ದೇಶಾದ್ಯಂತ 18,000 ಸೋಂಕಿತರು, 600ರ ಗಡಿಯತ್ತ ಸಾವು!

By Suvarna NewsFirst Published Apr 21, 2020, 9:31 AM IST
Highlights

18000 ಸೋಂಕಿತರು, 600ರ ಗಡಿಯತ್ತ ಸಾವು| ನಿನ್ನೆ ಒಂದೇ ದಿನ 1293 ಹೊಸ ಕೇಸು, 25 ಜನರ ಸಾವು| ಮಹಾರಾಷ್ಟ್ರ, ಗುಜರಾತ್‌ನಲ್ಲಿ ಕೊರೋನಾ ಭಾರೀ ಏರಿಕೆ

ನವದೆಹಲಿ(ಏ.21): ಕೊರೋನಾ ನಿಗ್ರಹಕ್ಕಾಗಿ ಹಲವು ಕ್ರಮಗಳ ಹೊರತಾಗಿಯೂ ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸೋಮವಾರ ಭಾರೀ ಪ್ರಮಾಣದಲ್ಲಿ ಹೊಸ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿವೆ.

ಸೋಮವಾರ ಒಂದೇ ದಿನ 1293 ಹೊಸ ಕೇಸು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 18322ಕ್ಕೆ ತಲುಪಿದೆ. ಜೊತೆಗೆ 25 ಜನ ಸಾವನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 590ಕ್ಕೆ ತಲುಪಿದೆ. ಇದೇ ವೇಳೆ ಈವರೆಗೆ 2969 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ದೇಶದ 65% ಸೋಂಕಿತರಲ್ಲಿ ಕೊರೋನಾ ಲಕ್ಷಣವೇ ಇರಲಿಲ್ಲ: ಆತಂಕ ಹುಟ್ಟಿಸಿದ ವರದಿ!

ಮಹಾ ಸ್ಫೋಟ: ದೇಶದಲ್ಲೇ ಅತಿಹೆಚ್ಚಿನ ಸೋಂಕು ಪತ್ತೆಯಾಗಿರುವ ಮಹಾರಾಷ್ಟ್ರದಲ್ಲಿ ಮತ್ತೆ 466 ಬೆಳಕಿಗೆ ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4669ಕ್ಕೆ ತಲುಪಿದೆ.

ಈ ಪೈಕಿ ಮುಂಬೈ ಒಂದರಲ್ಲೇ 3000ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. ಇನ್ನು ಗುಜರಾತ್‌ನಲ್ಲೂ ಸೋಮವಾರ 196 ಹೊಸ ಪ್ರಕರಣ ಬೆಳಕಿಗೆ ಬಂದಿದೆ, ಒಟ್ಟು ಪೀಡಿತರ ಸಂಖ್ಯೆ 1939ಗೆ ಏರಿದೆ.

click me!