Viral Video: ರೈಲ್ವೆ ಪ್ರಯಾಣಿಕರೇ ಎಚ್ಚರ: 500 ರೂ. ನೋಟು ಎತ್ತಿಕೊಂಡು 20 ರೂ. ನೋಟನ್ನಾಗಿ ಮಾಡಿದ ನೌಕರ..!

Published : Nov 27, 2022, 03:36 PM ISTUpdated : Nov 27, 2022, 03:42 PM IST
Viral Video: ರೈಲ್ವೆ ಪ್ರಯಾಣಿಕರೇ ಎಚ್ಚರ: 500 ರೂ. ನೋಟು ಎತ್ತಿಕೊಂಡು 20 ರೂ. ನೋಟನ್ನಾಗಿ ಮಾಡಿದ ನೌಕರ..!

ಸಾರಾಂಶ

ರಾಷ್ಟ್ರ ರಾಜಧಾನಿ ನವದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ನಗದು ವಹಿವಾಟಿನ ವೇಳೆ ರೈಲ್ವೆ ಉದ್ಯೋಗಿಯೊಬ್ಬ ಪ್ರಯಾಣಿಕರಿಗೆ ವಂಚಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕೋವಿಡ್‌ (COVID -19) ಸಮಯದಲ್ಲಿ ರೈಲಿನಲ್ಲಿ (Train) ಹೆಚ್ಚು ಜನರು ಪ್ರಯಾಣಿಸುತ್ತಿರಲಿಲ್ಲ. ಇದಕ್ಕೆ ಕಾರಣ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಲು ನಾನಾ ನಿರ್ಬಂಧಗಳು, ರೈಲುಗಳ ಕೊರತೆ ಹಾಗೂ ಟಿಕೆಟ್‌ (Ticket) ಅನ್ನು ಬುಕ್ಕಿಂಗ್ ಮಾಡಿಸಬೇಕಾಗಿತ್ತು. ಹೌದು, ರೈಲ್ವೆ ಸ್ಟೆಷನ್‌ಗಳಲ್ಲಿ ಪ್ರಯಾಣಿಕರಿಗೆ ಕೌಂಟರ್‌ನಲ್ಲಿ ಟಿಕೆಟ್‌ (Ticket) ನೀಡುತ್ತಿರಲಿಲ್ಲ. ಅದರೀಗ, ರೈಲ್ವೆ ಇಲಾಖೆ (Railway Department) ಕೋವಿಡ್‌ ಪ್ರಕರಣಗಳು ಇಳಿಮುಖವಾಗುತ್ತಿರುವಂತೆ ಟಿಕೆಟ್‌ಗಳನ್ನು ನೀಡುತ್ತಿದೆ. ಇದರಿಂದ ಹೆಚ್ಚು ರೈಲು ಪ್ರಯಾಣಿಕರು ಓಡಾಡಲು ಆರಂಭಿಸಿದ್ದಾರೆ. ಇಂತಹ ಸಮಯದಲ್ಲಿ ರೈಲ್ವೆ ಸ್ಟೇಷನ್‌ಗಳಲ್ಲಿ ಕುಳಿತುಕೊಂಡು ಟಿಕೆಟ್‌ ಕೊಡುವವರ ವಂಚನೆ ಪ್ರಕಣವೊಂದು ಬಯಲಾಗಿದೆ. 

ಹೌದು, ರಾಷ್ಟ್ರ ರಾಜಧಾನಿ ನವದೆಹಲಿಯ (New Delhi) ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ (Hazrat Nizamuddin Railway Station) ನಗದು ವಹಿವಾಟಿನ ವೇಳೆ ರೈಲ್ವೆ ಉದ್ಯೋಗಿಯೊಬ್ಬ ಪ್ರಯಾಣಿಕರಿಗೆ ವಂಚಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶುಕ್ರವಾರ ರೈಲ್ ವಿಸ್ಪರ್ಸ್ ಎಂಬ ಸಾಮಾಜಿಕ ಬಳಕೆದಾರರು ಈ ಕ್ಲಿಪ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಂಗಳವಾರ ಈ ಘಟನೆ ನಡೆದಿದೆ ಎಂದು ಟ್ವಿಟ್ಟರ್‌ ಪೋಸ್ಟ್‌ನ ಕ್ಯಾಪ್ಷನ್‌ ಹೇಳುತ್ತದೆ. 

ಇದನ್ನು ಓದಿ: ನೀನು ಸಖತ್ ಬೋರಿಂಗ್: ಕರಣ್ ಜೋಹಾರ್ ಕಾಲೆಳೆದ ಯಶ್ ವಿಡಿಯೋ ವೈರಲ್

ಹಾಗಾದ್ರೆ, ಈ ವಿಡಿಯೋದಲ್ಲೇನಿದೆ ಅಂತೀರಾ..? ಟಿಕೆಟ್‌ ಕೌಂಟರ್ ಹಿಂದೆ ಕುಳಿತಿದ್ದ ವ್ಯಕ್ತಿ ಹಣ ವಂಚನೆ ಮಾಡುತ್ತಿದ್ದಾರೆ. ಪ್ರಯಾಣಿಕರೊಬ್ಬರ ಬಳಿ ₹ 500 ಸ್ವೀಕರಿಸಿದರೂ, ರೈಲ್ವೆ ಉದ್ಯೋಗಿ ಅದನ್ನು ತನ್ನ ಜೇಬಿಗೆ ಇಟ್ಟುಕೊಂಡು ಬದಲಿಗೆ ₹ 20 ರ ನೋಟು ಕೈಯಲ್ಲಿ ಇಟ್ಟುಕೊಂಡು  ₹ 125 ದರದ ಟಿಕೆಟ್ ನೀಡಲು ಹೆಚ್ಚಿನ ಹಣಕ್ಕಾಗಿ ಬೇಡಿಕೆಯಿಡುವ ಮೂಲಕ ಪ್ರಯಾಣಿಕರನ್ನು ಮರುಳು ಮಾಡುವ ಪ್ರಯತ್ನ ಮಾಡಿರುವುದನ್ನು ಈ ವಿಡಿಯೋದಲ್ಲಿ ನೀವು ನೋಡಬಹುದಾಗಿದೆ.

ಕೆಳಗಿನ ಪೋಸ್ಟ್‌ನಲ್ಲಿರುವ ವಿಡಿಯೋವನ್ನು ನೀವೇ ನೋಡಿ..

ಇದನ್ನೂಓದಿ: ವರ್ಚುವಲ್ ಕೋರ್ಟ್ ವಿಚಾರಣೆ, ಅಂಡರ್‌ವೇರ್‌ನಲ್ಲೇ ಹಾಜರಾದ ಮಹಿಳಾ ಜಡ್ಜ್, ವಿಡಿಯೋ ವೈರಲ್

ಸೂಪರ್‌ಫಾಸ್ಟ್ ಗ್ವಾಲಿಯರ್ ರೈಲಿನಲ್ಲಿ ಪ್ರಯಾಣಿಸಲು ರೈಲ್ವೆ ಪ್ರಯಾಣಿಕರೊಬ್ಬರು ಈ ವಿಡಿಯೋ ಕ್ಲಿಪ್‌ನಲ್ಲಿ ಟಿಕೆಟ್‌ ಕೇಳಿದ್ದಾರೆ. ಹಾಗೆ,  ₹ 500 ನೋಟನ್ನು ಕೌಂಟರ್‌ನಲ್ಲಿ ನೀಡಿದ್ದಾರೆ. ಆದರೆ, ರೈಲ್ವೆ ಉದ್ಯೋಗಿಯು ಆ ರೈಲಿನ ಹೆಸರನ್ನು ಮತ್ತೆ ಖಚಿತಪಡಿಸಿಕೊಳ್ಳುವ ನೆಪದಲ್ಲಿ ಆ ಸಮಯದಲ್ಲಿ 500 ರೂ. ನೋಟನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡು 20 ರೂ. ಮುಖಬೆಲೆಯ ನೋಟನ್ನು ತನ್ನ ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಅಲ್ಲದೆ, 125 ರೂ. ಟಿಕೆಟ್ ನೀಡಲು ಅವರು ಹೆಚ್ಚಿನ ಹಣವನ್ನು ಸಹ ಕೇಳುತ್ತಾರೆ.

ಈ ವಿಡಿಯೋ ಶೇರ್ ಆದ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ರೈಲ್ವೆ ಸೇವಾ ಮತ್ತು ದೆಹಲಿ ವಿಭಾಗ, ಉತ್ತರ ರೈಲ್ವೆ (DRM ದೆಹಲಿ NR) ಯ ಗಮನ ಸೆಳೆಯಿತು. ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಸಂಬಂಧಿತ ರೈಲ್ವೆ ಅಧಿಕಾರಿಗಳು, "ನೌಕರನನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಅವರ ವಿರುದ್ಧ ಶಿಸ್ತು ಕ್ರಮವನ್ನು ಆರಂಭಿಸಲಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: ಯಜಮಾನನಿಗಾಗಿ ಕಾಯುವ ಹಸು: ವಿಡಿಯೋ ವೈರಲ್

ಈ ಮಧ್ಯೆ, ಕಾಮೆಂಟ್ ವಿಭಾಗದಲ್ಲಿ, ಹಲವಾರು ಇಂಟರ್ನೆಟ್ ಬಳಕೆದಾರರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರರು "ಚೆನ್ನೈನಲ್ಲಿ ನನಗೆ ಹಲವಾರು ಬಾರಿ ಈ ರೀತಿ ಅನುಭವ ಆಗಿದೆ. ಕೆಲವು ರೈಲ್ವೆ ನೌಕರರ ಸಂಘಟಿತ ಗೂಂಡಾಗಿರಿಯು ಅಂತಹ ಅಪರಾಧಗಳಲ್ಲಿ ಪಾಲ್ಗೊಳ್ಳಲು ಅವರಿಗೆ ಧೈರ್ಯವನ್ನು ನೀಡುತ್ತದೆ." ಎಂದು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.

ಹಾಗೆ, ಹಲವರು ವಿಬಿನ್ನವಾಗಿ ಕಾಮೆಂಟ್‌ ಮಾಡಿದ್ದಾರೆ. "ಅಪಾಯಕಾರಿ, ನಾನು ಇಂತಹ ಮ್ಯಾಜಿಕ್ ಅನ್ನು ಮೊದಲ ಬಾರಿಗೆ ನೋಡಿದ್ದೇನೆ, ಅವನು ವಿಡಿಯೋ ಕ್ಲಿಪ್ ಅನ್ನು ರೆಕಾರ್ಡ್ ಮಾಡದಿದ್ದರೆ ಏನಾಗುತ್ತಿತ್ತು ಎಂದು ನಾನು ಯೋಚಿಸುತ್ತೇನೆ’’ ಎಂದು ಪೋಸ್ಟ್‌ ಮಾಡಿದ್ದಾರೆ. ಅದೇ ರೀತಿ, ಮತ್ತೊಬ್ಬರು "ಇತರರನ್ನು ವಂಚಿಸುವ ಮತ್ತು ಕಷ್ಟಪಟ್ಟು ಗಳಿಸಿದ ಹಣವನ್ನು ದೋಚುವ ಜನರಿಗೆ ನಾಚಿಕೆಯಾಗಬೇಕು. ಸಂಪೂರ್ಣವಾಗಿ ಅಸಹ್ಯವಾಯಿತು. ಕ್ರಮ ಕೈಗೊಳ್ಳಲೇಬೇಕು’’ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಗಜೇಂದ್ರನ ಹಾವಳಿ: ಬಸ್ ಅಡ್ಡಗಟ್ಟಿ ಮೇಲೆತ್ತಲು ನೋಡಿದ ಕಬಾಲಿ

ಒಟ್ಟಾರೆ, ಈ ವಿಡಿಯೋ 1,96,000 ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದ್ದು ಮತ್ತು 3,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ