ಲಸಿಕೆ ಪಡೆದವರಲ್ಲಿ ಪತ್ತೆಯಾದ ಸೋಂಕಿನಲ್ಲಿ ಬಹುಪಾಲು ಡೆಲ್ಟಾ

By Kannadaprabha News  |  First Published Jul 17, 2021, 9:35 AM IST
  • ಲಸಿಕೆ ಪಡೆದ ಹೆಚ್ಚಿನವರಲ್ಲಿ ಕಾಣಿಸಿಕೊಂಡಿರುವುದು ಡೆಲ್ಟಾರೂಪಾಂತರಿ ವೈರಸ್‌ 
  • ಲಸಿಕೆ ಪಡೆದವರಲ್ಲಿ ಶೇ.9.8 ಮಂದಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯತೆ
  • ಲಸಿಕೆ ಪಡೆದವರಲ್ಲಿ ಶೇ.0.4ರಷ್ಟುಮಾತ್ರ ಸಾವು ಸಂಭವಿಸಿದೆ.

 ನವದೆಹಲಿ (ಜು.17):  ಒಂದು ಅಥವಾ ಎರಡು ಡೋಸ್‌ ಲಸಿಕೆ ಪಡೆದ ನಂತರ ಕೊರೋನಾ ಸೋಂಕು ತಗಲಿದರೆ ಅದರ ಸ್ವರೂಪ ಹೇಗಿರುತ್ತದೆ ಎಂಬ ಬಗ್ಗೆ ಇದೇ ಮೊದಲ ಬಾರಿ ದೇಶಾದ್ಯಂತ ಸಮಗ್ರ ಅಧ್ಯಯನವೊಂದು ನಡೆದಿದ್ದು, ಅದರಲ್ಲಿ ಲಸಿಕೆ ಪಡೆದ ಹೆಚ್ಚಿನವರಲ್ಲಿ ಕಾಣಿಸಿಕೊಂಡಿರುವುದು ಡೆಲ್ಟಾರೂಪಾಂತರಿ ವೈರಸ್‌ ಎಂಬುದು ಪತ್ತೆಯಾಗಿದೆ. ಅಲ್ಲದೆ, ಲಸಿಕೆ ಪಡೆದವರಲ್ಲಿ ಶೇ.9.8 ಮಂದಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯ ಕಂಡುಬಂದಿದ್ದು, ಶೇ.0.4ರಷ್ಟುಮಾತ್ರ ಸಾವು ಸಂಭವಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಕರ್ನಾಟಕ ಸೇರಿದಂತೆ 17 ರಾಜ್ಯಗಳಲ್ಲಿ ಈ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ ಒಂದು ಅಥವಾ ಎರಡು ಡೋಸ್‌ ಕೋವಿಶೀಲ್ಡ್‌ ಅಥವಾ ಕೋವ್ಯಾಕ್ಸಿನ್‌ ಲಸಿಕೆ ಪಡೆದ ನಂತರವೂ ಕೋವಿಡ್‌ ತಗಲಿದ 677 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

Latest Videos

undefined

ಬೆಂಗಳೂರು IISC ಲಸಿಕೆ ಡೆಲ್ಟಾಗೂ ರಾಮಬಾಣ : ತಜ್ಞರ ಮಹತ್ವದ ಅಧ್ಯಯನ

ಅವರ ಪೈಕಿ 86% ಜನರಲ್ಲಿ ಡೆಲ್ಟಾರೂಪಾಂತರಿ ವೈರಸ್‌ ಕಾಣಿಸಿಕೊಂಡಿದೆ. 85 ಜನರಲ್ಲಿ ಮೊದಲ ಡೋಸ್‌ ನಂತರ, 592 ಜನರಲ್ಲಿ ಎರಡೂ ಡೋಸ್‌ ನಂತರ ಸೋಂಕು ಕಾಣಿಸಿಕೊಂಡಿದೆ. 71% ಜನರಲ್ಲಿ ಸೋಂಕಿನ ಲಕ್ಷಣಗಳಿದ್ದರೆ, 29% ಜನರಲ್ಲಿ ಲಕ್ಷಣಗಳಿರಲಿಲ್ಲ. ಇವರಲ್ಲಿ 67 ಜನರಿಗೆ ಮಾತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಅಗತ್ಯ ಕಂಡುಬಂದಿದೆ. ಇನ್ನುಳಿದವರು ಮನೆಯಲ್ಲೇ ಗುಣಮುಖರಾಗಿದ್ದಾರೆ. ಕೇವಲ 3 ಮಂದಿ ಮಾತ್ರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

‘ಹೀಗಾಗಿ ಕೊರೋನಾದ ಮುಂದಿನ ಅಲೆಗಳನ್ನು ತಡೆಯಲು ಹಾಗೂ ಅದರಿಂದ ಉಂಟಾಗಬಹುದಾದ ಸಾವನ್ನು ಕಡಿಮೆ ಮಾಡಲು ಲಸಿಕೆ ನೀಡುವ ವೇಗವನ್ನು ಹೆಚ್ಚಿಸುವುದೇ ಪರಿಣಾಮಕಾರಿಯಾದ ಮಾರ್ಗ’ ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!