ಮೋದಿ ಉದ್ಘಾಟನೆ ಮಾಡಿದ್ದ ಮಹಾಕಾಲ ಲೋಕದ ಸಪ್ತಋಷಿ ಪ್ರತಿಮೆಗಳು ಬಿರುಗಾಳಿಗೆ ನೆಲಸಮ!

By Santosh Naik  |  First Published May 28, 2023, 6:21 PM IST

ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಬಿರುಗಾಳಿಯಿಂದಾಗಿ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದ ಉಜ್ಜಯನಿಯ ಮಹಾಕಾಲ ಲೋಕದ ಸಪ್ತಋಷಿ ಪ್ರತಿಮೆಗಳು ಉರುಳಿಬಿದ್ದಿವೆ.


ಉಜ್ಜಯನಿ (ಮೇ.28): ಉತ್ತರಭಾರತದಲ್ಲಿ ಅದರಲ್ಲೂ ಪ್ರಮುಖವಾಗಿ ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಭಾರೀ ಬಿರುಗಾಳಿಯ ಮಳೆಯಾಗುತ್ತಿದೆ. ಭಾನುವಾರ ಬೀಸಿದ ಭಾರಿ ಬಿರುಗಾಳಿಯಿಂದಾಗಿ ಮಧ್ಯಪ್ರದೇಶದ ಪ್ರಖ್ಯಾತ ಉಜ್ಜಯನಿ ದೇವಸ್ಥಾನದಲ್ಲಿ ನಿರ್ಮಾಣವಾಗಿರುವ ಮಹಾಕಾಳ ಲೋಕದ ಪ್ರತಿಮೆಗಳು ನೆಲಕ್ಕೆ ಉರುಳಿ ಬಿದ್ದಿವೆ. ಕಳೆದ ವರ್ಷ 2022ರ ಅಕ್ಟೋಬರ್‌ 11 ರಂದು ಪ್ರಧಾನಿ ನರೇಂದ್ರ ಮೋದಿ ಉಜ್ಜಯನಿಯ ವಿಶ್ವವಿಖ್ಯಾತ ಜ್ಯೋತಿರ್ಲಿಂಗ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಮಹಾಕಾಲ ಲೋಕವನ್ನು ಉದ್ಘಾಟನೆ ಮಾಡಿದ್ದರು. ಈ ವೇಳೆ ಅಲ್ಲಿ ಸಪ್ತಋಷಿ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗಿತ್ತು. ಬಿರುಗಾಳಿಯ ಕಾರಣದಿಂದಾಗಿ ಈ ಪ್ರತಿಮೆಗಳು ನೆಲಕ್ಕೆ ಉರುಳಿದೆ. 10 ರಿಂದ 25 ಅಡಿ ಎತ್ತರದ ಈ ವಿಗ್ರಹಗಳು ಕೆಂಪು ಕಲ್ಲು ಮತ್ತು ಫೈಬರ್ ಬಲವರ್ಧಿತ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ. ಗುಜರಾತಿನ ಎಂಪಿ ಬಬರಿಯಾ ಸಂಸ್ಥೆಗೆ ಸಂಬಂಧಿಸಿದ ಗುಜರಾತ್, ಒಡಿಶಾ ಮತ್ತು ರಾಜಸ್ಥಾನದ ಕಲಾವಿದರು ಇವುಗಳ ನಿರ್ಮಾಣ ಮಾಡಿದ್ದರು. ಉಜ್ಜಯಿನಿಯಲ್ಲಿಯೇ ಶ್ರೀ ಸಾಂದೀಪನಿ ಆಶ್ರಮದ ಮುಂಭಾಗದಲ್ಲಿ ಬಿರುಗಾಳಿಗೆ ಮರವೊಂದು ಉರುಳಿ ಬಿದ್ದಿದೆ. ಅಪಘಾತದಲ್ಲಿ ಅನೇಕ ಭಕ್ತರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉಜ್ಜಯನಿಯ ಮಹಾಕಾಳ ಲೋಕವನ್ನು ನವೀಕರಣ ಮಾಡುವ ದೃಷ್ಟಿಯಿಂದ ಬರೋಬ್ಬರಿ 793 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತವನ್ನು ಪೂರ್ಣಮಾಡಲಾಗಿದೆ. ಈಗಾಗಲೇ ಜನರ ಬಳಕೆಗೂ ಇದನ್ನು ಬಿಡಲಾಗಿದೆ. ಆದರೆ, 2ನೇ ಹಂತದ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ಮಧ್ಯಪ್ರದೇಶದಲ್ಲಿ ಇಂದಿನಿಂದ ಬಿರುಗಾಳಿ ಮಿಶ್ರಿತ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ಭೋಪಾಲ್, ಗ್ವಾಲಿಯರ್ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.  ಭಾನುವಾರ ಭೋಪಾಲ್‌ನಲ್ಲಿ ಮೋಡ ಕವಿದ ವಾತಾವರಣವಿತ್ತು. ಸಾಗರ್, ಛತ್ತರ್‌ಪುರ, ದಾಮೋಹ್, ಪನ್ನಾ, ಟಿಕಮ್‌ಗಢ ಮತ್ತು ನಿವಾರಿಗಳಲ್ಲಿ ಆಲಿಕಲ್ಲು ಮಳೆಯಾಗುವ ಎಚ್ಚರಿಕೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿಯ ವೇಗ ಗಂಟೆಗೆ 70 ಕಿ.ಮೀ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ರಾಜಸ್ಥಾನದಲ್ಲಿ ಅಕಾಲಿಕ ಮಳೆ ಮತ್ತು ಚಂಡಮಾರುತದಿಂದಾಗಿ, 17 ವರ್ಷಗಳ ನಂತರ, ನೌತ್ವಾದಲ್ಲಿ ಸತತ ಮೂರು ದಿನಗಳ ಕಾಲ ತಾಪಮಾನ40 ಡಿಗ್ರಿಗಿಂತ ಕೆಳಗಿದೆ.ಹವಾಮಾನ ಇಲಾಖೆ ಪ್ರಕಾರ ಉತ್ತರ ಪ್ರದೇಶ ಸೇರಿದಂತೆ 10 ರಾಜ್ಯಗಳಲ್ಲಿ ಇನ್ನೆರಡು ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ.

ಪಶ್ಚಿಮ ಮಾರುತಗಳ ಅಡಚಣೆಯಿಂದಾಗಿ, ಮೇ 28 ಮತ್ತು 29 ರಂದು ಪೂರ್ವ ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಮತ್ತು ಮೇ 28 ಮತ್ತು 29 ರಂದು ಉತ್ತರ ರಾಜಸ್ಥಾನದಲ್ಲಿ ಆಲಿಕಲ್ಲು ಮಳೆಯಾಗಬಹುದು ಎಂದ ಹೇಳಲಾಗಿದೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 50-60 ಕಿಮೀ ವೇಗದಲ್ಲಿ ಬಿರುಗಾಳಿ/ಗಾಳಿ ಬೀಸುವ ಸಾಧ್ಯತೆಯಿದೆ. 

आंधी तूफान के बाद महाकाल लोक में सप्त ऋषि प्रतिमा हवा के कारण नीचे गिर पड़ी जिनमें से एक मूर्ति की गर्दन टूट गई जबकि दो मूर्तियों के हाथ टूटे हैं साथ ही कुछ मूर्तियों के माथे पर क्रेक भी आया है… pic.twitter.com/UyMygHudEW

— Jan Prakashan (@JanPrakashan)

Ujjain mahakal corridor: ನೋಡ ಬನ್ನಿ ‘ಮಹಾಕಾಲನ ಮಹಾಲೋಕ’

ಮುಂದಿನ 24 ಗಂಟೆಗಳಲ್ಲಿ ಪೂರ್ವ ರಾಜ್ಯಗಳಲ್ಲಿ ಮಳೆ: ಮೇ 28 ರಂದು ವಾಯುವ್ಯ ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಐಎಂಡಿ ಈಶಾನ್ಯ ಭಾರತದಲ್ಲಿ ಮಳೆಯ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಅಸ್ಸಾಂ ಮತ್ತು ಮೇಘಾಲಯ ಮತ್ತು ಮಿಜೋರಾಂ ಮತ್ತು ತ್ರಿಪುರಾದಲ್ಲಿ ಬಿರುಗಾಳಿ ಸಹಿತ ಮಳೆ ಮತ್ತು ನಂತರ ಕಡಿಮೆಯಾಗುವ ಸಾಧ್ಯತೆಯಿದೆ.

Tap to resize

Latest Videos

Mahakal Lok Ujjain: ಹೆಜ್ಜೆಹೆಜ್ಜೆಯಲ್ಲೂ ಮೂಡುತ್ತೆ ಶಿವಭಕ್ತಿ: ಹೇಗಿತ್ತು 5 ವರ್ಷದ ತಯಾರಿ?

click me!