ವಂದೇ ಮಾತರಂ ಹಾಡೋದಿಲ್ಲ, ನಾವು ಅಲ್ಲಾನನ್ನು ನಂಬಿರುವವರು ಎಂದ INDIA ಮೈತ್ರಿಯ ನಾಯಕ!

Published : Jul 19, 2023, 04:02 PM ISTUpdated : Jul 19, 2023, 04:17 PM IST
ವಂದೇ ಮಾತರಂ ಹಾಡೋದಿಲ್ಲ, ನಾವು ಅಲ್ಲಾನನ್ನು ನಂಬಿರುವವರು ಎಂದ INDIA ಮೈತ್ರಿಯ ನಾಯಕ!

ಸಾರಾಂಶ

ಮಹಾರಾಷ್ಟ್ರದ ಸದನದಲ್ಲಿ India ಮೈತ್ರಿಕೂಟದ ಭಾಗವಾಗಿರುವ ಸಮಾಜವಾದಿ ಪಾರ್ಟಿಯ ಶಾಸಕ ಅಬು ಅಜ್ಮಿ ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ. ನಾನು ವಂದೇ ಮಾತರಂ ಹಾಡೋದಿಲ್ಲ. ನಮ್ಮ ಧರ್ಮದಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಮುಂಬೈ (ಜು.19): ನಾವು ವಂದೇ ಮಾತರಂ ಹಾಡೋದಿಲ್ಲ. ನಮ್ಮ ಧರ್ಮದಲ್ಲಿ ಇದಕ್ಕೆ ಅವಕಾಶವಿಲ್ಲ. ನಾವು ನಂಬಿರುವುದು ಅಲ್ಲಾನನ್ನು ಮಾತ್ರ ಎಂದುಸ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ಮಹಾರಾಷ್ಟ್ರ ಸದನದಲ್ಲಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಇದನ್ನೇ ಇರಿಸಿಕೊಂಡು ಬಿಜೆಪಿ ಟೀಕೆ ಮಾಡಿದ್ದು, India ಮೈತ್ರಿಕೂಟದ ಭಾಗವಾಗಿರುವ ಸಮಾಜವಾದಿ ಪಕ್ಷದ ಶಾಸಕ ಭಾರತದ ಆತ್ಮದ ಗೀತೆಯಾಗಿರುವ ವಂದೆ ಮಾತರಂ ಹಾಡೋದಿಲ್ಲ ಎನ್ನುತ್ತಾರೆ. ಇವರ ಧ್ಯೇಯ India ಅಲ್ಲ, ಇಂಡಿಯಾ ವಿರೋಧಿಯೇ ಇವರ ಧ್ಯೇಯ ಎಂದು ಟೀಕಿಸಿದೆ. ಅಜ್ಮಿ ಅವರು ಭಾರತದ ರಾಷ್ಟ್ರಗಾನವಾಗಿರುವ 'ವಂದೇ ಮಾತರಂ' ಅನ್ನು ಪಠಿಸುವುದಿಲ್ಲ ಎಂದು ಹೇಳಿದ್ದು ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ವಂದೇ ಮಾತರಂ ಗೀತೆಯಲ್ಲಿ ಎಲ್ಲರೂ ದೇಶಕ್ಕೆ ನಮಸ್ಕರಿಸಬೇಕು ಎಂದು ಹೇಳುತ್ತದೆ. ಆದರೆ, ನಮ್ಮ ಧರ್ಮ (ಇಸ್ಲಾಂ) ಇದಕ್ಕೆ ಅವಕಾಶ ನೀಡೋದಿಲ್ಲ. ನಾವು ಯಾರಿಗೂ ನಮಸ್ಕಾರ ಮಾಡೋದಿಲ್ಲ. ತಾಯಿಗೂ ಕೂಡ ನಾವು ನಮಸ್ಕಾರ ಮಾಡೋದಿಲ್ಲ ಎಂದು ಬುಧವಾರ ಸದನದಲ್ಲಿ ಹೇಳಿದ್ದಾರೆ.

“ಮಾರ್ಚ್ 29 ರಂದು ಸಂಜೆ 5 ಗಂಟೆಗೆ ಔರಂಗಾಬಾದ್‌ನ ರಾಮ ಮಂದಿರದ ಬಳಿ ಮೂವರು ಬಂದಿದ್ದರು. ಈ ದೇಶದಲ್ಲಿ ಉಳಿಯಬೇಕಾದರೆ ವಂದೇ ಮಾತರಂ ಹೇಳಬೇಕು ಎಂದು ಘೋಷಣೆಗಳನ್ನು ಕೂಗಿದರು. ಆದರೆ, ಅಲ್ಲಾನಲ್ಲಿ ನಂಬಿಕೆ ಇರುವುದರಿಂದ ವಂದೇ ಮಾತರಂ ಹೇಳಲು ಸಾಧ್ಯವಿಲ್ಲ ಎಂದು ಅವರಿಗೆ ಹೇಳಿದ್ದೆ ಎಂದು ಅಜ್ಮಿ ತಿಳಿಸಿದ್ದಾರೆ. ಇದರ ಬೆನ್ನಲ್ಲಿಯೇ ಬಿಜೆಪಿ ನಾಯಕರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕೋಲಾಹಲ ಎಬ್ಬಿಸಿದ್ದು, ಅಬು ಅಜ್ಮಿ ತನ್ನ ಮಾತನ್ನು ವಾಪಾಸ್‌ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಆ ಬಳಿಕ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ಅಬು ಅಜ್ಮಿ, 'ವಂದೇ ಮಾತರಂ ಬಗ್ಗೆ ನನಗೆ ಗೌರವವಿದೆ. ಆದರೆ, ನಾನು ಇದನ್ನು ಹೇಳೋದಿಲ್ಲ. ಅಲ್ಲಾನ ಹೊರತಾಗಿ ಯಾರೊಬ್ಬರಿಗೂ ತಲೆಬಾಗಬೇಡ ಎಂದು ನನಗೆ ನನ್ನ ಧರ್ಮ ಹೇಳುತ್ತದೆ' ಎಂದು ಅಜ್ಮಿ ಹೇಳಿದ್ದಾರೆ.


ವಂದೇ ಮಾತರಂ ಮಾತನಾಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಬಹಿರಂಗವಾಗಿ ಹೇಳಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಜೈಹಿಂದ್ ಟ್ವೀಟ್ ಮಾಡಿದ್ದಾರೆ. ಅವರ ಧರ್ಮ ಅದಕ್ಕೆ ಅವಕಾಶ ನೀಡದ ಕಾರಣ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು. ಸಮಾಜವಾದಿ ಪಕ್ಷವೂ INDIA ಮೈತ್ರಿಕೂಟದ ಒಂದು ಭಾಗವಾಗಿರುವುದರಿಂದ ಈ ಇವರ INDIA ಭಾರತ ವಿರೋಧಿ ಕಲ್ಪನೆಯಾಗಿದೆ. INDIA  ಇವರ ಪಾಲಿಗೆ ಕೇವಲ ಹೆಸರಷ್ಟೇ ಇದರಲ್ಲಿ ಯಾವುದೇ ಅಜೆಂಟಾ ಇಲ್ಲ. ಸಮಾಜವಾದಿ ಪಕ್ಷವು ಭಯೋತ್ಪಾದಕರ ವಿಚಾರದಲ್ಲಿ ಮೃದಯ ಧೋರಣೆ ಹೊಂದಿದೆ. ಯಾಕೂಬ್, ಅಫ್ಜಲ್ ಅವರನ್ನು ದೇಶಭಕ್ತರೆಂದು ಕರೆದ ಪಕ್ಷ ಅದು. ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಮತ್ತು 26/11 ದಾಳಿಗಳನ್ನು ಭಾರತದ ಮೇಲೆ ದೂಷಿಸುತ್ತಿದೆಯೇ ಹೊರತು ಪಾಕಿಸ್ತಾನದ ಮೇಲೆ ಅಲ್ಲ. ಇದು ಇವರ INDIAದ ನಿಜವಾದ ಮುಖ ಇದಕ್ಕೆ ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಉತ್ತರ ನೀಡುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. 

ವಿಪಕ್ಷಗಳ ಮೈತ್ರಿಗೆ INDIA ಹೆಸರು, ನಿತೀಶ್‌ ಕುಮಾರ್‌ ಅಪಸ್ವರ; ಇತ್ತ ಚುನಾವಣಾ ಆಯೋಗಕ್ಕೆ ದಾಖಲಾಯ್ತು ದೂರು!

;;ಅಬು ಅಜ್ಮಿ ಅವರಿಗೆ ನನ್ನ ವಿನಂತಿ ಏನೆಂದರೆ, ಈ ದೇಶದಲ್ಲಿ ಲಕ್ಷಾಂತರ ಜನರು ವಂದೇ ಮಾತರಂನಲ್ಲಿ ನಂಬಿಕೆ ಹೊಂದಿದ್ದಾರೆ, ಅವರು ನೀಡಿದ ಹೇಳಿಕೆ ಸೂಕ್ತವಲ್ಲ, ತಾಯಿಯನ್ನು ಗೌರವಿಸಬೇಡಿ ಎಂದು ಯಾವುದೇ ಧರ್ಮವು ಸೂಚಿಸುವುದಿಲ್ಲ. ಇದು ಧಾರ್ಮಿಕ ಗೀತೆ ಅಲ್ಲ. ವಂದೇ ಮಾತರಂ ನಮ್ಮದು. ರಾಷ್ಟ್ರಗಾನ" ಎಂದು ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

Mysterious Metal Dome: ಆಸ್ಟ್ರೇಲಿಯಾ ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತು, ಇಸ್ರೋದಿಂದ ಸ್ಪಷ್ಟೀಕರಣ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!