ಭಾರತದ 75ನೇ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಮುಖ್ಯ ಅತಿಥಿ!

By Suvarna NewsFirst Published Nov 27, 2022, 5:12 PM IST
Highlights

ಭಾರತದ ಗಣರಾಜ್ಯೋತ್ಸವ ದಿನಾಚರಣೆಗೆ ತಯಾರಿ ಆರಂಭಗೊಂಡಿದೆ. ಇದೀಗ ವಿದೇಶಾಂಗ ಇಲಾಖೆ ಈ ಬಾರಿಯ ಅತಿಥಿ ಪಟ್ಟಿ ಪ್ರಕಟಿಸಿದೆ. ಈಜಿಪ್ಟ್ ಅಧ್ಯಕ್ಷ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.

ನವೆದಹಲಿ(ನ.27): ಭಾರತ ಈ ಬಾರಿ 75ನೇ ಗಣರಾಜ್ಯೋತ್ಸವ ಸಂಭ್ರಮ ಆಚರಿಸುತ್ತಿದೆ.  ಕಳೆದ ಎರಡು ವರ್ಷ ಕೊರೋನಾ ಕಾರಣದಿಂದ ಭಾರತದ ಗಣರಾಜ್ಯೋತ್ಸವ ಆಚರಣೆಗೆ ವಿದೇಶಗಳಿಂದ ಅತಿಥಿಗಳನ್ನು ಆಹ್ವಾನಿಸಿಲ್ಲ. ಇದೀಗ ಎರಡು ವರ್ಷಗಳ ಬಳಿಕ ಮತ್ತೆ ಭಾರತ ಗಣರಾಜ್ಯೋತ್ಸವ ಸಂಭ್ರಮಕ್ಕೆ ಅತಥಿಗಳನ್ನು ಆಹ್ವಾನಿಸಿದೆ. ಇದೀಗ ಭಾರತೀಯ ವಿದೇಶಾಂಗ ಇಲಾಖೆ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅರಬ್ ರಿಪಬ್ಲಿಕ್ ಈಜಿಪ್ಟ್ ಅಧ್ಯಕ್ಷ ಭಾರತದ ಗಣರಾಜ್ಯೋತ್ಸವದ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.

ಎರಡು ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧಕ್ಕೆ 75 ವರ್ಷಗಳು ಸಂದಿಸಿದೆ. ಹೀಗಾಗಿ ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧದ ವಿಚಾರದಲ್ಲೂ ಈಜಿಪ್ಟ್ ಅಧ್ಯಕ್ಷ ಭಾರತದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಅತೀ ಮುಖ್ಯವಾಗಿದೆ. ಈಗಾಗಲೇ ವಿದೇಶಾಂಗ ಸಚಿವ ಜೈಶಂಕರ್, ಈಜಿಪ್ಟ್ ಅಧ್ಯಕ್ಷರಿಗೆ ಪ್ರಧಾನಿ ನರೇಂದ್ರ ಮೋದಿ ಮೂಲಕ ಆಮಂತ್ರಣ ಪತ್ರ ಕಳುಹಿಸಲಾಗಿದೆ. ಈಜಿಪ್ಟ್ ಅಧ್ಯಕ್ಷರ ಕಾರ್ಯಾಲಯಿಂದ ಪಾಲ್ಗೊಳ್ಳುವಿಕೆಯ ಕುರಿತು ಪ್ರತಿಕ್ರಿಯೆ ಬಂದಿದೆ.

ಯುದ್ಧ ಸ್ಥಗಿತಕ್ಕೆ ರಷ್ಯಾ-ಉಕ್ರೇನ್‌ ನಡುವೆ ಭಾರತ ಸಂಧಾನ?

2023ರ ಜ.26ರಂದು ದೆಹಲಿಯ ಕರ್ತವ್ಯಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಮುಖ್ಯ ಕಾರ್ಯಕ್ರಮಕ್ಕೆ ಈ ಬಾರಿ ಈಜಿಪ್‌್ಟಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಎಲ್‌-ಸಿಸಿ ಮುಖ್ಯಅತಿಥಿಯಾಗಿ ಆಗಮಿಸುವ ಸಾಧ್ಯತೆ ಇದೆ. ಭಾರತದ ವಿದೇಶಾಂಗ ವ್ಯವಹಾರ ಖಾತೆ ಸಚಿವ ಎಸ್‌.ಜೈಶಂಕರ್‌ ಕಳೆದ ತಿಂಗಳು ಈಜಿಪ್‌್ಟಪ್ರವಾಸ ಕೈಗೊಂಡ ವೇಳೆ ಈ ಕುರಿತು ಅಧ್ಯಕ್ಷ ಅಬ್ದೆಲ್‌ ಅವರಿಗೆ ಔಪಚಾರಿಕ ಆಹ್ವಾನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತದ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಈಜಿಪ್ಟಿನ ಅಧ್ಯಕ್ಷರು ಬರುತ್ತಿರುವುದು ಇದೇ ಮೊದಲು. ಕೊರೋನಾ ವೈರಸ್‌ ಕಾರಣ 2021 ಹಾಗೂ 2022ರಲ್ಲಿ ಯಾವುದೇ ವಿದೇಶಿ ಅತಿಥಿಯನ್ನು ಆಹ್ವಾನಿಸಿರಲಿಲ್ಲ. ವಿವಿಧ ದೇಶಗಳ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಇನ್ನಷ್ಟುಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ತನ್ನ ಆಪ್ತ ದೇಶಗಳ ಗಣ್ಯರೊಬ್ಬರಿಗೆ ಭಾರತ ಸರ್ಕಾರ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತದೆ.

ಗಣರಾಜ್ಯೋತ್ಸವ ಟ್ಯಾಬ್ಲೋಗೆ 3 ಬಗೆಯ ಥೀಮ್‌
2023ರಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನವಾಗುವ ಟ್ಯಾಬ್ಲೋಗಳಿಗೆ ಸಂಬಂಧಿಸಿದಂತೆ 3 ನಿರ್ದಿಷ್ಟಥೀಮ್‌ಗಳನ್ನು ಕೇಂದ್ರ ಸರ್ಕಾರ ನೀಡಿದೆ. ಇಂಡಿಯಾಃ75, ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಮತ್ತು ನಾರಿಶಕ್ತಿ ಎಂಬ ಥೀಮ್‌ಗಳನ್ನು ನೀಡಲಾಗಿದೆ. ಟ್ಯಾಬ್ಲೋಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಮತ್ತು ಸಚಿವಾಲಯಗಳಿಗೆ ಕೇಂದ್ರ ರಕ್ಷಣಾ ಸಚಿವಾಲಯ ಪತ್ರ ಬರೆದಿದ್ದು, ಈ 3 ಥೀಮ್‌ಗಳಲ್ಲಿ ಒಂದನ್ನು ಆಧರಿಸಿ ಅಥವಾ ಮೂರನ್ನು ಒಳಗೊಳ್ಳುವಂತಹ ಟ್ಯಾಬ್ಲೋ ರಚಿಸಲು ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ದೇಶದಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವುದರಿಂದ ಇಂಡಿಯಾ ಃ75 ಥೀಮ್‌, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಅದರ ಸಾಧನೆಗಳು ಮತ್ತು ಕಳೆದ 7 ವರ್ಷಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ತೆಗೆದುಕೊಂಡ ನಿರ್ಧಾರಗಳನ್ನು ಒಳಗೊಂಡಿರಲಿದೆ.2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸುವಂತೆ ವಿಶ್ವಸಂಸ್ಥೆಯಲ್ಲಿ ಭಾರತ 2021ರಲ್ಲಿ ಮನವಿ ಸಲ್ಲಿಸಿತ್ತು. ಇದಕ್ಕೆ 72 ದೇಶಗಳು ಬೆಂಬಲವನ್ನು ಸೂಚಿಸಿದ್ದವು. ಹಾಗಾಗಿ 2023ನ್ನು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಈ ಥೀಮ್‌ ನೀಡಲಾಗಿದೆ.

 

click me!