ಖಾಕಿ ತೊಟ್ಟು ಪೊಲೀಸ್‌ ಸ್ಟೇಷನ್‌ನಲ್ಲಿ ಕೋಳಿ ಸಾರು ಮಾಡಿದ ವಿಡಿಯೋ ವೈರಲ್‌, ನೋಟಿಸ್‌ ನೀಡಿದ ಐಜಿ!

Published : Jul 27, 2023, 04:07 PM ISTUpdated : Jul 27, 2023, 04:17 PM IST
ಖಾಕಿ ತೊಟ್ಟು ಪೊಲೀಸ್‌ ಸ್ಟೇಷನ್‌ನಲ್ಲಿ ಕೋಳಿ ಸಾರು ಮಾಡಿದ ವಿಡಿಯೋ ವೈರಲ್‌, ನೋಟಿಸ್‌ ನೀಡಿದ ಐಜಿ!

ಸಾರಾಂಶ

ಪತ್ತನಂತಿಟ್ಟದ ಇಳವುಂತಿಟ್ಟಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಟೇಷನ್‌ನಲ್ಲಿಯೇ ಕೋಳಿ ಸಾರು ಮಾಡಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲಿಯೇ, ಪೊಲೀಸ್‌ ವರಿಷ್ಠಾಧಿಕಾರಿ ಸ್ಪಷ್ಟನೆ ಕೇಳಿ ನೋಟಿಸ್‌ ಜಾರಿ ಮಾಡಿದ್ದಾರೆ.

ತಿರುವನಂತಪುರ (ಜು.27): ಖಾಕಿ ಮೈಮೇಲೆ ಇದ್ದಾಗ ಪೊಲೀಸ್‌ ಅಧಿಕಾರಿಗಳು ಕರ್ತವ್ಯದ ಹೊರತಾಗಿ ಬೇರೇನನ್ನೂ ಯೋಚಿಸೋದಿಲ್ಲ. ಆದರೆ, ಕೇರಳದ ಪತ್ತನಂತಿಟ್ಟದ ಇಳವುಂತಿಟ್ಟಾ ಪೊಲೀಸ್ ಠಾಣೆಯ ಅಧಿಕಾರಿಗಳು ಖಾಕಿ ಹಾಕಿಕೊಂಡೇ, ಪೊಲೀಸ್‌ ಸ್ಟೇಷನ್‌ನಲ್ಲಿ ಕೋಳಿ ಸಾರು ಹಾಗೂ ಮರಗೆಣಸಿನ ಪದಾರ್ಥ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವೀವ್ಸ್‌ ಪಡೆದುಕೊಂಡ ಬೆನ್ನಲ್ಲಿಯೇ ಪೊಲೀಸ್‌ ವರಿಷ್ಠಾಧಿಕಾರಿ ಸ್ಪಷ್ಟನೆ ಕೇಳಿ ಪೊಲೀಸ್‌ ಸ್ಟೇಷನ್‌ಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಕೇರಳದ ದಕ್ಷಿಣ ವಲಯದ ಐಜಿ, ಇಡೀ ಸ್ಟೇಷನ್‌ನ ಅಧಿಕಾರಿಗಳು ನೋಟಿಸ್‌ಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪೊಲೀಸ್‌ ಠಾಣೆಯಲ್ಲಿ ಮರಗೆಣಸಿನ ಪದಾರ್ಥ ಹಾಗೂ ಕೋಳಿ ಸಾರು ಮಾಡಿಕೊಂಡು ಅಧಿಕಾರಿಗಳು ತಿನ್ನುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಶೇರ್‌ ಆಗಿದೆ. ಕರ್ತವ್ಯದಲ್ಲಿರುವ ಪೊಲೀಸ್‌ ಅಧಿಕಾರಿಗಳು ಸ್ಟೇಷನ್‌ನಲ್ಲಿ ಈ ಕೆಲಸ ಮಾಡಲು ಹೇಗೆ ಸಾಧ್ಯ. ಅದಲ್ಲದೆ ಇದನ್ನು ಆಕರ್ಷಕವಾಗಿ ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿ ಬಿಟ್ಟಿರುವ ಕಾರಣವೇನು ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ.

ಇನ್ನೂ ಈ ವಿಡಿಯೋ ನೋಡಿದ ವ್ಯಕ್ತಿಗಳು ಪೊಲೀಸ್‌ ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ. ಇದಕ್ಕೆ ಸಾಕಷ್ಟು ಧನಾತ್ಮಕ ಕಾಮೆಂಟ್‌ಗಳು ಬಂದಿವೆ. ಈ ವಿಡಿಯೋವನ್ನು ಹಲವರು ಶೇರ್ ಕೂಡ ಮಾಡಿದ್ದಾರೆ. ಮರಗೆಣಸಿನ ಖಾದ್ಯ ಹಾಗೂ ಕೋಳಿ ಸಾರನ್ನು ತಯಾರಿಸಿದ ಅದನ್ನು ಅತ್ಯುತ್ತಮ ಹಿನ್ನೆಲೆ ಗೀತೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು. ಖಾದ್ಯ ರೆಡಿ ಮಾಡಿದ ಬಳಿಕ ಅಧಿಕಾರಿಗಳಿಗೆ ಬಡಿಸಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಭಾರಿ ಜನಪ್ರಿಯತೆ ಪಡೆದ ಬಳಿಕ ಉನ್ನತ ಅಧಿಕಾರಿಯ ಈ ಕ್ರಮಕ್ಕೆ ಮುಂದಾಗಿರುವುದು ಗಮನಾರ್ಹವಾಗಿದೆ.

ಗೆಳೆಯನ ಜೊತೆ ಸುತ್ತಾಡ್ತಿದ್ದ ಹೆಂಡ್ತೀನ ರೆಡ್‌ಹ್ಯಾಂಡ್‌ ಆಗಿ ಹಿಡಿದ ಗಂಡ, ವಿಡಿಯೋ ವೈರಲ್‌

ಅಂದಾಜು ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ಇದನ್ನು ಸ್ವತಃ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರೇ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿವರೆಗೂ ಈ ವಿಡಿಯೋ 9 ಲಕ್ಷಕ್ಕೂ ಅಧಿಕ ಲೈಕ್ಸ್‌ಗಳು ಬಂದಿದ್ದು, 6 ಸಾವಿರಕ್ಕೂ ಅಧಿಕ ಕಾಮೆಂಟ್‌ಗಳು ಬಂದಿವೆ.

ಹೆಂಡತಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತ ಮಾಡಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?