ಸ್ವಾತಂತ್ರ್ಯ ದಿನಾಚರಣೆಗೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ಇಬ್ಬರ ಬಂಧನ!

By Suvarna News  |  First Published Aug 16, 2023, 12:28 PM IST

ದೇಶದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಆದರೆ ಕೆಲ ಕಿಡಿಗೇಡಿಗಳು ಸ್ವಾತಂತ್ರ್ಯ ಸಂಭ್ರಮಕ್ಕೆ ಧಕ್ಕೆ ತರಲು ಪ್ರಯತ್ನ ನಡೆಸಿದ ಘಟನೆಗಳು ವರದಿಯಾಗಿದೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುವ ಮೂಲಕ ಸ್ವಾತಂತ್ರ್ಯ ಸಂಭ್ರಮವನ್ನೇ ಹಾಳು ಮಾಡಿದ್ದಾರೆ. ತಕ್ಷಣ ಮದ್ಯಪ್ರವೇಶಿಸಿದ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.


ಪುಣೆ(ಆ.16) ಭಾರತ ಹಳ್ಳಿ ಹಳ್ಳಿಗಳಲ್ಲೂ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಸಂಭ್ರಮ, ಸಡಗರ, ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿ,ತಿರಂಗ ಯಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳು ಮೇಳೈಸಿದೆ. ಇದರ ನಡುವೆ ಕೆಲ ಕಿಡಿಗೇಡಿಗಳು ಸ್ವಾತಂತ್ರ್ಯ ದಿನಾಚರಣೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಘಟನೆ ಪುಣೆ ನಗರದಲ್ಲಿ ನಡೆದಿದೆ. ದೇಶ ವಿರೋಧಿ ಕೃತ್ಯ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಲಕ್ಷ್ಮೀ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಶಾಲಾ ಕಟ್ಟದಿಂದ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೇಳಿಬಂದಿದೆ. ಹಲವು ಯುವಕರು ಸೇರಿ ಪಾಕಿಸ್ತಾನ ಧ್ವಜಾರೋಹಣ ಮಾಡಿ, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಈ ಕುರಿತು ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೂ ಅಚ್ಚರಿಯಾಗಿದೆ.

Latest Videos

77ನೇ ಸ್ವಾತಂತ್ರ್ಯ ದಿನಾಚರಿಸಿ ನಿದ್ರಿಸುವಂತಿಲ್ಲ, ನೆಮ್ಮದಿಯ ನಾಳೆಗಾಗಿ ಸಾಕಷ್ಟು ದೂರ ಸಾಗಬೇಕಿದೆ ಭಾರತ!

ಪೊಲೀಸರು ಆಗಮಿಸುವ ವೇಳೆಯೂ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗಿದೆ. ಹೀಗಾಗಿ ನೇರವಾಗಿ ದಾಳಿ ಮಾಡಿದ ಪೊಲೀಸರ ತಂಡ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಕ್ಬರ್ ನದಾಫ್ ಹಾಗೂ ತೌಖಿರ್ ಎಂದು ಗುರುತಿಸಲಾಗಿದೆ. ತೌಖೀರ್ ಇದೆ ಶಾಲಾ ಕಟ್ಟದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಇನ್ನು ಅಕ್ಬರ್ ನದಾಫ್ ಕೊಂಧ್ವಾದಲ್ಲಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.

undefined

ಇಬ್ಬರನ್ನು ಬಂಧಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇವರ ಮೊಬೈಲ್ ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಭಾರತ ವಿರೋಧಿ ಪೋಸ್ಟ್‌ಗಳು ಸೇರಿದಂತೆ ಹಲವು ಮಾಹಿತಿಗಳನ್ನು ಪೊಲೀಸರು ಬಂಧಿತ ಆರೋಪಿಗಳ ಮೊಬೈಲ್‌ನಿಂದ ಪಡೆದಿದ್ದಾರೆ. ಇದೇ ರೀತಿ ಪುಣೆಯ ಕೆಲ ಭಾಗದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬಹುವರ್ಣದ ಬಂಧನಿ ಪೇಟಾ ಧರಿಸಿ ಸತತ 90 ನಿಮಿಷ ಕಾಲ ಮೋದಿ ವಾಗ್ಝರಿ

ಪಂಜಾಬ್‌: ಸ್ವಾತಂತ್ರ್ಯ ದಿನದ ಮುನ್ನ 5 ಖಲಿಸ್ತಾನಿ ಉಗ್ರರು ಸೆರೆ:  ಪಂಜಾಬ್‌ನಲ್ಲಿ ಉದ್ದೇಶಪೂರ್ವಕ ಹತ್ಯೆಗಳನ್ನು ಮಾಡಲು ನಡೆದಿದ್ದ ಭಯೋತ್ಪಾದನೆ ಸಂಚೊಂದನ್ನು ಭೇದಿಸಿರುವ ಪಂಜಾಬ್‌ ಪೊಲೀಸರು, ಐವರನ್ನು ಶಂಕಿತ ಉಗ್ರರನ್ನು ಸ್ವಾತಂತ್ರ್ಯ ದಿನದ ಮುನ್ನಾ ದಿನವಾದ ಸೋಮವಾರ ಬಂಧಿಸಲಾಗಿತ್ತು. ಬಂಧಿತ ಆರೋಪಿಗಳು ಪಾಕಿಸ್ತಾನ ಮೂಲದ ಖಲಿಸ್ತಾನಿ ಉಗ್ರ ಹರ್ವಿಂದರ್‌ ರಿಂದಾ ಮತ್ತು ಅಮೆರಿಕದಲ್ಲಿರುವ ಗೋಲ್ಡಿ ಬ್ರಾರ್‌ ಕಡೆಯವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಪ್ತಚರ ಮಾಹಿತಿ ಮೇರೆಗೆ ಕೇಂದ್ರೀಯ ಪಡೆ ಮತ್ತು ಪಂಜಾಬ್‌ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ್ದು ಆರೋಪಿಗಳಿಂದ 2 ಪಿಸ್ತೂಲುಗಳನ್ನು ವಶಪಡಿಸಿಕೊಂಡಿದ್ದಾರೆ. ಭಾನುವಾರವೂ ತರಣ್‌ ತಾರಣ್‌ನಲ್ಲಿ ಮೂವರನ್ನು ಬಂಧಿಸಿದ್ದ ಪೊಲೀಸರು ಅವರುಗಳಿಂದ ಮೂರು ಪಿಸ್ತೂಲುಗಳನ್ನು ವಶಕ್ಕೆ ಪಡೆದಿದ್ದರು.

click me!