ನವದೆಹಲಿ (ಮೇ.28): ಗುರುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 211298 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 3847 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.73 ಕೋಟಿಗೆ ಏರಿಕೆಯಾಗಿದೆ.
ಒಟ್ಟು ಸಾವಿಗೀಡಾದವರ ಸಂಖ್ಯೆ 3,15,235ಕ್ಕೆ ತಲುಪಿದೆ. ಇನ್ನು ಪಾಸಿಟಿವಿಟಿ ಪ್ರಮಾಣ ಶೇ.9.79ಕ್ಕೆ ಕುಸಿದಿದೆ. ಇದರೊಂದಿಗೆ ಸತತ ಮೂರನೇ ದಿನ ಶೇ.10ಕ್ಕಿಂತ ಕಡಿಮೆ ಪಾಸಿಟಿವಿಟಿ ದಾಖಲಾದಂತೆ ಆಗಿದೆ.
ರಾಜ್ಯದಲ್ಲಿ 25 ಲಕ್ಷ ದಾಟಿದ ಸೋಂಕಿತರ ಸಂಖ್ಯೆ
ಹೊಸ ಸೋಂಕಿತರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 24.19 ಲಕ್ಷಕ್ಕೆ ಕುಸಿದಿದಿದ್ದು, ಚೇತರಿಕೆ ಪ್ರಮಾಣ ಶೇ.90ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 2.46 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಗುರುವಾರ ಮೃತಪಟ್ಟವರ ಪೈಕಿ ಮಹಾರಾಷ್ಟ್ರದಲ್ಲಿ ಅತಿಹೆಚ್ಚು 992, ಕರ್ನಾಟಕ 530, ತಮಿಳುನಾಡು 475, ಉತ್ತರಪ್ರದೇಶದಲ್ಲಿ 193, ಪಂಜಾಬ್‌ನಲ್ಲಿ 185 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ.