
ನವದೆಹಲಿ(ಏ.28): ಕೊರೋನಾ ಪ್ರಕರಣ ಸಂಖ್ಯೆ, ಆಕ್ಸಿಜನ್ ಕೊರತೆ, ವೈದ್ಯಕೀಯ ಸಲಕರಣೆ ಕೊರತೆ ಸೇರಿದಂತೆ ಭಾರತದ ಸಮಸ್ಯೆಗಳಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆಯತ್ತ ಹೆಚ್ಚಿನ ಗಮನಹೋಗಿಲ್ಲ. ಸರ್ಕಾರ ಬಿಡುಗಡೆ ಮಾಡುವು ವರದಿ ಹೊರತು ಪಡಿಸಿದರೆ ಇತರ ಅಂಕಿ ಸಂಖ್ಯೆ ಕುರಿತು ಹೊರಬೀಳುತ್ತಿಲ್ಲ. ಸರ್ಕಾರಿ ವರದಿ ಪ್ರಕಾರ ಭಾರತದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 2 ಲಕ್ಷ ದಾಟಿದೆ. ಆದರೆ ಈ ಸಂಖ್ಯೆ ಈ ಹಿಂದೆಯೇ ದಾಟಿದೆ ಅನ್ನುತ್ತಿದೆ ಮತ್ತೊಂದು ವರದಿ.
ಈ ಕುರಿತ ಕೆಲ ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿದೆ. ಪ್ರತಿ ನಗರದಲ್ಲಿ ಶವಗಾರ, ಸ್ಮಶಾನ ಸೇರಿದಂತೆ ಕೊರೋನಾಗೆ ಬಲಿಯಾದವರನ್ನು ಹಲವೆಡೆ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ದೆಹಲಿ ನಗರದಲ್ಲಿ ಎಪ್ರಿಲ್ 18 ರಿಂದ 24ರ ವರೆಗೆ ಕೊರೋನಾಗೆ ಬಲಿಯಾದವರ ಸಂಖ್ಯೆ 1,938. ಇದು ಸರ್ಕಾರಿ ದಾಖಲೆ. ಈ ಕುರಿತು ಎನ್‌ಡಿಟಿವಿ ಮಾಧ್ಯಮದ ತನಿಖಾ ವರದಿಯಲ್ಲಿ ದೆಹಲಿಯ ಒಟ್ಟು 26 ಸ್ಮಶಾನದಲ್ಲಿ ಈ ಅವಧಿಯಲ್ಲಿ 3,096 ಕೊರೋನಾ ಸೋಂಕಿತ ಶವಗಳನ್ನು ಸುಡಲಾಗಿದೆ ಎಂದು ವರದಿ ಮಾಡಿದೆ.
ಬೆಂಗಳೂರಿನಲ್ಲಿ ಏಪ್ರಿಲ್ 18-22ರವರೆಗಿನ ಸರ್ಕಾರದ ದಾಖಲೆಗಳ ಪ್ರಕಾರ, 467 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಆದರೆ ತನಿಖಾ ವರದಿಯಲ್ಲಿ ಇದೇ ಅವಧಿಯಲ್ಲಿ 860 ಕೊರೋನಾ ಸೋಂಕಿತರ ಶವ ಸುಡಲಾಗಿದೆ.
ಬಹುತೇಕ ನಗರದಲ್ಲಿನ ವರದಿಯಲ್ಲಿ ಈ ರೀತಿಯ ವ್ಯತ್ಯಾಸಗಳು ಕಾಣುತ್ತಿದೆ. ಹೀಗಾಗಿ ಕೊರೋನಾಗೆ ಬಲಿಯಾದವರ ಸಂಖ್ಯೆ ಈಗಾಗಲೇ 2 ಲಕ್ಷ ದಾಟಿದೆ ಅನ್ನೋ ಮಾತುಗಳು ಬಲವಾಗುತ್ತಿದೆ. ಮುಂದಿನ ದಿನಗಳಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಹಾಗೂ ಕೊರೋನಾಗೆ ಬಲಿಯಾಗುತ್ತಿರುವುದು ಕಡಿಮೆಯಾಗಲಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ