ಸಕ್ರಿಯ ಕೇಸು ಹೆಚ್ಚಳದಲ್ಲಿ ದೇಶದಲ್ಲಿ ಕರ್ನಾಟಕವೇ ನಂ.1!

By Kannadaprabha News  |  First Published Jul 12, 2020, 7:26 AM IST

ಸಕ್ರಿಯ ಕೇಸು ಹೆಚ್ಚಳದಲ್ಲಿ ಕರ್ನಾಟಕವೇ ನಂ.1| 1 ವಾರದಲ್ಲಿ ಶೇ.89ರಷ್ಟು ಏರಿಕೆ| 1 ವಾರಕ್ಕೆ ದೇಶದಲ್ಲಿ 50000 ಸಕ್ರಿಯ ಕೇಸ್‌|ದೆಹಲಿಯಲ್ಲಿ ಮಾತ್ರ ಕೇಸ್‌ ಇಳಿಕೆ


ನವದೆಹಲಿ(ಜ.12): ಪ್ರತಿನಿತ್ಯ 2000ಕ್ಕೂ ಅಧಿಕ ಕೊರೋನಾ ಸೋಂಕು ಪತ್ತೆಯಾಗುತ್ತಿರುವ ಕರ್ನಾಟಕ, ಕಳೆದೊಂದು ವಾರದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಶೇ.89ರಷ್ಟುಭಾರೀ ಏರಿಕೆ ದಾಖಲಿಸಿದೆ. ದೇಶದ ದೊಡ್ಡ ರಾಜ್ಯಗಳ ಪೈಕಿ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ದಾಖಲಾಗುತ್ತಿರುವುದು ಕರ್ನಾಟಕದಲ್ಲಿ ಮಾತ್ರ ಎಂಬುದು ಆತಂಕಕ್ಕೆ ಕಾರಣವಾಗಿದೆ.

ಅಚ್ಚರಿ ಎಂದರೆ, ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲೇ 3ನೇ ಸ್ಥಾನದಲ್ಲಿರುವ ದೆಹಲಿಯಲ್ಲಿ ಮಾತ್ರ ಕಳೆದೊಂದು ವಾರದಲ್ಲಿ ಸಕ್ರಿಯ ಕೇಸಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆ ದಾಖಲಾಗಿದೆ.

Latest Videos

undefined

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್‌ಗೆ ಕೊರೋನಾ; ಆಸ್ಪತ್ರೆ ದಾಖಲು!

ಕೇಂದ್ರ ಆರೋಗ್ಯ ಸಚಿವಾಲಯದ ದಾಖಲೆಗಳ ಅನ್ವಯ ಹಿಂದಿನ ವಾರಕ್ಕೆ ಹೋಲಿಸಿದರೆ ಕಳೆದ ವಾರದಲ್ಲಿ 50000ಕ್ಕೂ ಹೆಚ್ಚು ಸಕ್ರಿಯ ಕೇಸುಗಳು ದಾಖಲಾಗಿವೆ. ಅಂದರೆ ರಾಷ್ಟ್ರೀಯ ಸರಾಸರಿ ನೋಡಿದರೆ ಸಕ್ರಿಯ ಕೇಸುಗಳಲ್ಲಿ ಶೇ.21.7ರಷ್ಟುಹೆಚ್ಚಳವಾಗಿದೆ. ಆದರೆ 6 ದೊಡ್ಡ ರಾಜ್ಯಗಳಲ್ಲಿ ಈ ಪ್ರಮಾಣ ಶೇ.50ಕ್ಕಿಂತ ಹೆಚ್ಚಿದೆ. ಅದರಲ್ಲೂ ಶೇ.89ರಷ್ಟುಏರಿಕೆಯೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇನ್ನು ಅಸ್ಸಾಂ ಮತ್ತು ಒಡಿಶಾದಲ್ಲಿ ಈ ಪ್ರಮಾಣ ಶೇ.80ಕ್ಕಿಂತ ಹೆಚ್ಚಿದೆ. ಬಿಹಾರದಲ್ಲಿ ಈ ಪ್ರಮಾಣ ಶೇ.69ರಷ್ಟಿದ್ದರೆ, ಉತ್ತರಪ್ರದೇಶ ಮತ್ತು ರಾಜಸ್ಥಾನದಲ್ಲಿ ಶೇ.50ಕ್ಕಿಂತ ಹೆಚ್ಚಿದೆ.

ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಉತ್ತಮ ವೈದ್ಯಕೀಯ ವ್ಯವಸ್ಥೆ ಇರುವ ಕಾರಣ, ಅಲ್ಲಿ ನಿರ್ವಹಣೆ ಅಷ್ಟುಸಮಸ್ಯೆಯಲ್ಲ. ಆದರೆ ಇತರೆ ರಾಜ್ಯಗಳಲ್ಲಿ ಸಕ್ರಿಯ ಕೇಸು ಹೆಚ್ಚಾದಷ್ಟೂಸಮಸ್ಯೆ ಅಧಿಕ ಎನ್ನಲಾಗಿದೆ.

ಇನ್ನು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಪ್ರಮಾಣದಲ್ಲಿ ಸಕ್ರಿಯ ಕೇಸುಗಳ ಏರಿಕೆ ದಾಖಲಿಸಿದ ರಾಜ್ಯಗಳೆಂದರೆ ತಮಿಳುನಾಡು, ಹರ್ಯಾಣ. ದೇಶದಲ್ಲೇ ಅತಿ ಹೆಚ್ಚು ಕೇಸು ದಾಖಲಾಗುತ್ತಿರುವ ಮಹಾರಾಷ್ಟ್ರ ಕೂಡ ಸಕ್ರಿಯ ಕೇಸು ಏರಿಕೆಯಲ್ಲಿ ಬಹುತೇಕ ರಾಷ್ಟ್ರೀಯ ಸರಾಸರಿಯನ್ನೇ ಹೊಂದಿದೆ ಎಂದು ವರದಿಯೊಂದು ಹೇಳಿದೆ.

ರಾಜ್ಯಾದ್ಯಂತ ಲಾಕ್‌ಡೌನ್‌ ವಿಸ್ತರಣೆ?: ಮಹತ್ವದ ಸುಳಿವು

ಮಹಾನಗರಗಳಿಂದ ಸಣ್ಣನಗರ:

ಈ ನಡುವೆ ಇತ್ತೀಚಿನ ದಿನಗಳಲ್ಲಿ ಹೊಸ ಸೋಂಕಿನ ಪ್ರಕರಣಗಳು ಮಹಾನಗರಗಳಾದ ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್‌ ಹೊರತಾಗಿ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಕಂಡುಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ಮುಂದಿನ ದಿನಗಳಲ್ಲಿ ಇಂಥ ಪ್ರದೇಶಗಳಲ್ಲೂ ವೈದ್ಯಕೀಯ ವ್ಯವಸ್ಥೆ ಸುಧಾರಣೆಗೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಾರುಕಟ್ಟೆಗೆ ಬಂದಿದೆ ವಜ್ರದ ಮಾಸ್ಕ್, ಬೆಲೆ ಎಷ್ಟು ಅನ್ನೋರು ಈ ಸುದ್ದಿ ಓದಿ!

ಸಕ್ರಿಯ ಕೇಸ್‌: ದೆಹಲಿ ಹಿಂದಿಕ್ಕುವತ್ತ ಕರ್ನಾಟಕ

ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲೇ 3ನೇ ಸ್ಥಾನದಲ್ಲಿರುವ ದೆಹಲಿಯಲ್ಲಿ ಕಳೆದೊಂದು ವಾರದಲ್ಲಿ ಸಕ್ರಿಯ ಕೇಸಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ದೇಶದಲ್ಲಿ ದೊಡ್ಡ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿ ಪೈಕಿ ದೆಹಲಿಯಲ್ಲಿ ಮಾತ್ರವೇ ಸಕ್ರಿಯ ಕೇಸಿನ ಸಂಖ್ಯೆ ಇಳಿಕೆ ದಾಖಲಾಗಿದೆ. ಜೂನ್‌ 28ರಂದು ದೆಹಲಿಯಲ್ಲಿ 28329 ಸಕ್ರಿಯ ಕೇಸುಗಳಿದ್ದರೆ ಜು.11ರ ಶನಿವಾರ ಈ ಪ್ರಮಾಣ 21146ಕ್ಕೆ ಇಳಿದಿದೆ. ಆದರೆ ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶನಿವಾರ 19039ರಷ್ಟಿದೆ. 2-3 ದಿನದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ದೆಹಲಿಯನ್ನು ಕರ್ನಾಟಕ ಹಿಂದಿಕ್ಕಬಹುದು ಎನ್ನಲಾಗುತ್ತಿದೆ

click me!