ಇಬ್ಬರು ಯುವ ಸೇನಾ ಅಧಿಕಾರಿಗಳು ಮತ್ತು ಅವರ ಇಬ್ಬರು ಮಹಿಳಾ ಸ್ನೇಹಿತರ ಮೇಲೆ ಇಂದೋರ್‌ನಲ್ಲಿ ದಾಳಿ ನಡೆದಿದ್ದು, ಈ ವೇಳೆ ಒಬ್ಬ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ದುಷ್ಕರ್ಮಿಗಳು ಹಣವನ್ನು ದೋಚಿದ್ದಾರೆ ಮತ್ತು ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.
ಇಂದೋರ್ (ಸೆ.12): ಇಬ್ಬರು ಯುವ ಸೇನಾ ಅಧಿಕಾರಿಗಳು ಹಾಗೂ ಅವರ ಇಬ್ಬರು ಮಹಿಳಾ ಸ್ನೇಹಿತರ ಮೇಲೆ ಬುಧವಾರ ನಸುಕಿನ ಜಾವದ ಮೇಳೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ದಾಳಿ ಮಾಡಲಾಗಿದೆ. ಈ ವೇಳೆ ಒಬ್ಬಾಕೆಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ವರದಿಯಾಗಿದೆ. ಪ್ರಕರಣದಲ್ಲಿ ಸಂಬಂಧಪಟ್ಟಂತೆ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ ನಾಲ್ವರು ಪಿಕ್‌ನಿಕ್‌ಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಅಧಿಕಾರಿಗಳು 23 ಮತ್ತು 24 ವರ್ಷ ವಯಸ್ಸಿನವರಾಗಿದ್ದು, ರಾಜ್ಯದ ಮೊವ್ ಕಂಟೋನ್ಮೆಂಟ್ ಪಟ್ಟಣದಲ್ಲಿರುವ ಇನ್‌ಫೆಂಟ್ರಿ ಶಾಲೆಯಲ್ಲಿ ಯಂಗ್ ಆಫೀಸರ್ಸ್ (YO) ಕೋರ್ಸ್ ಅನ್ನು ಕಲಿಯುತ್ತಿದ್ದಾರೆ. ಬುಧವಾರ ಮುಂಜಾನೆ 2 ಗಂಟೆಗೆ ಮೌ-ಮಂಡ್ಲೇಶ್ವರ ರಸ್ತೆಯಲ್ಲಿರುವ ಪಿಕ್ನಿಕ್ ಸ್ಥಳಕ್ಕೆ ಆಗಮಿಸಿದ ಏಳು ಅಪರಿಚಿತ ವ್ಯಕ್ತಿಗಳು ನಾಲ್ವರ ಮೇಲೆ ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳು ಒಬ್ಬ ಅಧಿಕಾರಿ ಮತ್ತು ಇಬ್ಬರು ಮಹಿಳೆಯರನ್ನು ಥಳಿಸಿದ್ದಾರೆ ಎಂದು ಬಡಗೊಂಡ ಪೊಲೀಸ್ ಠಾಣೆಯ ಉಸ್ತುವಾರಿ ಲೋಕೇಂದ್ರ ಸಿಂಗ್ ಹಿರೋರ್ ಪಿಟಿಐಗೆ ತಿಳಿಸಿದ್ದಾರೆ.
ದುಷ್ಕರ್ಮಿಗಳು ಅಧಿಕಾರಿಗಳಿಂದ 10 ಲಕ್ಷ ರೂಪಾಯಿ ಹಣವನ್ನೂ ಕೇಳಿದ್ದರು. ಅಷ್ಟರಲ್ಲಿ ಕಾರಿನಿಂದ ಸ್ವಲ್ಪ ದೂರವಿದ್ದ ಎರಡನೇ ಅಧಿಕಾರಿ ಘಟನೆಯ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿದ್ದು ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸುಮಾರು ಬೆಳಕ್ಕೆ 6.30 ಗಂಟೆಗೆ ಆಸ್ಪತ್ರೆಯಲ್ಲಿ ನಾಲ್ವರನ್ನು ವೈದ್ಯಕೀಯವಾಗಿ ಪರೀಕ್ಷಿಸಲಾಯಿತು, ಅಲ್ಲಿ ವೈದ್ಯರು ಗಾಯಗಳ ಲಕ್ಷಣಗಳನ್ನು ದೃಢಪಡಿಸಿದರು. ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಲೂಟಿ, ಡಕಾಯಿತಿ, ಅತ್ಯಾಚಾರ ಮತ್ತು ಶಸ್ತ್ರಾಸ್ತ್ರ ಕಾಯ್ದೆಗೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಉಳಿದ ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅವರು ಹೇಳಿದರು.ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಇಂದೋರ್ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ), ಹಿತಿಕಾ ವಾಸಲ್, “ನಾಲ್ಕು ಜನರು ತಡರಾತ್ರಿ ಆರ್ಮಿ ಫೈರಿಂಗ್ ರೇಂಜ್‌ಗೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಬಂದಿದೆ. ಇಬ್ಬರಿಗೆ ಥಳಿಸಿದ ಘಟನೆ ಅಲ್ಲಿ ನಡೆದಿದೆ. ಉಳಿದ ಇಬ್ಬರಿಗೆ 10 ಲಕ್ಷ ರೂಪಾಯಿ ತರಲು ಹೇಳಲಾಗಿತ್ತು' ಎಂದಿದ್ದಾರೆ.
ಮುಸ್ಲಿಂ ಮಹಿಳೆಗೆ ಇಷ್ಟವಾದ್ರೆ ಆತನ ರೇಪ್ ಗ್ಯಾರಂಟಿ : ಕತ್ತಲಲ್ಲೇ ನಡೆಯುತ್ತೆ ಕೆಲಸ
ತಮ್ಮೊಂದಿಗೆ ಇದ್ದ ಮಹಿಳಾ ಸ್ನೇಹಿತೆಯನ್ನು ದುಷ್ಕರ್ಮಿಗಳು ಒಂದು ಮೂಲೆಗೆ ಕರೆದೊಯ್ದಿದ್ದರು. ಬಳಿಕ ಆಕೆ ಕಿರುಚಾಡುತ್ತಿದ್ದದ್ದು ಕೇಳಿಸಿತು ಎಂದು ಹೇಳಿದ್ದಾರೆ. ಆಕೆಗೆ ಏನಾದರೂ ಅನಾಹುತ ಆಗಿರಬಹುದು ಎಂದು ಶಂಕಿಸಿದ್ದೆ ಎಂದು ದೂರುದಾರರು ಹೇಳಿದ್ದಾರೆ. ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದರಾದರೂ ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರ 10 ತಂಡಗಳು ತನಿಖೆ ನಡೆಸಿ ಆರು ಆರೋಪಿಗಳನ್ನು ಗುರುತಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಆಡಳಿತವಿರುವ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಆರೋಪ ಹೊರಿಸಿದ್ದಾರೆ.
ವಿಂಗ್ ಕಮಾಂಡರ್ ವಿರುದ್ಧ ರೇಪ್ ಕೇಸ್ ದಾಖಲಿಸಿದ ಮಹಿಳಾ ಐಎಎಫ್ ಅಧಿಕಾರಿ
“ಮಧ್ಯಪ್ರದೇಶದಲ್ಲಿ ಇಬ್ಬರು ಸೈನಿಕರ ಮೇಲಿನ ಹಿಂಸಾಚಾರ ಮತ್ತು ಅವರ ಮಹಿಳಾ ಸ್ನೇಹಿತೆಯ ಮೇಲಿನ ಅತ್ಯಾಚಾರವು ಇಡೀ ಸಮಾಜ ತಲೆತಗ್ಗಿಸಲು ಸಾಕಾಗಿದೆ.. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಹುತೇಕ ಅಸ್ತಿತ್ವದಲ್ಲಿಲ್ಲ, ಮತ್ತು ದಿನದಿಂದ ದಿನಕ್ಕೆ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಬಿಜೆಪಿ ಸರ್ಕಾರದ ನಕಾರಾತ್ಮಕ ಧೋರಣೆ ಅತ್ಯಂತ ಕಳವಳಕಾರಿಯಾಗಿದೆ' ಎಂದು ಅವರು ಬರೆದಿದ್ದಾರೆ. ಮಹಿಳೆಯ ಹೇಳಿಕೆಯನ್ನು ಪೊಲೀಸರು ಇನ್ನೂ ದಾಖಲು ಮಾಡಿಲ್ಲ, ನಂತರ ಮುಂದಿನ ಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ವಾಸಲ್ ಹೇಳಿದರು.