31 ಕೋಟಿಯ ಮೈಲಿಗಲ್ಲು ದಾಟಿದ ಭಾರತದ ಲಸಿಕಾ ಅಭಿಯಾನ!

By Suvarna NewsFirst Published Jun 26, 2021, 9:30 PM IST
Highlights
  • ಕಳೆದ 24 ಗಂಟೆಗಳಲ್ಲಿ 61.19 ಲಕ್ಷ  ಡೋಸ್ ಲಸಿಕೆ 
  • 31 ಕೋಟಿ ಲಸಿಕೆ ನೀಡೋ ಮೂಲಕ ಭಾರತ ದಾಖಲೆ
  • ಕಳೆದ 6 ದಿನದಲ್ಲಿ 3.77 ಕೋಟಿ ಲಸಿಕೆ ನೀಡಿದ ಭಾರತ
     

ನವದೆಹಲಿ(ಜೂ.26):  ಕೊರೋನಾ ನಿಯಂತ್ರಣಕ್ಕೆ ಭಾರತ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಿದೆ. ಜೂನ್ 21 ರಿಂದ ಜಾರಿಗೆ ಬಂದಿರುವ ಹೊಸ ಲಸಿಕಾ ನೀತಿಯಿಂದ ಭಾರತದಲ್ಲಿ ಪ್ರತಿ ದಿನ ನೀಡುತ್ತಿರುವ ಲಸಿಕೆ ವೇಗ ಹೆಚ್ಚಾಗಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 61.19 ಲಕ್ಷ ಲಸಿಕೆ ನೀಡಿದೆ. ಈ ಮೂಲಕ ಭಾರತದ ಇಲ್ಲೀವರೆಗಿನ ಲಸಿಕೆ ನೀಡುವಿಗೆ 31 ಕೋಟಿ ಮೈಲಿಗಲ್ಲು ದಾಟಿದೆ.

ಕೊರೋನಾ ವಿರುದ್ಧ ಹೋರಾಟ; ಲಸಿಕೆ ಪ್ರಗತಿ ಪರಿಶೀಲನೆಗೆ ಮೋದಿ ಉನ್ನತ ಮಟ್ಟದ ಸಭೆ!

ಆರೋಗ್ಯ ಇಲಾಖೆ ವರದಿ ಪ್ರಕಾರ ಇಂದು ಬೆಳಿಗ್ಗೆ 7 ಗಂಟೆಯವರೆಗೆ ಒಟ್ಟು 31,50,45,926 ಲಸಿಕೆ ಡೋಸ್  ನೀಡಲಾಗಿದೆ.   42,00,839 ಸೆಷನ್‌ಗಳ ಮೂಲಕ ಈ ಲಸಿಕೆ ನೀಡಲಾಗಿದೆ.  ಇಂದು(ಜೂ.26) ಪ್ರಧಾನಿ ನರೇಂದ್ರ ಮೋದಿ ಲಸಿಕೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಭಾರತದ ಲಸಿಕಾ ವೇಗಕ್ಕೆ ಮಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭಾರತವು 48,698 ಹೊಸ  ಪ್ರಕರಣಗಳನ್ನು ವರದಿ ಮಾಡಿದೆ. ಸತತ 19 ದಿನಗಳಿಂದ 1 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ. ಇದು ಕೇಂದ್ರ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಯೋಗದ ಪ್ರಯತ್ನಗಳ ಫಲಿತಾಂಶವಾಗಿದೆ.

ಬೆನ್ನ ಹಿಂದೆ ಮಗು, ಒಂದು ಕೈಯಲ್ಲಿ ವಾಕ್ಸಿನ್.. ಕೊರೋನಾ ವಾರಿಯರ್ಸ್‌ಗೆ ನಮನ

ಭಾರತದಲ್ಲಿ  ಸಕ್ರಿಯ  ಪ್ರಕರಣಗಳ ಹೊರೆಯಲ್ಲಿ ಕೂಡ ನಿರಂತರವಾಗಿ ಕುಸಿತ ಕಂಡುಬರುತ್ತಿದೆ. ದೇಶದ ಸಕ್ರಿಯ ಪ್ರಕರಣಗಳ ಹೊರೆಯು  ಇಂದು  5,95,565   ರಷ್ಟಿದೆ.  ಸಕ್ರಿಯ ಪ್ರಕರಣಗಳ ಹೊರೆಯು 86 ದಿನಗಳ ನಂತರ 9 ಲಕ್ಷಕ್ಕಿಂತ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ 17,303ರ ನಿವ್ವಳ ಕುಸಿತ ಕಂಡುಬಂದಿದೆ ಮತ್ತು ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ದೃಢಪಟ್ಟ ಪ್ರಕರಣಗಳ ಕೇವಲ 1.97%ರಷ್ಟು ಮಾತ್ರ ಇದೆ.

ಕೋವಿಡ್-19 ಸೋಂಕಿನಿಂದ ಹೆಚ್ಚು ಜನರು ಚೇತರಿಸಿಕೊಳ್ಳುತ್ತಿರುವ ಕಾರಣ, ಭಾರತದ ದೈನಂದಿನ ಚೇತರಿಕೆಗಳ ಪ್ರಮಾಣವು  ಸತತ 44ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ 64,818 ಗುಣಮುಖರಾದ ಪ್ರಕರಣಗಳು ವರದಿಯಾಗಿವೆ. ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ ಹದಿನಾರು  ಸಾವಿರಕ್ಕಿಂತ (16,120 ) ಹೆಚ್ಚಿನ ಚೇತರಿಕೆಯ ಪ್ರಕರಣಗಳು ವರದಿಯಾಗಿದೆ.

'ಲಸಿಕೆ 75% ಜನಕ್ಕೆ ಉಚಿತ, 25% ಜನಕ್ಕೆ ಶುಲ್ಕ ಏಕೆ?

ಸಾಂಕ್ರಾಮಿಕದ ಆರಂಭದಿಂದಲೂ ಸೋಂಕಿತರಲ್ಲಿ  2,91,93,085 ಜನರು ಈಗಾಗಲೇ ಕೋವಿಡ್-19 ರಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ   64,818 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಒಟ್ಟಾರೆ ಚೇತರಿಕೆ ದರವು 96.72%, ಆಗಿದ್ದು, ಇದು ಚೇತರಿಕೆಯ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿರುವುದನ್ನು ತೋರಿಸುತ್ತಿದೆ.

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು ಕಳೆದ 24 ಗಂಟೆಗಳಲ್ಲಿ ಒಟ್ಟು 17,35,781  ಪರೀಕ್ಷೆಗಳನ್ನು ನಡೆಸಲಾಗಿದ್ದು,  ಇಲ್ಲಿಯವರೆಗೆ  ಭಾರತದಲ್ಲಿ  39.78 ಕೋಟಿಗಿಂತಲೂ (39,95,68,448)  ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಪರೀಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು ವಾರದ  ಪ್ರಕರಣದ ದೃಢಪಟ್ಟ ಪ್ರಕರಣಗಳಲ್ಲಿ ನಿರಂತರ ಕುಸಿತವನ್ನು ಗಮನಿಸಲಾಗಿದೆ.  ವಾರದ  ದೃಢಪಟ್ಟ ಪ್ರಕರಣಗಳ ದರವು ಪ್ರಸ್ತುತ 2.97% ರಷ್ಟಿದ್ದರೆ, ದೈನಂದಿನ ದೃಢಪಟ್ಟ ಪ್ರಕರಣಗಳ ದರವು ಇಂದು 2.79% ರಷ್ಟಿದೆ. ಸತತ 19 ದಿನಗಳಿಂದ ಇದು 5% ಕ್ಕಿಂತ ಕಡಿಮೆಯಿದೆ.

click me!