
ನವದೆಹಲಿ: ಸರ್ಕಾರಿ ನೌಕರರಿಂದ ತೀವ್ರ ವಿರೋಧಕ್ಕೆ ಗುರಿಯಾಗಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)ಯ ನಿಯಮಗಳನ್ನು ಬದಲಿಸಿ ನೌಕರರಿಗೆ ಕೊನೆಯ ಸಂಬಳದ ಶೇ.50ರಷ್ಟು ಪಿಂಚಣಿಯನ್ನು ನಿಶ್ಚಿತವಾಗಿ ನೀಡುವ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರ ಹಾಗೂ ಕೆಲ ರಾಜ್ಯಗಳು ಚಿಂತನೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯೇತರ ರಾಜ್ಯ ಸರ್ಕಾರಗಳು ಎನ್‌ಪಿಎಸ್ ಬದಲು ಹಳೆಯ ಪಿಂಚಣಿ ವ್ಯವಸ್ಥೆ (OPS) ಜಾರಿಗೆ ತರುವಂತೆ ಒತ್ತಡ ಹೇರುತ್ತಿವೆ. ಆ ಪೈಕಿ ಕೆಲ ರಾಜ್ಯ ಸರ್ಕಾರಗಳು ಈಗಾಗಲೇ ಎನ್‌ಪಿಎಸ್ (NPS) ರದ್ದುಪಡಿಸಿ ಒಪಿಎಸ್ ಜಾರಿಗೊಳಿಸುವ ನಿರ್ಧಾರವನ್ನೂ ಕೈಗೊಂಡಿವೆ. ಈ ಹಿನ್ನೆಲೆಯಲ್ಲಿ ಒತ್ತಡಕ್ಕೆ ಗುರಿಯಾಗಿರುವ ಕೇಂದ್ರ ಸರ್ಕಾರ ಹಾಗೂ ಇನ್ನಿತರ ಕೆಲ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಿ (Central Govt employee) ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ (State Govt Employee) ಅವರು ಕೊನೆಯದಾಗಿ ಪಡೆದ ಸಂಬಳದ ಶೇ.50ರಷ್ಟುಪಿಂಚಣಿ ಪ್ರತಿ ತಿಂಗಳು ನಿಶ್ಚಿತವಾಗಿ ಕೈಗೆ ಸಿಗುವಂತೆ ಎನ್‌ಪಿಎಸ್ ಅಡಿಯಲ್ಲೇ ನಿಯಮಗಳಿಗೆ ಬದಲಾವಣೆ ತರಲು ಚಿಂತನೆ ನಡೆಸಿವೆ ಎಂದು ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.
ನಿಮ್ಮಎನ್ ಪಿಎಸ್ ಖಾತೆ ನಿಷ್ಕ್ರಿಯವಾಗಿದೆಯಾ? ಸಕ್ರಿಯಗೊಳಿಸಲು ಹೀಗೆ ಮಾಡಿ
ಆದರೆ ಈ ಕುರಿತು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಅಲ್ಲದೆ ಯಾವುದೇ ಸರ್ಕಾರದ ಮಟ್ಟದಲ್ಲಿ ಇನ್ನೂ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಆಗದಂತೆ ಎನ್‌ಪಿಎಸ್‌ನ ನಿಯಮಗಳನ್ನು ಬದಲಿಸಲು ಚಿಂತನೆ ಮಾತ್ರ ನಡೆದಿದೆ ಎಂದು ವರದಿ ಹೇಳಿದೆ.
ಎನ್‌ಪಿಎಸ್ ಅಡಿ ಸರ್ಕಾರಿ ನೌಕರರು ವೃತ್ತಿಯಲ್ಲಿದ್ದಾಗ ಅವರು ಹಾಗೂ ಸರ್ಕಾರ ಪಿಂಚಣಿ ಖಾತೆಗೆ ಪಾವತಿಸಿರುವ ಹಣವನ್ನು ಆಧರಿಸಿ ನಿವೃತ್ತಿಯ ನಂತರ ಪಿಂಚಣಿ ನೀಡಲಾಗುತ್ತದೆ. ಒಪಿಎಸ್ ಅಡಿ ನಿಶ್ಚಿತ ಪಿಂಚಣಿ ನೀಡಲಾಗುತ್ತದೆ. ಕೆಲ ವರ್ಷಗಳ ಹಿಂದೆ ಒಪಿಎಸ್ ರದ್ದುಪಡಿಸಿ ಎನ್‌ಪಿಎಸ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಅದಕ್ಕೆ ನೌಕರರ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಸರ್ಕಾರಿ ಉದ್ಯೋಗಿಗಳೇ ಗಮನಿಸಿ, ಜ.1ರಿಂದ ಎನ್ ಪಿಎಸ್ ನಿಯಮದಲ್ಲಿ ಬದಲಾವಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ