ಜೀವ ಮತ್ತು ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಇಂಡಿಯಾ ಕೂಟದ ಮಿತ್ರಪಕ್ಷಗಳು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದವು.
ನವದೆಹಲಿ: ಜೀವ ಮತ್ತು ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಇಂಡಿಯಾ ಕೂಟದ ಮಿತ್ರಪಕ್ಷಗಳು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದವು. ಆರೋಗ್ಯ ಮತ್ತು ಜೀವವಿಮೆ ಮೇಲೆ ಶೇ.18 ರಷ್ಟು ಜಿಎಸ್‌ಟಿ ತೆರಿಗೆ ವಿಧಿಸುತ್ತಿರುವುದು ತಪ್ಪು ಎಂದು ಕಾಂಗ್ರೆಸ್, ಟಿಎಂಸಿ, ಎಎಪಿ ಮತ್ತು ಎನ್‌ಸಿಪಿ (ಎಸ್‌ಸಿ) ಮುಂತಾದ ಮಿತ್ರ ಪಕ್ಷಗಳ ಸಂಸದರು ‘ತೆರಿಗೆ ಭಯೋತ್ಪಾನೆ’ಎಂಬ ಭಿತ್ತಿಪತ್ರಗಳನ್ನು ತೋರಿಸಿ ಪ್ರತಿಭಟಿಸಿದರು. ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನಿರ್ಮಲಾ ಅವರಿಗೆ ಪತ್ರ ಬರೆದು ತೆರಿಗೆ ಹಿಂಪಡೆಯಿರಿ ಎಂದು ಮನವಿ ಮಾಡಿದ್ದರು.
ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ: ಎಲ್‌ಟಿಜಿಸಿ ತೆರಿಗೆ ಬದಲು
ನವದೆಹಲಿ: ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ (ಎಲ್‌ಟಿಜಿಸಿ) ಪದ್ಧತಿಯಲ್ಲಿ ಬಜೆಟ್‌ನಲ್ಲಿ ಮಾಡಿದ್ದ ಕೆಲವು ಬದಲಾವಣೆಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಮೃಧು ಧೋರಣೆ ತೋರಿದೆ. ಆಸ್ತಿ ಮಾಲೀಕರು ಈ ಹಿಂದೆ ಲಭ್ಯವಿದ್ದ ಇಂಡೆಕ್ಸೇಷನ್ ಬಳಸಿಕೊಂಡು ಶೇ.20ರ ದರದಲ್ಲಿ ತೆರಿಗೆ ಪಾವತಿಸುವ ಅಥವಾ ಇಂಡೆಕ್ಸೇಷನ್ ಇಲ್ಲದೇ ಶೇ.12.5ರ ದರದಲ್ಲಿ ತೆರಿಗೆ ಪಾವತಿಯ ಅವಕಾಶ ಕಲ್ಪಿಸಿ ಕೊಟ್ಟಿದೆ. ಆದರೆ ಈ ಅವಕಾಶ 2024ರ ಜು.23ಕ್ಕೆ ಮೊದಲು ಖರೀದಿ ಮಾಡಿದ ಆಸ್ತಿಗೆ ಮಾತ್ರ ಸೀಮಿತವಾಗಿರಲಿದೆ. ಈ ಕುರಿತು ಸರ್ಕಾರ ಹಣಕಾಸು ಮಸೂದೆಯಲ್ಲಿ ತಿದ್ದುಪಡಿ ಮಾಡಿದೆ ಎಂದು ವರದಿಗಳು ತಿಳಿಸಿವೆ.
'ಜೀವವಿಮೆ, ವೈದ್ಯಕೀಯ ವಿಮೆ ಮೇಲಿನ ಶೇ. 18 ಜಿಎಸ್‌ಟಿ ತೆಗೆದುಹಾಕಿ..' ವಿತ್ತ ಸಚಿವೆಗೆ ನಿತಿನ್ ಗಡ್ಕರಿ ಪತ್ರ!
ಈ ಹಿಂದೆ ಆಸ್ತಿ ಮಾಲೀಕರು, ತಾವು ಆಸ್ತಿ ಮಾರಿದಾಗ ಬಂದ ಲಾಭಕ್ಕೆ ಇಂಡೆಕ್ಸೇಷನ್ ಬಳಸಿಕೊಂಡು ಅಂದರೆ ಹಣದುಬ್ಬರವನ್ನು ಮೈನಸ್ ಮಾಡಿ ಉಳಿದ ಲಾಭದ ಮೊತ್ತಕ್ಕೆ ಮಾತ್ರ ತೆರಿಗೆ ಕಟ್ಟಿದರೆ ಸಾಕಿತ್ತು. ಆದರೆ ಹೊಸ ಪ್ರಸ್ತಾಪದಲ್ಲಿ ಇಂಡೆಕ್ಷೇಷನ್ ಅವಕಾಶ ಕೈಬಿಟ್ಟು ಶೇ.12.5ರಷ್ಟು ತೆರಿಗೆ ಕಟ್ಟಿದರೆ ಸಾಕು ಎಂದಿತ್ತು. ಮೇಲ್ನೋಟಕ್ಕೆ ಇದು ಲಾಭ ಎಂದು ಕಂಡರೂ, ಇದರಿಂದ ಹೆಚ್ಚಿಗೆ ತೆರಿಗೆ ಕಟ್ಟಬೇಕಾಗಿ ಬರಲಿದೆ ಎಂದು ಟೀಕೆ ವ್ಯಕ್ತವಾಗಿತ್ತು.
ರೈತರಿಂದ 32440 ಕೋಟಿ ವಿಮೆ ಪ್ರೀಮಿಯಂ: 1.64 ಲಕ್ಷ ಕೋಟಿ ಕ್ಲೇಮ್ ಪಾವತಿ
ನವದೆಹಲಿ: ಪ್ರಧಾನ ಮಂತ್ರಿ ಫಸಲ್ ಭೀಮಾ ಜೋಜನೆಯಡಿ ದೇಶದ ರೈತರು ಒಟ್ಟಾರೆ 32,440 ಕೋಟಿ ರು.ನಷ್ಟು ವಿಮಾ ಪ್ರೀಮಿಯಂ ಹಣ ಪಾವತಿ ಮಾಡಿದ್ದು, ಅವರಿಗೆ 1.64 ಲಕ್ಷ ಕೋಟಿ ರು. ವಿಮಾ ಕ್ಲೇಮು ಪಾವತಿ ಮಾಡಲಾಗಿದೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ ವಿಮೆಯ ಮೊತ್ತ ಲಭಿಸುವುದರಲ್ಲಿ ತಡವಾಗುತ್ತಿರುವ ಬಗ್ಗೆ ಉತ್ತರಿದ ಸಿಂಗ್, ಬಹುತೇಕ ಸಂದರ್ಭಗಳಲ್ಲಿ ಈ ವಿಳಂಬಕ್ಕೆ ರಾಜ್ಯಗಳೇ ಕಾರಣ. ಒಂದೊಮ್ಮೆ ವಿಳಂಬವಾದದ್ದು ಕಂಡುಬಂದಲ್ಲಿ ವಿಮಾ ಕಂಪನಿಗಳಿಗೆ ಶೇ.12ರಷ್ಟು ದಂಡ ವಿಧಿಸಲಾಗುತ್ತದೆ. ಈ ಯೋಜನೆಯನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲು ರಾಜ್ಯಗಳೂ ಶ್ರಮಿಸಬೇಕು ಎಂದು ಹೇಳಿದರು.
ರಾಜ್ಯದ ರಸ್ತೆ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ: ಕೇಂದ್ರ ಸಚಿವ ನಿತಿನ್ ಗಡ್ಕರಿ