ಆಫ್ರಿಕಾದಿಂದ 12 ಚೀತಾಗಳ 2ನೇ ತಂಡ ಈ ತಿಂಗಳು ಆಗಮನ ?

By Kannadaprabha NewsFirst Published Jan 4, 2023, 11:56 AM IST
Highlights

ಕಳೆದ ಸೆಪ್ಟೆಂಬರ್‌ನಲ್ಲಿ ಆಗಮಿಸಿದ್ದ 8 ಚೀತಾಗಳನ್ನು ಮಧ್ಯಪ್ರದೇಶಧ ಅರಣ್ಯಕ್ಕೆ ಬಿಟ್ಟು ಅವು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ನಡುವೆಯೇ 2ನೇ ಹಂತದಲ್ಲಿ ಆಫ್ರಿಕಾ ಚೀತಾಗಳು ಈ ತಿಂಗಳೇ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ.

ನವದೆಹಲಿ: ಕಳೆದ ಸೆಪ್ಟೆಂಬರ್‌ನಲ್ಲಿ ಆಗಮಿಸಿದ್ದ 8 ಚೀತಾಗಳನ್ನು ಮಧ್ಯಪ್ರದೇಶಧ ಅರಣ್ಯಕ್ಕೆ ಬಿಟ್ಟು ಅವು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ನಡುವೆಯೇ 2ನೇ ಹಂತದಲ್ಲಿ ಆಫ್ರಿಕಾ ಚೀತಾಗಳು ಈ ತಿಂಗಳೇ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದಿಂದ 12 ಚೀತಾಗಳ ಎರಡನೇ ಬ್ಯಾಚ್‌ ಅನ್ನು ಇದೇ ಜನವರಿಯಲ್ಲಿ ಭಾರತದ ರಾಷ್ಟ್ರೀಯ ಉದ್ಯಾನವನ ಕುನೊಗೆ ಸ್ಥಳಾಂತರಿಸುವ ಸಾಧ್ಯತೆಗಳಿದ್ದು ಈ ಕುರಿತು ಆಫ್ರಿಕಾ ಅಧಿಕಾರಿಗಳೊಂದಿಗಿನ ಮಾತುಕತೆ ಮುಂದುವರೆದ ಹಂತದಲ್ಲಿದೆ ಎಂದು ಕೇಂದ್ರ ಪರಿಸರ ಸಚಿವಾಲಯದ ಮೂಲಗಳು ತಿಳಿಸಿವೆ. ಈ ಬಾರಿ ದ.ಆಫ್ರಿಕಾದಿಂದ 12-14 ಚೀತಾಗಳನ್ನು (8-10 ಗಂಡು, 4-6 ಹೆಣ್ಣು) ಆಮದು ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಚೀತಾಗಳ ಮೊದಲ ಬ್ಯಾಚನ್ನು ನಮೀಬಿಯಾದಿಂದ ಆಮದು ಮಾಡಿಕೊಳ್ಳಲಾಗಿತ್ತು. ಭಾರತದಲ್ಲಿ ಚೀತಾ ಸಂತತಿ ಅಳಿಸಿ 70 ವರ್ಷಗಳಾಗಿದ್ದು ಇವುಗಳ ಅಸ್ತಿತ್ವವನ್ನು ಮರುಪರಿಚಯಿಸಲು ವನ್ಯಜೀವಿ ಇಲಾಖೆಯು ಸಿದ್ಧಪಡಿಸಿದ ಕ್ರಿಯಾ ಯೋಜನೆ ಇದಾಗಿದೆ.

ಮೊದಲ ಬಾರಿ ನೀಲ್ಗಾಯ್‌ ಬೇಟೆಯಾಡಿದ ಚೀತಾ

ಭಾರತದಲ್ಲಿ ನಮೀಬಿಯಾ ಚೀತಾಗಳಿಂದ ಮೊದಲ ಬೇಟೆ

click me!