ತೆರಿಗೆ ಸಂಗ್ರಹದಲ್ಲಿ ಮೋದಿ ಸರ್ಕಾರ ಐತಿಹಾಸಿಕ ದಾಖಲೆ: ಸಚಿವ ರಾಜೀವ್ ಚಂದ್ರಶೇಖರ್!

By Suvarna News  |  First Published Aug 27, 2022, 5:57 PM IST

ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತದಲ್ಲಿ ಆದ ಬದಲಾವಣೆ, ಜನರ ಜೀವನ ಮಟ್ಟ ಸುಧಾರಣೆ, ಫಲಾನುಭವಿಗಳಿಗೆ ಸೌಲಭ್ಯಗಳನ್ನು ಯಾವುದೇ ಅಡೆ ತಡೆ ಇಲ್ಲದೆ ತಲುಪಿಸುವ ವ್ಯವಸ್ಥೆಯಿಂದ ಭಾರತ ಅದ್ವೀಯ ಪ್ರಗತಿ ಸಾಧಿಸುತ್ತಿದೆ. ಇಷ್ಟೇ ಅಲ್ಲ ತೆರಿಗೆ ಸಂಗ್ರಹದಲ್ಲೂ ದಾಖಲೆ ಬರೆಯುತ್ತಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಈ ಕುರಿತು  ರಾಜೀವ್ ಚಂದ್ರಶೇಖರ್ ನಡೆಸಿದ ಮುಕ್ತ ಸಂವಾದ ಇಲ್ಲಿದೆ.


ಸೂರತ್(ಆ.27):  ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ತನ್ನ ದಿಟ್ಟ ನಿಲುವು ಹಾಗೂ ಹೊಸ ಯೋಚನೆಗಳಿಂದ ಸದೃಢ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಹೊಸ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಭಾರತವನ್ನು ಅಮೃತ ಕಾಲದತ್ತ ಪ್ರಧಾನಿ ನರೇಂದ್ರ ಮೋದಿಯವರು ಮುನ್ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.  ಗುಜರಾತ್‌ನ ಸೂರತ್ ನಗರದಲ್ಲಿನ ಸಾರ್ವಜನಿಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಅಧಿವೇಶನದಲ್ಲಿ ಸೂರತ್ ನ ಉದ್ಯಮಿಗಳು, ಅಕಾಡೆಮಿ ಸದಸ್ಯರು ಮತ್ತು ಇತರ ಗಣ್ಯ ವ್ಯಕ್ತಿಗಳೊಂದಿಗೆ ನಡೆದ ಮುಕ್ತ ಸಂವಾದದಲ್ಲಿ ಪಾಲ್ಗೊಂಡ ರಾಜೀವ್ ಚಂದ್ರಶೇಖರ್ ನವ ಭಾರತದಲ್ಲಿನ ಬದಲಾವಣೆ ಹಾಗೂ ಅಭಿವೃದ್ಧಿ ವೇಗ ಕುರಿತು ಮಾತನಾಡಿದರು. 

ನರೇಂದ್ರ ಮೋದಿಯವರ 8 ವರ್ಷದ ಆಡಳಿತವು ಪ್ರಜಾಪ್ರಭುತ್ವದ ಬಗ್ಗೆ ಕಪೋಕಲ್ಪಿತ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಫಲಾನುಭವಿಗಳಿಗೆ ತಲುಪುತ್ತಿದ್ದ ಸಬ್ಸಿಡಿ ಹಣ ಹಾಗೂ ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಯಾವುದೇ ಅಡೆತಡೆ ಇಲ್ಲದ ವಿಧಾನವನ್ನು ಅನುಸರಿಸಲಾಗಿದೆ. ಡಿಜಿಟಲ್ ಕ್ರಾಂತಿ ಮೂಲಕ ಮೋದಿ ಸರ್ಕಾರ ಪ್ರತಿಯೊಂದು ಪೈಸೆಯನ್ನು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಫಲಾನುಭವಿಗಳಿಗೆ ತಲುಪಿಸುತ್ತಿದೆ. ಕೇಂದ್ರ ಸರ್ಕಾರದ ಅನುದಾನಗಳು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಆಗುವ ಮೂಲಕ ದೇಶದಲ್ಲಿ ಹೊಸ ಕ್ರಾಂತಿಗೆ ಮುನ್ನಡಿ ಬರೆದಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

Tap to resize

Latest Videos

ಅರ್ಥಶಾಸ್ತ್ರ ಪಂಡಿತರ ರೀತಿ ನಟಿಸಿ ಪೇಚಿಗೆ ಸಿಲುಕಿದ ಕೇಜ್ರಿವಾಲ್, ರೇವಡಿ ಸಂಸ್ಕೃತಿ ವಿರುದ್ಧ ಗುಡುಗಿದ ರಾಜೀವ್ ಚಂದ್ರಶೇಖರ್!

ಅದಲ್ಲದೇ ಭಾರತದ ತೆರಿಗೆ ಆದಾಯವು ನಿರಂತರವಾಗಿ ಹೆಚ್ಚುತ್ತಿದ್ದು 22 ಲಕ್ಷ ಕೋಟಿಯಿಂದ 27ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಇದರಿಂದ ಭಾರತದ ಆರ್ಥಿಕತೆ ಕಡಿಮೆ ತೆರಿಗೆ ಆದಾಯದಿಂದ ಬಳಲುತ್ತಿದೆ ಎಂಬ ವಾದಕ್ಕೆ ಸಂಪೂರ್ಣ ಹಿನ್ನಡೆಯಾಗಿದೆ. ಆದಾಯದಲ್ಲಿನ ನಿವ್ವಳ ಹೆಚ್ಚಳವು ಬಂಡವಾಳ ವೆಚ್ಚವನ್ನು 7.5ಲಕ್ಷ ಕೋಟಿ ರೂ ಗೆ ಹೆಚ್ಚಿಸಿದೆ. ಇದು ಭಾರತದ ಮಟ್ಟಿಗೆ ಐತಿಹಾಸಿಕ ದಾಖಲೆಯಾಗಿದೆ ಎಂದು ಹೇಳಿದರು.

ಎಲ್ಲಾ ಭಾರತೀಯರನ್ನು ಸಬಲೀಕರಣಗೊಳಿಸುವ ಪ್ರಧಾನ ಮಂತ್ರಿಗಳ ದೂರದೃಷ್ಟಿ ಯೋಜನೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಕಲ್ಪನೆಯನ್ನು ಸಭಿಕರೊಂದಿಗೆ ಹಂಚಿಕೊಂಡ ಸಚಿವರು, “ಈ ಹಿಂದೆ ಅವಕಾಶ ಎಂಬುದು ಕೇವಲ ಕೆಲವೇ ಕೆಲವು ಕುಟುಂಬಗಳಿಗೆ ಮಾತ್ರ ಸೀಮಿತವಾಗಿತ್ತು,ಆದರೇ ಭಾರತ ಈಗ ತನ್ನ ಅದ್ಭುತ ನವೋದ್ಯಮ ಪರಿಸರ ವ್ಯವಸ್ಥೆಯಿಂದ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದು, ನರೇಂದ್ರ ಮೋದಿ ಸರ್ಕಾರದ ನೂತನ ನೀತಿಗಳನ್ನು ನವೋದ್ಯಮಿಗಳು, ಯುವ ಉದ್ಯಮಿಗಳು, ಸಂಶೋಧಕರು ಪ್ರಶಂಸಿಸಿ ಮೆಚ್ಚಿಕೊಂಡಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

 

ಬಳಕೆದಾರರ ಡೇಟಾ ಕದ್ದ ಆರೋಪ; ಚೀನಾ ಸೇರಿ ವಿವಿಧ ದೇಶದ 348 ಅಪ್ಲಿಕೇಶನ್ಸ್‌ ಬ್ಯಾನ್‌!
 

click me!