ಮೋದಿ ತವರಿನಲ್ಲಿ ಪಕ್ಷ ಬಲ ಪಡಿಸಲು ಕಾಂಗ್ರೆಸ್ ನಿರ್ಧಾರ , ಹಾರ್ಧಿಕ್ ಪಟೇಲ್‌ಗೆ ಜವಾಬ್ದಾರಿ!

By Suvarna NewsFirst Published Jul 11, 2020, 8:41 PM IST
Highlights

ಪ್ರತಿಭಟನೆಗಳ ಮೂಲಕ ಭಾರಿ ಸಂಚಲನ ಮೂಡಿಸಿದ ಹಾರ್ಧಿಕ್ ಪಟೇಲ್‌ಗೆ ಗುಜರಾತ್ ಕಾಂಗ್ರೆಸ್ ಹೊಣೆ ನೀಡಲಾಗಿದೆ. ಎಐಸಿಸಿಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಗುಜರಾತ್(ಜು.11): ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯದಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್ ಬಲಪಡಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಪ್ರತಿಭಟನ ಮೂಲಕವೇ ದೇಶದ ಗಮನ ಸೆಳೆದಿದ್ದ ಹಾರ್ಧಿಕ್ ಪಟೇಲ್‌ಗೆ ಕಾಂಗ್ರೆಸ್ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಇದೀಗ ಗುಜರಾತ್ ಕಾಂಗ್ರೆಸ್ ಜವಾಬ್ದಾರಿಯನ್ನು ಹಾರ್ಧಿಕ್ ಪಟೇಲ್‌ಗೆ ನೀಡಿದ್ದಾರೆ.

ಕಾವಲುಗಾರ ಬೇಕಾದ್ರೆ ನೇಪಾಳಕ್ಕೆ ಹೋಗ್ತಿನಿ: ಹಾರ್ದಿಕ್ ವ್ಯಂಗ್ಯ!..

ಗುಜರಾತ್ ಕಾಂಗ್ರೆಸ್ ಕಾರ್ಯಧ್ಯಕ್ಷರಾಗಿ ಹಾರ್ದಿಕ್ ಪಟೇಲ್ ಅವರಿಗೆ ಎಐಸಿಸಿ ಜವಾಬ್ದಾರಿ ನೀಡಿದೆ. ಶನಿವಾರ(ಜು.11) ಸೋನಿಯಾ ಗಾಂಧಿ ಗುಜರಾತ್ ಕಾರ್ಯಧ್ಯಕ್ಷ ಸ್ಥಾನಕ್ಕೆ ಹಾರ್ಧಿಕ್ ಪಟೇಲ್ ಅವರನ್ನು ಅಂತಿಮಗೊಳಿಸಿದ್ದಾರೆ. 

ಎಲೆಕ್ಷನ್ ನಿಲ್ಲಂಗಿಲ್ಲ ಹಾರ್ದಿಕ್: ಕೋರ್ಟ್ ತೀರ್ಪು ತಂದ ಹಿನ್ನಡೆ!..

2019ರ ಲೋಕಸಭಾ ಚುನಾವಣೆ ವೇಳೆಗೆ ಹಾರ್ಧಿಕ್ ಪಟೇಲ್ ಕಾಂಗ್ರೆಸ್ ಸೇರಿಕೊಂಡಿದ್ದರು. ಮೀಸಲಾತಿ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಹಾರ್ಧಿಕ್ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ಇದೀಗ ಹಾರ್ಧಿಕ್ ಪಟೇಲ್‌ ನೇಮಕದಿಂದ ಗುಜರಾತ್ ಕಾಂಗ್ರೆಸ್‌ನ ಯುವ ನಾಯಕರಲ್ಲಿ ಹೊಸ ಹುರುಪು ಬಂದಿದೆ. ಆದರೆ ಈ ಆಯ್ಕೆ ಮೂಲ ಕಾಂಗ್ರೆಸ್‌ನ ಹಿರಿಯ ನಾಯಕರ ಅಸಮಾಧಾನಕ್ಕೂ ಕಾರಣವಾಗಬಹುದು.
 

click me!