
ಇಂಡೇನ್, ಭಾರತ್ ಗ್ಯಾಸ್ ಮತ್ತು ಎಚ್‌ಪಿ ಗ್ಯಾಸ್ ಬಳಕೆದಾರರು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಇಲ್ಲದೇ ಹೋದರೆ ನಿಮಗೆ ಗ್ಯಾಸ್ ಸಬ್ಸಿಡಿ ಸಿಗುವುದಿಲ್ಲ. ಕೆವೈಸಿ ಮಾಡಲು ಜೂನ್ 30 ಕೊನೆಯ ದಿನವಾಗಿದೆ. ಇದಾಗಲೇ ಎಲ್ಲಾ ಗ್ರಾಹಕರ ಮೊಬೈಲ್ಗೂ ಈ ಸಂದೇಶ ಕಳುಹಿಸಲಾಗಿದೆ. ಒಂದು ವೇಳೆ ಇದೇ 30ರ ಒಳಗೆ ಇ-ಕೆವೈಸಿ ಮಾಡದೇ ಹೋದರೆ ನಿಮಗೆ ಸಿಗುವ ಗ್ಯಾಸ್ ಸಬ್ಸಿಡಿ ಕಟ್ ಆಗಲಿದೆ. ಆದ್ದರಿಂದ ಆಧಾರ್ ಆಧರಿತ ದೃಢೀಕರಣ ಮಾಡಿಸುವುದು ಕಡ್ಡಾಯವಾಗಿದೆ.
ನೀವು ನಿಗದಿತ ಅವಧಿಯ ಒಳಗೆ ಆಧಾರ್ ವೆರಿಫಿಕೇಶನ್ ಮಾಡಿಸದಿದ್ದರೆ ಜುಲೈ 1ರಿಂದ ಸಬ್ಸಿಡಿ ಪ್ರಯೋಜನಗಳು ಸ್ಥಗಿತಗೊಳ್ಳಬಹುದು. ಗ್ಯಾಸ್ ಸಿಲಿಂಡರ್ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಈಗಾಗಲೇ ಇ-ಕೆವೈಸಿ ಪೂರ್ಣಗೊಳಿಸಿದ್ದರೆ ಮತ್ತೆ ಚಿಂತೆ ಮಾಡುವ ಅಗತ್ಯವಿಲ್ಲ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳು ಮತ್ತು ಇತರ ಸಬ್ಸಿಡಿ ಪಡೆಯುವ ಗ್ರಾಹಕರು ತಮ್ಮ ಎಲ್‌ಪಿಜಿ ಸಂಪರ್ಕದೊಂದಿಗೆ ಆಧಾರ್ ಲಿಂಕ್ ಮತ್ತು ವೆರಿಫಿಕೇಶನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ನಿಮ್ಮ ಗ್ಯಾಸ್ ಸಿಲಿಂಡರ್ಗೆ ಇ- ಕೆವೈಸಿ ಆಗಿದೆಯೇ, ಇಲ್ಲವೇ ಎನ್ನುವುದನ್ನು ಗ್ರಾಹಕರು ತಮ್ಮ ಗ್ಯಾಸ್ ಕಂಪನಿಯ ಅಧಿಕೃತ ಮೊಬೈಲ್ ಆ್ಯಪ್ ಮೂಲಕ ಅಥವಾ ತಮ್ಮ ಹತ್ತಿರದ ಗ್ಯಾಸ್ ವಿತರಕರನ್ನು ಸಂಪರ್ಕಿಸಿ ಖಾತೆಯ ವಿವರಗಳನ್ನು ಪರಿಶೀಲಿಸಬಹುದು. ಒಂದು ವೇಳೆ ಇ-ಕೆವೈಸಿ ಆಗದೇ ಇದ್ದರೆ ಅದನ್ನು ಮಾಡುವುದು ಹೀಗೆ:
- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ HP Pay ಆಪ್ ಡೌನ್‌ಲೋಡ್ ಮಾಡಿ.
- ನಿಮ್ಮ ಎಲ್‌ಪಿಜಿ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬಳಸಿ ರಿಜಿಸ್ಟರ್ ಮಾಡಿ.
- OTP ಪರಿಶೀಲಿಸಿ, ನಿಮ್ಮ ಭದ್ರತೆಗಾಗಿ MPIN ಅನ್ನು ಸೆಟ್ ಮಾಡಿ.
- ಆಪ್‌ನಲ್ಲಿನ 'MY HP' ಅಡಿಯಲ್ಲಿ ಇರುವ ಎಲ್‌ಪಿಜಿ (LPG) ಸೆಕ್ಷನ್ ತೆರೆಯಿರಿ.
- 'e-KYC' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
-ನಿಯಮ ಮತ್ತು ಷರತ್ತುಗಳನ್ನು ಸ್ವೀಕರಿಸಿ, ಆಧಾರ್ ಫೇಸ್ ಅಥೆಂಟಿಕೇಶನ್ ಮುಗಿಸಿ ಸಬ್ಮಿಟ್ ನೀಡಿ.
- IndianOil ONE App ಡೌನ್‌ಲೋಡ್ ಮಾಡಿ.
- ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ನೋಂದಣಿ ಮಾಡಿಕೊಳ್ಳಿ.
-ನಿಮ್ಮ 16 ಅಂಕಿಯ ಎಲ್‌ಪಿಜಿ ಐಡಿಯನ್ನು (LPG ID) ಖಾತೆಗೆ ಲಿಂಕ್ ಮಾಡಿ.
-ಆಪ್‌ನಲ್ಲಿನ 'My Profile' ವಿಭಾಗಕ್ಕೆ ಹೋಗಿ.
-ಎಲ್‌ಪಿಜಿ ವಿವರಗಳನ್ನು ಆಯ್ದುಕೊಂಡು, ಅಲ್ಲಿ ಕಾಣಿಸುವ 'e-KYC' ಆಯ್ಕೆಯನ್ನು ಕ್ಲಿಕ್ ಮಾಡಿ.
-ನಿಯಮ ಮತ್ತು ಷರತ್ತುಗಳನ್ನು ಓದಿ, ಒಪ್ಪಿಗೆ ನೀಡಿ.
-ಆಧಾರ್ ಫೇಸ್ ಅಥೆಂಟಿಕೇಶನ್ (Aadhaar face authentication - ಮುಖದ ಗುರುತು ಪರಿಶೀಲನೆ) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸಬ್ಮಿಟ್ ಮಾಡಿ.
- ಗೂಗಲ್ ಪ್ಲೇ ಸ್ಟೋರ್‌ನಿಂದ Hello BPCL ಆಪ್ ಡೌನ್‌ಲೋಡ್ ಮಾಡಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ನೀಡಿ ಲಾಗ್-ಇನ್ ಆಗಿ.
- ಹೋಮ್ ಸ್ಕ್ರೀನ್‌ನಲ್ಲಿರುವ 'e-KYC' ಆಯ್ಕೆಯನ್ನು ಆರಿಸಿಕೊಳ್ಳಿ.
- ನಿಮ್ಮ ಮೊಬೈಲ್‌ಗೆ ಬರುವ OTP ಯನ್ನು ನಮೂದಿಸಿ ವೆರಿಫೈ ಮಾಡಿ.
- ನಿಯಮಗಳನ್ನು ಒಪ್ಪಿಕೊಂಡು, ಬಯೋಮೆಟ್ರಿಕ್/ಮುಖದ ಗುರುತಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅರ್ಜಿಯನ್ನು ಸಲ್ಲಿಸಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ