ನವದೆಹಲಿ (ಅ.08): ದೇಶಾದ್ಯಂತ ಕೊರೋನಾ (corona) ಅಬ್ಬರ ತಗ್ಗಿರುವ ಬೆನ್ನಲ್ಲೇ, ಸೋಂಕು ನಿಯಂತ್ರಣಕ್ಕೆ ಇನ್ನೂ ಮೂರು ತಿಂಗಳ ಕಾಲ ನಿರ್ಣಾಯಕವಾಗಿದೆ ಎಂದಿರುವ ಕೇಂದ್ರ ಸರ್ಕಾರ, ಮುಂದಿನ ಹಬ್ಬ ಮತ್ತು ಮದುವೆ ಸಮಾರಂಭಗಳ ಮುಖಾಂತರ ಕೊರೋನಾ ವೈರಸ್ ಮತ್ತೆ ಉದಯವಾಗಬಹುದು ಎಂದು ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಿಂದ ದೂರ ಇರುವಂತೆ ಮತ್ತು ಮನೆಯಲ್ಲೇ ಆಚರಿಸುವಂತೆ ತಿಳಿ ಹೇಳಿದೆ.
ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಇಲಾಖೆಯ (Health Department ಜಂಟಿ ಕಾರ್ಯದರ್ಶಿ ಲವ್ ಅಗರ್ ವಾಲ್, ‘ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಈ ಮೂರು ತಿಂಗಳ ಕಾಲ ದಯಮಾಡಿ ಜನರು ಎಚ್ಚರಿಕೆಯಿಂದಿರಬೇಕು.
undefined
ಭಾರತದ ಒತ್ತಡಕ್ಕೆ ಮಣಿದ ಬ್ರಿಟನ್: ಕ್ವಾರಂಟೈನ್ ರದ್ದು
ಅಲ್ಲದೆ ಜನರು ಅನಗತ್ಯ ಪ್ರವಾಸ, ಪ್ರಯಾಣ ಮತ್ತು ಹೆಚ್ಚು ಜನನಿಬಿಡ ಪ್ರದೇಶಗಳಿಗೆ ಹೋಗದೇ ಮನೆಯಲ್ಲೇ ಇರಬೇಕು. ಕೊರೋನಾ ವೈರಸ್‌ನ 2ನೇ ಅಲೆ ಇನ್ನೂ ಮುಕ್ತಾಯವಾಗಿಲ್ಲ. ಈಗಲೂ ಪ್ರತೀ ನಿತ್ಯ ದೇಶಾದ್ಯಂತ 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ. ಕೋವಿಡ್ ಸ್ಥಿತಿ ಸ್ಥಿರವಾಗಿದೆ ಎಂಬ ಕಾರಣಕ್ಕೆ ನಾವು ಮೈಮರೆತರೆ ದುರದೃಷ್ಟಕರ ಘಟನಾವಳಿಗಳು ಮತ್ತೆ ಸಂಭವಿಸಲಿವೆ’ ಎಂದು ಹೇಳಿದರು.
ಕೋವಿಡ್ ಓಟಕ್ಕೆ ಲಗಾಮು
ರಾಜ್ಯದಲ್ಲಿ ಕೋವಿಡ್-19ರ(Covid19) ಉಪಟಳ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದ್ದು, ಸಾಲು ಸಾಲು ಹಬ್ಬ, ಸಾಮಾನ್ಯ ಜನಜೀವನ ಸ್ಥಿತಿ ಇದ್ದರೂ ಸೋಂಕಿನ ಪ್ರಕರಣ, ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಸದ್ಯ ರಾಜ್ಯದ ಪಾಸಿಟಿವಿಟಿ ದರ ಶೇ. 0.53ಕ್ಕೆ ಇಳಿಕೆಯಾಗಿದೆ. ಇದೇ ವೇಳೆ ರಾಜ್ಯದಲ್ಲಿ ಶೇ.81ರಷ್ಟು ಅರ್ಹ ಫಲಾನುಭವಿಗಳು ಮೊದಲ ಡೋಸ್, ಶೇ.36ರಷ್ಟು ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.
ರಾಜ್ಯದ 13 ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಕೋವಿಡ್‌ನಿಂದ ಮೃತಪಟ್ಟಿದ್ದು ವರದಿಯಾಗಿಲ್ಲ. ಆರೋಗ್ಯ ಇಲಾಖೆ ಅಕ್ಟೋಬರ್ 5ರವರೆಗಿನ ಮಾಹಿತಿಯ ಪ್ರಕಾರ ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕಲಬುರಗಿ, ಕೋಲಾರ, ಕೊಪ್ಪಳ, ಮಂಡ್ಯ, ರಾಯಚೂರು, ಉಡುಪಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕಳೆದ ಏಳು ದಿನದಿಂದ ಕೋವಿಡ್‌ನಿಂದ ಮೃತಪಟ್ಟಿದ್ದು ವರದಿಯಾಗಿಲ್ಲ. ಉಳಿದ ಜಿಲ್ಲೆಗಳಲ್ಲೂ ಕೋವಿಡ್‌ನಿಂದ ಮೃತರಾಗುತ್ತಿರುವ ಪ್ರಮಾಣ ಬಹಳ ಕಡಿಮೆ ಇದೆ. ಬೆಂಗಳೂರು ನಗರದಲ್ಲಿ ಪ್ರತಿದಿನ ನಾಲ್ಕೈದು ಸಾವು ವರದಿಯಾಗುತ್ತಿದ್ದರೆ ಉಳಿದ ಜಿಲ್ಲೆಗಳಲ್ಲಿ ಒಂದೆರಡು ಸಾವು ಘಟಿಸುತ್ತಿತ್ತು.
ಇದೇ ವೇಳೆ ಕೋವಿಡ್ ಪ್ರಕರಣದಲ್ಲಿಯೂ ಗಣನೀಯ ಇಳಿಕೆ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳ ಮೊದಲ ವಾರ 5,612 ಪ್ರಕರಣ ವರದಿಯಾಗಿದ್ದರೆ ಅಕ್ಟೋಬರ್‌ನ ಮೊದಲ ವಾರ 3,676 ಪ್ರಕರಣ ಪತ್ತೆಯಾಗಿದೆ. ಇದೇ ವೇಳೆ ಜಿಲ್ಲೆಗಳಲ್ಲಿನ ಸಕ್ರಿಯ ಪ್ರಕರಣಗಳು ಕೂಡ ಕಡಿಮೆ ಆಗಿದೆ.