ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ, ರಾಷ್ಟ್ರವನ್ನುದ್ದೇಶಿ ಭಾಷಣ ಮಾಡಿದ್ದಾರೆ. ಈ ವೇಳೆ ಭಾರತದಲ್ಲಿ 6G ನೆಟ್‌ವರ್ಕ್ ಕುರಿತು ಮಾತನಾಡಿದ್ದಾರೆ. 5Gಗಿಂತ 6G ಹೇಗೆ ಭಿನ್ನವಾಗಿದೆ. ಇದರಿಂದ ಭಾರತೀಯರಿಗೆ ಆಗುವ ಅನುಕೂಲಗಳೇನು?
ನವದೆಹಲಿ(ಆ.15) ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ ವಿಶ್ವಕ್ಕೆ ಸಂದೇಶ ಸಾರಿದ್ದಾರೆ. ರಾಷ್ಟ್ರವನ್ನುದ್ದೇಶಿ ಭಾಷಣ ಮಾಡಿದ ಪ್ರಧಾನಿ ಮೋದಿ ಅಭಿವೃದ್ಧಿ ಭಾರತದ ಪಥಗಳನ್ನು ವಿವರಿಸಿದ್ದಾರೆ. ಇದೇ ವೇಳೆ ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ಶ್ಲಾಘಿಸಿದ್ದಾರೆ. ಇಷ್ಟೇ ಅಲ್ಲ ಭಾರತದಲ್ಲಿ ಈಗಾಗಲೇ 5G ನೆಟ್‌ವರ್ಟ್ ಎಲ್ಲಾ ಭಾಗಕ್ಕೆ ತಲುಪಿದೆ. ಶೀಘ್ರದಲ್ಲೇ ಭಾರತದಲ್ಲಿ 6G ಸೇವೆ ಆರಂಭಗೊಳ್ಳಲಿದೆ ಎಂದು ಮೋದಿ ಹೇಳಿದ್ದಾರೆ.
ಭಾರತದ ವಿಶ್ವದಲ್ಲೇ ಅತೀ ಕಡಿಮೆ ಬೆಲೆಯಲ್ಲಿ ಡೇಟಾ ಸೌಲಭ್ಯ ನೀಡುತ್ತಿದೆ. ಇಂಟರ್ನೆಟ್ ಸೌಲಭ್ಯ ಸುಲಭವಾಗಿ ನಾಗರೀಕರಿಗೆ ಲಭ್ಯವಾಗಿದೆ. 4G ಸೇವೆಯಿಂದ 5G ಸೇವೆಯಲ್ಲಿ ಭಾರತ ಸಾಗುತ್ತಿದೆ. ದೇಶದ ಬಹುತೇಕ ಭಾಗದಲ್ಲಿ 5G ಸೇವೆ ಲಭ್ಯವಿದೆ. ಇದೀಗ ಭಾರತದಲ್ಲಿ 6G ಕಾಲ ಶುರುವಾಗುತ್ತಿದೆ ಎಂದು ಮೋದಿ ಕೆಂಪುಕೋಟೆಯಲ್ಲಿ ಮಾಡಿದ ಭಾಷಣಧಲ್ಲಿ ಹೇಳಿದ್ದಾರೆ.
ಮುಂದಿನ ವರ್ಷಇದೇ ಸ್ಥಳ, ಇದೇ ಸಮಯ; ಕೆಂಪುಕೋಟೆಯಲ್ಲಿ ಮತ್ತೆ ಮೋದಿ ಸರ್ಕಾರದ ಭರವಸೆ!
6G ಟಾಸ್ಕ್ ಫೋರ್ಸ್ ಟೀಂ ರಚಿಸಲಾಗಿದೆ. ಭಾರತದಲ್ಲಿ 6G ಜಾರಿಗೆ ಸಂಶೋಧನೆ, ಅಧ್ಯಯನಗಳು ನಡೆಯುತ್ತಿದೆ. ಈ ವರದಿಗಳು ಪೂರಕವಾಗಿದ್ದು, 6G ಸೇವೆ ಪಡೆಯುವ ಕಾಲ ದೂರವಿಲ್ಲ ಎಂದು ಮೋದಿ ಹೇಳಿದ್ದಾರೆ. ದೇಶದಲ್ಲಿ 5G ಸೇವೆ ಸಂಪೂರ್ಣ ಭಾರತ ತಲುಪಿದೆ. ಇತ್ತೀಚೆಗೆ ರಿಲಯನ್ಸ್ ಈ ಕುರಿತು ಮಹತ್ವದ ಘೋಷಣೆ ಮಾಡಿತ್ತು. ಅವಧಿಗಿಂತ ಮೊದಲೇ ರಿಲಯನ್ಸ್ 5ಜಿ ದೇಶದ ಎಲ್ಲಾ 22 ಭಾಗದಲ್ಲಿ ಲಭ್ಯವಿದೆ ಎಂದು ಘೋಷಿಸಿದೆ.
ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಪ್ರತಿ ಸ್ಪೆಕ್ಟ್ರಮ್ ಬ್ಯಾಂಡ್‌ಗಳಾದ್ಯಂತ 22 ಪರವಾನಗಿ ಪಡೆದ ಸೇವಾ ಪ್ರದೇಶಗಳಲ್ಲಿ (ಎಲ್‌ಎಸ್‌ಎ) ತನ್ನ ಕನಿಷ್ಠ ಜಾರಿ ಬಾಧ್ಯತೆಗಳನ್ನು ಪೂರ್ಣಗೊಳಿಸಿದೆ. ಆಗಸ್ಟ್ 17, 2022ರಂದು ಸ್ಪೆಕ್ಟ್ರಮ್‌ಗೆ ನಿಯೋಜಿಸಲಾದ ನಿಯಮಗಳ ಅಡಿಯಲ್ಲಿ ಸಮಯಕ್ಕಿಂತ ಮುಂಚಿತವಾಗಿ, ಜುಲೈ 19, 2023ರಂದು ದೂರಸಂಪರ್ಕ ಇಲಾಖೆ ಘಟಕಗಳೊಂದಿಗೆ ಹಂತ 1ರ ಕನಿಷ್ಠ ಜಾರಿ ಬಾಧ್ಯತೆಯನ್ನು ಪೂರ್ಣಗೊಳಿಸಲು ನಿಗದಿತ ವಿವರಗಳ ಸಲ್ಲಿಕೆ ಪೂರ್ಣಗೊಳಿಸಿದೆ. ಮತ್ತು ಆಗಸ್ಟ್ 11, 2023ರ ವೇಳೆಗೆ ಎಲ್ಲ ವಲಯಗಳಲ್ಲಿ ದೂರ ಸಂಪರ್ಕ ಇಲಾಖೆಯ ಅಗತ್ಯ ಪರೀಕ್ಷೆಯನ್ನು ಪೂರ್ಣಗೊಳಿಸಲಾಗಿದೆ.
ಜಿಯೋ ಇನ್ಫೋಕಾಮ್ ಕಡಿಮೆ-ಬ್ಯಾಂಡ್, ಮಿಡ್-ಬ್ಯಾಂಡ್ ಮತ್ತು ಎಂಎಂವೇವ್ ಸ್ಪೆಕ್ಟ್ರಮ್‌ನ ವಿಶಿಷ್ಟ ಸಂಯೋಜನೆ ಹೊಂದಿದೆ. ಇದು ಅದರ ವ್ಯಾಪಕ ಫೈಬರ್ ಜಾಲ ಮತ್ತು ಸ್ಥಳೀಯ ತಂತ್ರಜ್ಞಾನದ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸೇರಿ, ಜಿಯೋಗೆ ಎಲ್ಲೆಡೆಯೂ 5ಜಿ ಮತ್ತು ಎಲ್ಲರಿಗೂ (ಗ್ರಾಹಕರು ಮತ್ತು ಉದ್ಯಮಗಳಿಗೆ) 5ಜಿ ಒದಗಿಸಲು ಅನುವು ಮಾಡಿಕೊಡುತ್ತದೆ.
ಜಿಯೋ ಅತ್ಯಧಿಕ ಸ್ಪೆಕ್ಟ್ರಮ್ ವ್ಯಾಪ್ತಿಯನ್ನು ಹೊಂದಿದೆ. ಜಿಯೋ ಎಲ್ಲ 22 ವಲಯಗಳಲ್ಲಿ ಮಿಲಿಮೀಟರ್ ತರಂಗ ಬ್ಯಾಂಡ್‌ನಲ್ಲಿ (26 ಗಿಗಾ ಹಟ್ಜ್) 1,000 ಮೆಗಾ ಹಟ್ಜ್ ಅನ್ನು ಹೊಂದಿದ್ದು, ಇದು ಎಂಟರ್‌ಪ್ರೈಸ್ ಬಳಕೆ ಪ್ರಕರಣಗಳನ್ನು ವಿಶಿಷ್ಟವಾಗಿ ಸಕ್ರಿಯಗೊಳಿಸುತ್ತದೆ ಮತ್ತು ಉತ್ತಮ-ಗುಣಮಟ್ಟದ ಸ್ಟ್ರೀಮಿಂಗ್ ಸೇವೆಗಳನ್ನು ಒದಗಿಸುತ್ತದೆ.
ರಾಜ್‌ಘಾಟ್‌ನಲ್ಲಿ ಗಾಂಧಿ ಪ್ರತಿಮೆಗೆ ವಂದಿಸಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ
ಟ್ರೂ 5ಜಿ ನೆಟ್‌ವರ್ಕ್‌ನ ವೇಗವಾದ ಜಾರಿಯನ್ನು ಖಚಿತಪಡಿಸಿಕೊಳ್ಳಲು ಜಿಯೋ ಇಂಜಿನಿಯರ್ ಗಳು ನಿರಂತರವಾಗಿ ಕೆಲಸ ಮಾಡಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಆಗಿರುವಂಥ ಇದು ವಿಶ್ವದ ವೇಗದ 5ಜಿ ಜಾರಿ ಆಗಿದೆ. ಈ 77ನೇ ಸ್ವಾತಂತ್ರ್ಯ ದಿನಕ್ಕೆ ಎಂಎಂವೇವ್ ಆಧಾರಿತ ಜಿಯೋ ಟ್ರೂ 5ಜಿ ವ್ಯಾಪಾರ ಸಂಪರ್ಕದ ಅಖಿಲ ಭಾರತ ಮಟ್ಟದ ಜಾರಿಯೊಂದಿಗೆ ಜಿಯೋ 'ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು ಆಚರಿಸುತ್ತಿದೆ.
5ಜಿ ಸೇವೆ ದೇಶದ ಮೂಲೆ ಮೂಲೆ ತಲುಪಿದೆ. ಇದೀಗ ಕೇಂದ್ರ ಸರ್ಕಾರ 6ಜಿ ಸೇವೆ ಜಾರಿಗೆ ತರಲು ಪ್ರಯತ್ನ ಮಾಡುತ್ತಿದೆ. ಈ ವರ್ಷದ ಅಂತ್ಯದಲ್ಲೇ 6ಜಿ ಸೇವೆ ಪ್ರಯೋಗ ನಡೆಯಲಿದೆ. ಬಳಿಕ ಮುಂದಿನ ವರ್ಷದ ಆರಂಭದಿಂದ 6ಜಿ ಸೇವೆಜನರಿಗೆ ಸೇವೆ ಒದಗಿಸಲಿದೆ.