jun 24, 2021, 10:11 PM IST
Highlights
  • ಕಳೆದ 24 ಗಂಟೆಗಳಲ್ಲಿ 64.89 ಲಕ್ಷ ಲಸಿಕೆ ಡೋಸ್
  • 30 ಕೋಟಿ ಗಡಿ ದಾಟಿದ ಭಾರತದ ಲಸಿಕಾ ಅಭಿಯಾನ
  • ಕೋವಿಡ್ ಗುಣಮುಖರ ಪ್ರಮಾಣ 96.61%  ಹೆಚ್ಚಳ

ನವದೆಹಲಿ(ಜೂ.24): ಕೊರೋನಾ ವೈರಸ್ ನಿಯಂತ್ರಿಸಲು ಜನವರಿಯಲ್ಲಿ ಆರಂಭಗೊಂಡ ಲಸಿಕಾ ಅಭಿಯಾನ ಇದೀಗ ಮತ್ತಷ್ಟು ಚುರುಕುಗೊಂಡಿದೆ. ಪರಿಣಾಮ ಭಾರತದಲ್ಲಿ ಇದೀಗ ಭಾರತದ ಲಸಿಕೆ ನೀಡುವಿಕೆ ಪ್ರಮಾಣ 30 ಕೋಟಿ  ಗಡಿ ದಾಟಿದೆ.  ಆರೋಗ್ಯ ಇಲಾಖೆ ವರದಿ ಇಂದು ಬೆಳಗ್ಗೆ  7 ಗಂಟೆಯವರೆಗೆ ಒಟ್ಟು 30,16,26,028 ಲಸಿಕೆ ಡೋಸ್,  40,45,516 ಸೆಷನ್ ಗಳ ಮೂಲಕ ನೀಡಲಾಗಿದೆ.  

ಕೊರೋನಾ ಹೋರಾಟಕ್ಕೆ ರಿಲಯನ್ಸ್ ಪಂಚ ಸೂತ್ರ, 20 ಲಕ್ಷ ಜನರಿಗೆ ಲಸಿಕೆ

ಕಳೆದ 24 ಗಂಟೆಗಳಲ್ಲಿ 64,89,599 ಲಸಿಕೆ ಡೋಸ್ ಗಳನ್ನು ನೀಡಾಗಿದೆ.  ಹೊಸ ಲಸಿಕಾ ನೀತಿ ಜೂನ್ 21, 2021ರಿಂದ ಆರಂಭಗೊಂಡಿದೆ. ವಿಶ್ವ ಯೋಗದಿನಾಚರಣೆಯಂದ ಬರೋಬ್ಬರಿ 80 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿತ್ತು. 

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 54,069 ಹೊಸ ಪ್ರಕರಣಗಳು ವರದಿಯಾಗಿವೆ. ಸತತ 17 ದಿನಗಳಿಂದ 1 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ. ಇದು ಕೇಂದ್ರ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಯೋಗದ ಪ್ರಯತ್ನಗಳ ಫಲಿತಾಂಶವಾಗಿದೆ.

ದೈನಂದಿನ ಹೊಸ ಕೋವಿಡ್ ಪ್ರಕರಣಗಳಲ್ಲಿ ಭಾರತದಲ್ಲಿ ನಿರಂತರ ಇಳಿಮುಖವು ಕಾಣುತ್ತಿದೆ. ದೇಶದಲ್ಲಿ ಇಂದಿನ ಸಕ್ರಿಯ ಪ್ರಕರಣಗಳ ಹೊರೆಯು 6,27,057 ಆಗಿದೆ. ಕಳೆದ 24 ಗಂಟೆಗಳಲ್ಲಿ 16,137ರ ನಿವ್ವಳ ಕುಸಿತ ಕಂಡುಬಂದಿದೆ ಮತ್ತು ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ದೃಢಪಟ್ಟ ಪ್ರಕರಣಗಳ ಕೇವಲ 2.08%ರಷ್ಟು ಮಾತ್ರ ಇದೆ.

ಸತತ 3ನೇ ದಿನವೂ 50 ಲಕ್ಷ ಡೋಸ್‌ಗಿಂತ ಅಧಿಕ ಲಸಿಕೆ...

ಕೋವಿಡ್-19 ಸೋಂಕಿನಿಂದ ಹೆಚ್ಚಿನ ಜನರು ಚೇತರಿಸಿಕೊಳ್ಳುತ್ತಿರುವುದರಿಂದ, ಭಾರತದ ದೈನಂದಿನ ಚೇತರಿಕೆ ಪ್ರಮಾಣ  ಸತತ 42 ದಿನಗಳವರೆಗೆ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ 68,885  ಗುಣಮುಖರಾದ ಪ್ರಕರಣಗಳು ವರದಿಯಾಗಿವೆ. ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ 14,000 (14,816)ಕ್ಕಿಂತಲೂ ಹೆಚ್ಚು  ಚೇತರಿಕೆಯ ಪ್ರಕರಣಗಳು ವರದಿಯಾಗಿವೆ.

ಸಾಂಕ್ರಾಮಿಕ ರೋಗದ ಆರಂಭದಿಂದಲೂ ಸೋಂಕಿತರಲ್ಲಿ 2,90,63,740 ಜನರು ಈಗಾಗಲೇ ಕೋವಿಡ್-19 ರಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ   68,885 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಒಟ್ಟಾರೆ ಚೇತರಿಕೆ ದರವು 96.61% ಆಗಿದ್ದು, ಇದು ಚೇತರಿಕೆಯ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು  18,59,469 ಪರೀಕ್ಷೆಗಳನ್ನು ನಡೆಸಲಾಗಿದ್ದು,  ಇಲ್ಲಿಯವರೆಗೆ  ಭಾರತದಲ್ಲಿ 39.78 ಕೋಟಿ (39,78,32,667) ಪರೀಕ್ಷೆಗಳನ್ನು ನಡೆಸಲಾಗಿದೆ. ದೇಶಾದ್ಯಂತ ಪರೀಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು ವಾರದ  ಪ್ರಕರಣದ ದೃಢಪಟ್ಟ ಪ್ರಕರಣಗಳಲ್ಲಿ ನಿರಂತರ ಕುಸಿತವನ್ನು ಗಮನಿಸಲಾಗಿದೆ.  ವಾರದ  ದೃಢಪಟ್ಟ ಪ್ರಕರಣಗಳ ದರವು ಪ್ರಸ್ತುತ 3.04% ರಷ್ಟಿದ್ದರೆ, ದೈನಂದಿನ ದೃಢಪಟ್ಟ ಪ್ರಕರಣಗಳ ದರವು ಇಂದು 2.91% ರಷ್ಟಿದೆ. ಸತತ 17 ದಿನಗಳಿಂದ ಇದು 5% ಕ್ಕಿಂತ ಕಡಿಮೆಯಾಗಿದೆ.

click me!