ಭಾರತ ಆಚರಿಸುತ್ತಿರುವುದು 74 ಅಥವಾ 75ನೇ ಸ್ವಾತಂತ್ರ್ಯ ದಿನಾಚರಣೆ? ಗೊಂದಲಕ್ಕೆ ಇಲ್ಲಿದೆ ಉತ್ತರ!

By Suvarna News  |  First Published Aug 13, 2021, 8:03 PM IST
  • ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಭಾರತ
  • 75ನೇ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ನಡುವೆ ಗೊಂದಲ
  • ಭಾರತದ ಈ ವರ್ಷ ಆಚರಿಸುತ್ತಿರುವುದು ಎಷ್ಟನೇ ಸ್ವಾತಂತ್ರ್ಯ ದಿನಾಚರಣೆ?

ನವದೆಹಲಿ(ಆ.13): ಭಾರತ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ತಯಾರಿ ಮಾಡಿಕೊಂಡಿದೆ. ಆಗಸ್ಟ್ 15 ರಂದು ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಭಾರತದ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಈ ವರ್ಷದಿಂದ ಆರಂಭಗೊಂಡಿದೆ. 2023ರ ವರೆಗೆ ನಡೆಯಲಿದೆ. ಈ ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಮುಂದಿನ 2 ಸ್ವಾತಂತ್ರ್ಯ ದಿನಾಚರಣೆಯಲ್ಲೂ ಅಮೃತ ಮಹೊತ್ಸವ ಸಂಭ್ರಮ ಇರಲಿದೆ. 

ಆ.15ಕ್ಕೆ ಪೊಲೀಸ್ ವೇಷದಲ್ಲಿ ಕೆಂಪು ಕೋಟೆ ಮೇಲೆ ಖಲಿಸ್ತಾನ ಉಗ್ರ ದಾಳಿ ಸಾಧ್ಯತೆ; ಗುಪ್ತಚರ ಇಲಾಖೆ ಎಚ್ಚರಿಕೆ!

Latest Videos

undefined

ಮಾರ್ಚ್ 12, 2021ರಂದು ಪ್ರಧಾನಿ ಮೋದಿ ಅಜಾದಿಕಾ ಅಮೃತ ಮಹೋತ್ಸವ(ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ) ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ. 2023ರ ವರೆಗೆ ಅಮೃತ ಮಹೋತ್ಸವ ದಿನಾಚರಣೆ ಕಾರ್ಯಕ್ರಮಗಳು ನಡೆಯಲಿವೆ. ಆದರೆ ಕೆಲ ದಾಖಲೆಗಳಲ್ಲಿ, ಉಲ್ಲೇಖಗಳಲ್ಲಿ ಇದು 74ನೇ ಸ್ವಾತಂತ್ರ್ಯ ದಿನಾಚರಣೆ, ಮತ್ತೆ ಕೆಲವು ದಾಖಲೆಗಳಲ್ಲಿ ಈ ಬಾರಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ. ಹಾಗಾದರೆ ಯಾವುದು ಸರಿ?

ಹಲವು ಸರ್ಕಾರಿ ಅಧೀಕೃತ ವೆಬ್‌ಸೈಟ್‌ಗಳಲ್ಲಿ 2021ರ ಸ್ವಾತಂತ್ರ್ಯ ದಿನಾಚರಣೆ 75ನೇ ಸಂಭ್ರಮ ಎಂದು ಉಲ್ಲೇಖಿಸಲಾಗಿದೆ. ಕೇಂದ್ರದ ಅಧೀಕೃತ ದಾಖಲೆಗಳಲ್ಲಿ 2022 ಸ್ವಾತಂತ್ರ್ಯ ದಿನಾಚರಣೆ 75ನೇ ಸಂಭ್ರಮ ಎಂದು ದಾಖಲಿಸಲಾಗಿದೆ.  ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ 2022ರಲ್ಲಿ ಆಚರಿಸಲಾಗುತ್ತದೆ ಎಂದಿದೆ. 

75th independence day; 1 ನಿಮಿಷದಲ್ಲಿ ಭಾರತ ಮಾಡುವ 25 ಪ್ರಮುಖ ಕೆಲಸ!

ಹಾಗಾದರೆ ಈ ಗೊಂದಲ ಯಾಕೆ?
1947, ಆಗಸ್ಟ್ 15 ರ ಸ್ವಾತಂತ್ರ್ಯವನ್ನು ಮೊದಲ ವರ್ಷದ ಸಂಭ್ರಮ ಎಂದು ಹಲವರು ಉಲ್ಲೇಖಿಸುವುದಿಲ್ಲ. 1947ರ ವರ್ಷವನ್ನು ಬೇಸ್ ಇಯರ್ ಎಂದು ಭಾವಿಸಿದರೆ  ಮೊದಲ ಸ್ವಾತಂತ್ರ್ಯ ದಿನಾಚರಣೆ 1948ಕ್ಕೆ ಆಗಲಿದೆ. ಹೀಗಾದಲ್ಲಿ ಈ ಬಾರಿ ಆಚರಿಸುತ್ತಿರುವುದು 74ನೇ ಸ್ವಾತಂತ್ರ್ಯ ದಿನಾಚರಣೆ

2021-1947= 74
1947  ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ವರ್ಷ. ಹೀಗಾಗಿ ಮೊದಲ ಸ್ವಾತಂತ್ರ್ಯ ದಿನಾಚರಣೆ 1948. ಈ ರೀತಿ ಪರಿಗಣಿಸಿದರೆ ಈ ವರ್ಷ 74ನೇ ಸ್ವಾತಂತ್ರ್ಯ ದಿನಾಚರಣೆ. 1947ನೇ ವರ್ಷವನ್ನೇ ಮೊದಲ ಸ್ವಾತಂತ್ರ್ಯ ದಿನಾಚರಣೆ ಎಂದು ಪರಿಗಣಿಸಿದರೆ ಈ ಬಾರಿ ಆಚರಿಸುತ್ತಿರುವುದು 75ನೇ ವರ್ಷಾಚರಣೆ ಆಗಲಿದೆ.

ಭಾರತದ ಸ್ವಾತಂತ್ರ್ಯ
ಬರೋಬ್ಬರಿ 200 ವರ್ಷಗಳ ಬ್ರಿಟಿಷ್ ಆಳ್ವಿಕೆ ಅಂತ್ಯಗೊಂಡಿದ್ದು ಆಗಸ್ಟ್ 15, 1947ರಂದು. ವ್ಯಾಪಾರಕ್ಕೆ ಆಗಮಿಸಿ ಸಂಪೂರ್ಣ ಭಾರತವನ್ನೇ ತನ್ನ ಹಿಡಿತದಲ್ಲಿ ಇಟ್ಟುಕೊಂಡಿತ್ತು. ಹೋರಾಟ, ತ್ಯಾಗ, ಬಲಿದಾನಗಳಿಂದ ಭಾರತ ಸ್ವಾತಂತ್ರ್ಯ ದಕ್ಕಿಸಿಕೊಂಡಿತು. ಸ್ವಾತಂತ್ರ್ಯ ನಂತರ ಭಾರತ ಅಭಿವೃದ್ಧಿ ಪಥದಲ್ಲಿ ಸಾಗಿತು. ಇದೀಗ  ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿದೆ

click me!