ದೆಹಲಿ ಉಪ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಅಥವಾ ಕಿತ್ತೆಸೆಯಿರಿ, ಆಪ್ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ

By Suvarna News  |  First Published Aug 27, 2022, 4:05 PM IST

ದೆಹಲಿ ಅಬಕಾರಿ ಹಗರಣ ಇದೀಗ ರಾಜಕೀಯ ದಂಗಲ್‌ಗೆ ಕಾರಣವಾಗಿದೆ. ಇದು ಉದ್ದೇಶಪೂರ್ವಕ ರಾಜಕೀಯ ದಾಳಿ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದ್ದರೆ, ಇತ್ತ ಬಿಜೆಪಿ ಹಗರಣ ಮಾಡಿ ಮುಚ್ಚಿ ಹಾಕುವ ಪ್ರಯತ್ನ ಮಾಡಬೇಡಿ ಎಂದಿದೆ. ಇದರ ನಡುವೆ ಸೈಲೆಂಟ್ ಆಗಿದ್ದ ಕಾಂಗ್ರೆಸ್ ಇದೀಗ ಆಮ್ ಆದ್ಮಿ ವಿರುದ್ಧ ಆಕ್ರೋಶ ಹೊರಹಾಕಿದೆ. 
 


ನವದೆಹಲಿ(ಆ.27):  ಅಬಕಾರಿ ಹಗರಣದಲ್ಲಿ ಸಿಲುಕಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿ, ಕೇಂದ್ರ ಬಿಜೆಪಿ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿದ್ದಾರೆ. ತನಗೆ ಸಿಎಂ ಆಫರ್ ನೀಡಿದ್ದಾರೆ, ಮುಂದಿನ ಚುನಾವಣೆ ಮೋದಿ ವರ್ಸಸ್ ಕೇಜ್ರಿವಾಲ್. ಇದು ಬಿಜೆಪಿಯ ಸೇಡಿನ ರಾಜಕರಾಣ, ಆಮ್ ಆದ್ಮಿ ನಾಯಕರನ್ನು ಆಪರೇಷನ್ ಕಮಲ ಮಾಡುವ ಯತ್ನ ಎಂದು ಮನೀಶ್ ಸಿಸೋಡಿಯಾ ಸೇರಿದಂತೆ ಆಮ್ ಆದ್ಮಿ ಪಾರ್ಟಿ ಆರೋಪಿಸುತ್ತಿದೆ. ಆಪ್ ಹಾಗೂ ಬಿಜೆಪಿ ಜಟಾಪಟಿ ನಡುವೆ ಸೈಲೆಂಟ್ ಆಗಿದ್ದ ಕಾಂಗ್ರೆಸ್ ಇದೀಗ ಆಪ್ ಹಗರಣದ ವಿರುದ್ದ ಗುಡುಗಿದೆ. ಅಬಕಾರಿ ಹಗರಣದಲ್ಲಿ ಮನೀಶ್ ಸಿಸೋಡಿಯಾ ಮೇಲೆ ದಾಳಿಯಾಗಿದೆ. ಗಂಭೀರ ಆರೋಪ ಹಾಗೂ ತನಿಖೆಯೂ ನಡೆಯುತ್ತಿರುವ ಕಾರಣ ದೆಹಲಿ ಉಪ ಮುಖ್ಯಮಂತ್ರಿ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಲಿ. ಆದರೆ ಸಿಸೋಡಿಯಾ ಆರೋಪಗಳಲ್ಲೇ ಕಾಲಕಳೆಯುತ್ತಿದ್ದಾರೆ. ಇತ್ತ ಸಿಎಂ ಅರವಿಂದ್ ಕೇಜ್ರಿವಾಲ್ ಉಪ ಮುಖ್ಯಮಂತ್ರಿಯನ್ನು ಸಂಪುಟದಿಂದ ಕಿತ್ತೆಸೆಯುವ ಪ್ರಯತ್ನ ಮಾಡುತ್ತಿಲ್ಲ. ತನಿಖೆ ಪೂರ್ಣಗೊಳ್ಳುವವರೆಗೆ ಸಿಸೋಡಿಯಾ ಉಪ ಮುಖ್ಯಮಂತ್ರಿ ಸ್ಥಾನದಿಂದ ಕೆಳೆಗಿಳಿಯುವುದು ಸೂಕ್ತ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ಹೇಳಿದ್ದಾರೆ.

ಆಮ್ ಆದ್ಮಿ ಪಾರ್ಟಿ ಅಬಕಾರಿ ಹಗರಣ ಕುರಿತು ಅಜಯ್ ಮಾಕೆನ್ ಮಹತ್ವದ ಹೇಳಿಕೆ ನೀಡಿದ್ದಾರೆ. ಮನೀಶ್ ಸಿಸೋಡಿಯಾ ಇತರರ ಮೇಲೆ ಗೂಬೆ ಕೂರಿಸುವುದಕ್ಕಿಂತ ಚರ್ಚೆಗೆ ಬರಲಿ. ಮುಕ್ತ ಚರ್ಚೆಯಲ್ಲಿ ಈ ಹಗರಣದ ಆಳ ಅಗಲ ಎಷ್ಟಿದೆ. ಈ ಹಗರಣ ಏನು? ಅನ್ನೋದನ್ನು ನಾನು ವಿವರಿಸುತ್ತೇನೆ ಎಂದು ಅಜಯ್ ಮಾಕನ್ ಹೇಳಿದ್ದಾರೆ. 

Tap to resize

Latest Videos

ನಮ್ಮ 4 ಶಾಸಕರಿಗೆ ಬಿಜೆಪಿ ತಲಾ 20 ಕೋಟಿ ಆಫರ್‌: ಎಎಪಿ ಸ್ಫೋಟಕ ಆರೋಪ

ಒಂದೇ ಒಂದು ಕಳಂಕವಿಲ್ಲದ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ವಿರುದ್ದ ಅರವಿಂದ್ ಕೇಜ್ರಿವಾಲ್ ಕೆಲ ಆರೋಪಗಳನ್ನು ಮಾಡಿದ್ದರು. ಈ ವೇಳೆ ಮನ್‌ಮೋಹನ್ ಸಿಂಗ್ ರಾಜೀನಾಮೆ ನೀಡಿದರೆ ಮಾತ್ರ ನಿಸ್ಪಕ್ಷಪಾತ ತನಿಖೆ ನಡೆಯಲು ಸಾಧ್ಯ ಎಂದಿದ್ದರು. ಇದೀಗ ತಮ್ಮ ಮಾತುಗಳನ್ನು ಅರವಿಂದ್ ಕೇಜ್ರಿವಾಲ್ ಮರೆತಿದ್ದಾರೆ. ಸಿಸೋಡಿಯಾ ಮೇಲೆ ಗಂಭೀರ ಆರೋಪ ಹಾಗೂ ಸಾಕ್ಷ್ಯಗಳು ಲಭ್ಯವಿದ್ದರೂ ಸಿಸೋಡಿಯಾ ರಾಜೀನಾಮೆ ಕೇಳಿಲ್ಲ. ಇತ್ತ ಸಿಸೋಡಿಯಾರನ್ನು ಕಿತ್ತೆಸೆಯುವ ಕೆಲಸವನ್ನೂ ಮಾಡಿಲ್ಲ. ಹೀಗಿರುವಾಗ ದೆಹಲಿ ಅಬಕಾರಿ ಹಗರಣದ ಯಾವುದೇ ಹಸ್ತಕ್ಷೇಪವಿಲ್ಲದೆ ನಡೆಯಲು ಹೇಗೆ ಸಾಧ್ಯ ಎಂದು ಅಜಯ್ ಮಾಕೆನ್ ಪ್ರಶ್ನಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಉಪ ಮುಖ್ಯಮಂತ್ರಿಯನ್ನು ಕಿತ್ತೆಸೆಯುವ ಕೆಲಸ ಮಾಡುವುದಿಲ್ಲ. ಕಾರಣ ಈ ಪ್ರಕರಣದಲ್ಲಿ ಕೇಜ್ರಿವಾಲ್ ಹೆಸರು ಥಳುಕುಹಾಕಿಕೊಳ್ಳುತ್ತಿದೆ. ಇದರಿಂದ ಸುರಕ್ಷಿತವಾಗಲು ಇದೀಗ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇಷ್ಟೇ ಅಲ್ಲ ಮುಂಬರುವ ಚುನಾವಣೆ ಕುರಿತು ಮಾತನಾಡುತ್ತಿದ್ದಾರೆ ಎಂದು ಅಜಯ್ ಮಾಕೆನ್ ಹೇಳಿದ್ದಾರೆ.

ಮನೀಶ್‌ ಸಿಸೋಡಿಯಾಗೆ ಭಾರತ ರತ್ನ ಕೊಡ್ಬೇಕಿತ್ತು; ಬದಲಿಗೆ ಸಿಬಿಐ ರೇಡ್‌ ನಡೆಸಿದೆ: ಕೇಜ್ರಿವಾಲ್‌ ಕಿಡಿ

ದೆಹಲಿ ರೆಸಿಡೆನ್ಶಿಯಲ್ ವಲಯದಲ್ಲಿ ತೆರೆದಿರುವ ಶೇಕಡಾ 90 ರಷ್ಟು ಮದ್ಯದ ಅಂಗಡಿಗಳಿಗೆ ಕೇಜ್ರಿವಾಲ್ ಸರ್ಕಾರ ಅನುಮತಿ ನೀಡಿದೆ. ಈ ಅನುಮತಿ ವೇಳೆ ನೇರವಾಗಿ ನಿಯಮ ಉಲ್ಲಂಘನೆಯಾಗಿದೆ. ದೆಹಲಿಯ ಅತೀ ದೊಡ್ಡ ಮಾಫಿಯಾ ಇದಾಗಿದೆ. ಇದು ಕೇಜ್ರಿವಾಲ್ ಸರ್ಕಾರದಲ್ಲಿ ನಡೆದಿದೆ ಎಂದು ಮಾಕೆನ್ ಹೇಳಿದ್ದಾರೆ.

click me!