
ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ನಡೆಸುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆಯಿಂದಾಗಿ ಅನೇಕ ರಾಜ್ಯಗಳಲ್ಲಿ ಲಕ್ಷಕ್ಕೂ ಅಧಿಕ ಅಕ್ರಮ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಹೊರಗೆ ತೆಗೆಯಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಇದರ ಪ್ರಮಾಣ ವಿಭಿನ್ನವಾಗಿದೆ. ದೇಶಬಿಟ್ಟು ಬಂದು ಮತದಾರರ ಪಟ್ಟಿಗಳಲ್ಲಿ ಸ್ಥಾನ ಪಡೆದ ಅನೇಕರ ವಿವರ ಬಯಲಾಗುತ್ತಿದೆ. ಹೀಗಿರುವಾಗ ಆಘಾತಕಾರಿ ವಿಚಾರವೊಂದು ಬಯಲಾಗಿದೆ. ಕೇವಲ ಮುಂಬೈ ಮಹಾನಗರವೊಂದರಲ್ಲಿಯೇ ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದು ಇಲ್ಲಿ ನೆಲೆಸಿರುವ ಶೇಕಡಾ 70ರಷ್ಟು ಜನರು ಭಾರತೀಯ ವೋಟರ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.
ಭಾರತದ ವಾಣಿಜ್ಯ ಹಾಗೂ ಆರ್ಥಿಕ ರಾಜಧಾನಿ ಎನಿಸಿರುವ ಮುಂಬೈ ತನ್ನೊಳಗೆ ದೇಶದ ಒಳಗಿನ ಬೇರೆ ರಾಜ್ಯಗಳಿಂದ ಹಾಗೂ ದೇಶದ ಹೊರಗಿನಿಂದ ವಲಸೆ ಬಂದ ಸಾವಿರಾರು ಅಕ್ರಮ ವಲಸಿಗರಿಗೆ ಆಶ್ರಯ ತಾಣವಾಗಿದೆ.
ಹೀಗಿರುವಾಗ ಮುಂಬೈ ನಗರಕ್ಕೆ ವಲಸೆಯ ಪರಿಣಾಮ ಎಂದ ಹೊಸ ಅಧ್ಯಯನವೊಂದರ ಪ್ರಕಾರ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಿಂದ ಬಂದಿರುವ ದಾಖಲೆ ಇಲ್ಲದ ವಲಸಿಗರ ಆಗಮನವು ನಗರದ ಸಾಮರ್ಥ್ಯಕ್ಕೆ ಅಪಾಯವನ್ನುಂಟುಮಾಡುತ್ತಿದೆ ಎಂದು ತಿಳಿದು ಬಂದಿದೆ. ಮುಂಬೈ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪಬ್ಲಿಕ್ ಪಾಲಿಸಿಯ ಪ್ರೊಫೆಸರ್ ಮೇಧಾ ತಾಪಿಯಾವಾಲಾ ಮತ್ತು ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸೌವಿಕ್ ಮೊಂಡಲ್ ಅವರು ಜುಲೈ 2024 ಮತ್ತು ಜುಲೈ 2025 ರ ನಡುವೆ ವಲಸಿಗರ ಪ್ರಾಬಲ್ಯದ ಪ್ರದೇಶಗಳಲ್ಲಿ 3,000 ಕ್ಕೂ ಹೆಚ್ಚು ಜನರನ್ನು ಒಳಗೊಂಡ ಸಮೀಕ್ಷೆ ನಡೆಸಿದ್ದರು. ಈ ಸಮೀಕ್ಷೆಯ ಫಲಿತಾಂಶದಿಂದ ಹಲವು ವಿಚಾರಗಳು ಬೆಳಕಿಗೆ ಬಂದಿವೆ.
ಮುಂಬೈನ ಶೇ. 43 ರಷ್ಟು ವಲಸೆ ಬಂದಿರುವ ಜನಸಂಖ್ಯೆಯಲ್ಲಿ, ದಾಖಲೆ ಹೊಂದಿರುವ ವಲಸಿಗರು ಇಲ್ಲಿ ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ಆದರೆ ಅಕ್ರಮ ವಲಸಿಗರು ನಗರಕ್ಕೆ ಹಲವಾರು ಸವಾಲುಗಳನ್ನು ಒಡ್ಡಿದ್ದಾರೆ. ಹೆಚ್ಚುತ್ತಿರುವ ವಲಸಿಗರ ಒಳಹರಿವು ನಗರದ ವಸತಿ, ಸಾರಿಗೆ ಮತ್ತು ಆರೋಗ್ಯ ವ್ಯವಸ್ಥೆಗಳ ಮೇಲೆ ಗಣನೀಯ ಒತ್ತಡ ಬೀರಿದೆ. ಜನಸಂಖ್ಯೆ ಹೆಚ್ಚಳಕ್ಕೆ ಜನನ ಪ್ರಮಾಣ ಕಾರಣ ಎಂದು ಹೇಳಲಾಗುವುದಿಲ್ಲ, ದಾಖಲೆ ರಹಿತ ವಲಸಿಗರ ಚಲನೆ ಈ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಮಂಡಲ್ ವಿವರಿಸಿದ್ದಾರೆ. ಈ ಅಂಶವನ್ನು ಒತ್ತಿ ಹೇಳಲು ಅಧ್ಯಯನವು ಧಾರ್ಮಿಕ ಜನಸಂಖ್ಯಾಶಾಸ್ತ್ರವನ್ನು ಉಲ್ಲೇಖಿಸಿದ್ದು, ಜನಗಣತಿಯ ಪ್ರಕಾರ, 1951 ರಲ್ಲಿ ಶೇಕಡಾ 90 ರಷ್ಟಿದ್ದ ಹಿಂದೂ ಜನಸಂಖ್ಯೆಯ 2011 ರಲ್ಲಿ ಶೇಕಡಾ 65ಕ್ಕೆ ಇಳಿದಿದೆ, ಆದರೆ ಅದೇ ಅವಧಿಯಲ್ಲಿ ಮುಸ್ಲಿಂ ಜನಸಂಖ್ಯೆಯು ಶೇಕಡಾ 10 ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಮಕ್ಕಳ ಹೆಂಡ್ತಿ ಕಸ್ಟಡಿಗೆ ಕೊಡ್ಬೇಕಾಗುತ್ತೆ ಅಂತ ಇಬ್ಬರು ಮುದ್ದು ಮಕ್ಕಳ ಕೊಂದು ಸಾವಿಗೆ ಶರಣಾದ ಪತಿ, ಆತನ ತಾಯಿ
ದಾಖಲೆ ಇಲ್ಲದ ಅಕ್ರಮ ವಲಸಿಗರಲ್ಲಿ 67 ಪ್ರತಿಶತ ಪುರುಷರು ಮತ್ತು 33 ಪ್ರತಿಶತ ಮಹಿಳೆಯರಾಗಿದ್ದಾರೆ. ಇದು ಮುಖ್ಯವಾಗಿ ಕಾರ್ಮಿಕರ ಬೇಡಿಕೆಯಿಂದಾಗಿ ಆಗಿರುವಂತಹ ವಲಸೆಯಾಗಿದೆ. ಹೀಗೆ ಅಕ್ರಮ ವಲಸಿಗರಲ್ಲಿ ಶೇ. 96 ರಷ್ಟು ಜನರು ಮುಸ್ಲಿಮರೆಂದು ಗುರುತಿಸಲಾಗಿದ್ದು, ಅವರಲ್ಲಿ ಶೇ. 41.6 ರಷ್ಟು ಜನರು ಅನಕ್ಷರಸ್ಥರಾಗಿದ್ದಾರೆ. ಇವರು ತಮ್ಮ ವೀಸಾ ಅವಧಿ ಮುಗಿದ ನಂತರವೂ ತಮ್ಮ ದೇಶಕ್ಕೆ ಮರಳದೇ ಇಲ್ಲೇ ಉಳಿದುಕೊಂಡವರಾಗಿದ್ದಾರೆ. ಮತ್ತೆ ಕೆಲವರು ಅನಧಿಕೃತವಾಗಿ ಗಡಿ ದಾಟಿ ಬಂದವರು ಎಂಬುದನ್ನು ಈ ಸಮೀಕ್ಷೆ ಖಚಿತಪಡಿಸಿದೆ. ಸಂಶೋಧನೆಗಳ ಪ್ರಕಾರ, ದಾಖಲೆ ಇಲ್ಲದ ಈ ಅಕ್ರಮ ವಲಸಿಗರು ಹೆಚ್ಚಾಗಿ ಬಂಗಾಳಿ ಮಾತನಾಡುವವರಾಗಿದ್ದು, ಮುಂಬೈನಗೋವಂಡಿ, ಕುರ್ಲಾ, ಮಂಖುರ್ಡ್, ಚೀತಾ ಕ್ಯಾಂಪ್, ವರ್ಸೋವಾ ಮತ್ತು ಬಾಂದ್ರಾ ಪೂರ್ವದ ಕೆಲವು ಭಾಗಗಳಲ್ಲಿ ದಟ್ಟವಾಗಿ ತುಂಬಿದ್ದಾರೆ. ಈ ಪ್ರದೇಶಗಳು ಬಹಳ ದುರ್ಬಲ ಮೂಲಸೌಕರ್ಯಗಳಿಂದ ಕೂಡಿದೆ. ಪ್ರತಿ ಕೋಣೆಯಲ್ಲಿ ಮೂವರಂತೆ ಇಲ್ಲಿ ಜನ ವಾಸಿಸುತ್ತಿರುವುದರಿಂದ ಇಲ್ಲಿ ವೃದ್ಧರು ಹಾಗೂ ಮಕ್ಕಳಲ್ಲಿ ರೋಗ ಹರಡುವ ಸಾದ್ಯತೆ ಹೆಚ್ಚು ಹೀಗಾಗಿ ಈ ಗುಂಪುಗಳು ಆರೋಗ್ಯ ರಕ್ಷಣಾ ವ್ಯವಸ್ಥೆ ಮೇಲೆ ಒತ್ತಡ ಬೀರುತ್ತವೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪ್ಯಾಸೆಂಜರ್‌ಗೆ ಮೂಗಿನ ಮೂಳೆ ಮುರಿಯುವಂತೆ ಹೊಡೆದ ಏರ್ ಇಂಡಿಯಾ ಪೈಲಟ್ ವಿರುದ್ಧ ಎಫ್‌ಐಆರ್
ಇಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಯಿಂದಾಗಿ ನಗರದಲ್ಲಿನ ಮ್ಯಾಂಗ್ರೋವ್ ಕಾಡುಗಳು ಹೆಚ್ಚಾಗಿ ನಾಶವಾಗಿವೆ. ಇದರಿಂದ ಪರಿಸರ ಅಸಮತೋಲನವು ಈ ಸಮೂಹಗಳು ಪ್ರವಾಹಕ್ಕೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ ಮತ್ತು ಭೂಗತ ಮಾಲಿನ್ಯದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನದಲ್ಲಿ ಮೊಂಡಲ್ ತಿಳಿಸಿದ್ದಾರೆ. ಅಧ್ಯಯನದ ಪ್ರಕಾರ, ಅಕ್ರಮ ವಲಸಿಗರಿಂದ ನಗರದ ಮೇಲೆ ದೊಡ್ಡ ಪರಿಣಾಮ ಇದ್ದು, ಅಕ್ರಮವಲಸಿಗ ಕೌಶಲ್ಯರಹಿತ ಕಾರ್ಮಿಕರು ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುತ್ತಾರೆ, ಸಾರ್ವಜನಿಕ ಸಂಸ್ಥೆಗಳ ಮೇಲೆ ಒತ್ತಡ ಹೇರುತ್ತಾರೆ ಮತ್ತು ಆರ್ಥಿಕತೆಗೆ ಕಡಿಮೆ ಕೊಡುಗೆ ನೀಡುತ್ತಾರೆ, ಆದರೆ ಕೌಶಲ್ಯಪೂರ್ಣ ಕಾರ್ಮಿಕರು ಇದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಾರೆ. ಮುಂಬೈನಲ್ಲಿ ಕಾರ್ಮಿಕರ ಬೇಡಿಕೆಯು ಅಕ್ರಮ ವಲಸಿಗರನ್ನು ಹೆಚ್ಚು ಆಕರ್ಷಿಸುತ್ತದೆ ಅವರಲ್ಲಿ ಹೆಚ್ಚಿನವರು ಕೌಶಲ್ಯರಹಿತ ಕಾರ್ಮಿಕರಾಗಿದ್ದಾರೆ ಎಂದು ಈ ಅಧ್ಯಯನ ವರದಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ