
ಕೋಲ್ಕತಾ(ಏ.28): ಕೊರೋನಾ ವರೈಸ್‌ಗೆ ಬಲಿಯಾದ ರಾಜಕಾರಣಿಗಳ ಪೈಕಿ ಇದೀಗ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕ ಕಾಜಲ್ ಸಿನ್ಹಾ ಸೇರಿಕೊಂಡಿದ್ದಾರೆ. ಖಾರ್ದಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕಾಜಲ್ ಸಿನ್ಹಾ ಕೊರೋನಾದಿಂದ ನಿಧನರಾಗಿದ್ದಾರೆ. ಕಾಜಲ್ ಸಿನ್ಹಾಗೆ ಕೊರೋನಾ ಅಂಟಿಕೊಳ್ಳಲು ಚುನಾವಣೆ ಕಾರಣ. ಚುನಾವಣಾ ಆಯೋಗ ನಡೆಸಿದ ಕೊಲೆ ಎಂದು ಕಾಜಲ್ ಸಿನ್ಹಾ ಪತ್ನಿ ದೂರು ದಾಖಲಿಸಿದ್ದಾರೆ.
ಕೊರೋನಾ ಸೋಂಕಿನಿಂದ ಸಂಗೀತ ಗಾಯಕ, ಪದ್ಮಭೂಷಣ್ ರಾಜನ್ ಮಿಶ್ರಾ ನಿಧನ!
ಕೊರೋನಾ ವೈರಸ್ ರೋಗಲಕ್ಷಣ ಕಾರಣ ಆಸ್ಪತ್ರೆ ದಾಖಲಾದ ಕಾಜಲ್ ಸಿನ್ಹಾ ಆರೋಗ್ಯ ಕ್ಷೀಣಿಸಿತ್ತು. ಎಪ್ರಿಲ್ 25 ರಂದು ಕಾಜಲ್ ಸಿನ್ಹಾ ನಿಧನರಾಗಿದ್ದಾರೆ. ಇದೀಗ ಎಪ್ರಿಲ್ 28ರಂದು ಕಾಜಲ್ ಸಿನ್ಹಾ ಪತ್ನಿ ನಂದಿತಾ ಸಿನ್ಹಾ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ. ಕೊರೋನಾ ದೇಶದಲ್ಲಿ ತಾಂಡವವಾಡುತ್ತಿರುವಾಗ ಪಶ್ಚಿಮ ಬಂಗಾಳದಲ್ಲಿ 8 ಹಂತದ ಮತದಾನ ನಡೆಸಿದ ಕಾರಣವೇ ಪತಿ ನಿಧನರಾಗಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಇದು ಕೊನೆಯ ಗುಡ್ ಮಾರ್ನಿಂಗ್; ಮನಕಲುಕುತ್ತಿದೆ ಕೊರೋನಾಗೆ ಬಲಿಯಾದ ವೈದ್ಯೆಯ ಪೋಸ್ಟ್!
ಚುನಾವಣಾ ಆಯೋಗವೇ ನನ್ನ ಪತಿಯನ್ನು ಕೊಲೆ ಮಾಡಿದೆ ಎಂದು ದೂರಿನಲ್ಲಿ ಹೇಳಿದ್ದಾರೆ. ಚುನಾವಣಾ ಆಯೋಗ ಉಪಾಧ್ಯಕ್ಷ ಸುದೀಪ್ ಜೈನ್ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಚುನಾವಣಾ ಆಯೋಗದ ಅಸಡ್ಡೆ ಮತ್ತು ನಿರ್ಲಕ್ಷ್ಯ ವರ್ತನೆಯಿಂದ ನನ್ನ ಪತಿ ಹಾಗೂ ಹಲವರ ಸಾವಿಗೆ ಕೊರೋನಾ ಕಾರಣವಾಗಿದೆ ಎಂದು ದೂರಿನಲ್ಲಿ ನಂದಿತಾ ಸಿನ್ಹಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 8 ಹಂತದ ಮತದಾನ ಮಾಡಲಾಗಿದೆ. 8ನೇ ಹಾಗೂ ಅಂತಿಮ ಹಂತದ ಮತದಾನ ನಾಳೆ(ಏ.29)ಕ್ಕೆ ನಡೆಯಲಿದೆ. ಕೊರೋನಾ ಹೆಚ್ಚಾದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಬಾಕಿ ಉಳಿದ ಹಂತದ ಮತದಾನವನ್ನು ಒಂದೇ ಹಂತದಲ್ಲಿ ನಡೆಸಲು ಆಗ್ರಹಿಸಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ