
ಬೆಂಗಳೂರು(ಮಾ.22): ಕೊರೋನಾ ವಿರುದ್ಧ ಸಂಪೂರ್ಣ ಭಾರತ ಇಂದು ಒಂದಾಗಿ ಹೋರಾಡಿತ್ತು. ಭಾರತದ ಯಾವುದೇ ಬಂದ್, ಪ್ರತಿಭಟನೆ, ಸಂಭ್ರಮಾಚರಣೆ ಈ ಮಟ್ಟಿಗೆ ಯಶಸ್ಸು ಕಂಡಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಜನತಾ ಕರ್ಫ್ಯೂಗೆ ಭಾರತ ಕಂಡು ಕೇಳರಿಯದ ರೀತಿಯಲ್ಲಿ ಸ್ಪಂದನೆ ನೀಡಿದೆ. ಈ ಮೂಲಕ ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಂಪೂರ್ಣ ಭಾರತ ಒಗ್ಗಟ್ಟಾಗಿದೆ ಎಂಬ ಸಂದೇಶ ಸಾರಿದೆ.
ಜನತಾ ಕರ್ಫ್ಯೂ ವ್ಯಾಪಕ ಬೆಂಬಲ: ಮೋದಿ ಫಸ್ಟ್ ರಿಯಾಕ್ಷನ್.
ಭಾರತೀಯರ ಆರೋಗ್ಯ ಹಾಗೂ ಸುರಕ್ಷತೆಗಾಗಿ ಹಗಳಿರುವು ಶ್ರಮಿಸುತ್ತಿರುವ ವೈದ್ಯರು, ದಾದಿಯರು, ನರ್ಸ್, ಆಸ್ಪತ್ರೆ ಸಿಬ್ಬಂಧಿ ಸೇರಿದಂತ ಹಲವರಿಗೆ ಚಪ್ಪಾಳೆಯ ಕೃತಜ್ಞತೆ ಸಲ್ಲಿಸಲಾಯಿತು. ಇಡೀ ದೇಶವೆ ಸಂಜೆ 5 ಗಂಟೆಗೆ ಚಪ್ಪಾಳೆ, ಜಾಗಟೆ, ತಮಟೆ, ಗಂಟೆ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದರು. ರಕ್ಷಣಾ ಸಚಿವರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಬಹುತೇಕರು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು. ಈ ಚಪ್ಪಾಳೆಯಲ್ಲಿ ಚಿಂದಿ ಆಯುವವನ ಚಪ್ಪಾಳೆ ಇಡೀ ದೇಶದ ಗಮನಸೆಳೆದಿದೆ.
"
ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಇದೇ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಬೀದಿ ಬದಿಯ ಗುಡಿಸಲಿನಲ್ಲಿನ ಅಜ್ಜಿಯೊಬ್ಬರು ತಟ್ಟೆಗೆ ಬಡಿಯುತ್ತಾ ಕೃತಜ್ಞತಾ ಚಪ್ಪಾಳೆ ಸಲ್ಲಿಸಿರಿವುದು ಮನಕಲುಕುವಂತಿದೆ. ಕುಳಿತಲ್ಲಿಂದರೆ ಕೃತಜ್ಞತಾ ಚಪ್ಪಾಳೆ ಎಲ್ಲರ ಮನ ಗೆದ್ದಿದೆ.
"
ಒಂದೆಡೆ ಚಿಂದಿ ಆಯುವವನ ಚಪ್ಪಾಳೆ ವೈರಲ್ ಆಗಿದ್ದರೆ, ಇತ್ತ ತಮಟೆ, ಊಟದ ತಟ್ಟೆ ಹಿಡಿದು ಮಹಿಳೆಯರ ಕೃತಜ್ಞತೆ ವಿಡಿಯೋ ಕೂಡ ವೈರಲ್ ಆಗಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ