ಕೊರೋನಾ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ರಾಷ್ಟ್ರವನ್ನು ಹಿಂದಿಕ್ಕಿದ ದೆಹಲಿ

By Suvarna NewsFirst Published Jul 12, 2020, 7:33 PM IST
Highlights

ಕೊರೋನಾ ವಿರುದ್ಧ ಹೋರಾಟಕ್ಕೆ ಹತ್ತು ಹಲವು ಕ್ರಮಗಳನ್ನು ಕೈಗೊಂಡಿರುವ ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಾಗಿದೆ

ನವದೆಹಲಿ, (ಜುಲೈ.12):  ದೆಹಲಿಯಲ್ಲಿ ದಿನದಿಂದ ದಿನಕ್ಕೆ ಸೋಂಕು ಹರಡುತ್ತಿರುವ ಪ್ರಮಾಣ ಮಾತ್ರ ಊಹೆಗೂ ನಿಲುಕದಷ್ಟು ಹೆಚ್ಚಾಗಿದೆ. ಇದರ ಮಧ್ಯೆ ಖುಷಿಯ ಸಂಗತಿ ಅಂದ್ರೆ, ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ದೆಹಲಿ ರಾಷ್ಟ್ರವನ್ನು ಹಿಂದಿಕ್ಕಿದೆ.

ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಕೋರೊನಾ ವಿರುದ್ಧ ಹೋರಾಡಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. 

ಭಾರತದಲ್ಲಿ ಉದ್ಘಾಟನೆಗೊಂಡ ವಿಶ್ವದ ಅತಿದೊಡ್ಡ ಕೋವಿಡ್-19 ಚಿಕಿತ್ಸಾ ಕೇಂದ್ರ

ತಪಾಸಣೆ, ಚಿಕಿತ್ಸೆಗಳಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಮನೆಮನೆಗೆ ಹೋಗಿ ಟೆಸ್ಟ್​ ಮಾಡುವುದು, ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ತ್ವರಿತಗತಿಯಲ್ಲಿ ಟ್ರೇಸ್​ ಮಾಡುವ ಕೆಲಸ ಭರದಿಂದ ಸಾಗುತ್ತಿದೆ. 

ಈ ಹಿನ್ನೆಲೆಯಲ್ಲಿ ಉಳಿದ ರಾಜ್ಯಗಳಿಗಿಂತ ದೆಹಲಿಯಲ್ಲಿ ಕೊರೋನಾದಿಂದ ಚೇತರಿಕೆಯ ಪ್ರಮಾಣ 79.06%ಕ್ಕೆ ಏರಿಕೆಯಾಗಿರುವುದು ಸಂತಸದ ಸಂಗತಿಯಾಗಿದೆ. ಇನ್ನು ಜೂನ್​​ಗಿಂತಲೂ ಮೊದಲು ತುಂಬ ಕಡಿಮೆ ಇದ್ದ ಚೇತರಿಕೆಯ ಪ್ರಮಾಣ ಜೂ.30ರಂದು ಶೇ.66.03ರಷ್ಟಾಗಿತ್ತು. ಇದೀಗ ಅದರ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಆದ್ರೆ, ಕೊರೋನಾ ಪಾಸಿಟಿವ್ ಪ್ರಮಾಣ ಶೇ 14.43ರಷ್ಟಿದ್ದು, ಆತಂಕ ಹುಟ್ಟಿಸುತ್ತಿದೆ.

ದೆಹಲಿ ಅಂಕಿ ಅಂಶ ಇಲ್ಲಿದೆ
ಜುಲೈ 12 ಬೆಳಗ್ಗೆ 9 ಗಂಟೆ ವರೆಗಿನ ಮಾಹಿತಿ ಪ್ರಕಾರ ಈವರೆಗೆ ದೆಹಲಿಯಲ್ಲಿ 768617 ಪರೀಕ್ಷೆಗಳನ್ನ ಮಾಡಲಾಗಿದ್ದು, 110921 ಕೇಸ್‌ಗಳು ಪತ್ತೆಯಾಗಿವೆ. ಈ ಪೈಕಿ 87692 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು,  ಸದ್ಯ 19895 ಸಕ್ರಿಯ ಕೇಸ್‌ಗಳಿವೆ. ಇನ್ನು 3334 ಜನರು ಬಲಿಯಾಗಿದ್ದಾರೆ.

ಒಟ್ಟಿನಲ್ಲಿ  ರಾಷ್ಟ್ರ ರಾಜಧಾನಿಯಲ್ಲಿ ಭಯ ಹುಟ್ಟಿಸಿದ್ದ ಕೊರೋನಾ ರಿಕವರಿ ರೇಟ್​ ಅಧಿಕವಾಗಿರುವುದು ಸಂತಸದ ಸುದ್ದಿ.

click me!