ಮನೆಯಲ್ಲಿ ಫ್ರಿಡ್ಜ್ ಇದ್ರೆ ಸಿಗಲ್ಲ ಆಯುಷ್ಮಾನ್ ಕಾರ್ಡ್; ಯಾವೆಲ್ಲಾ ವಸ್ತುಗಳಿದ್ರೆ ಅನರ್ಹರಾಗ್ತೀರಿ!

By Mahmad Rafik  |  First Published Sep 12, 2024, 3:10 PM IST

ಆಯುಷ್ಮಾನ್ ಭಾರತ್ ಯೋಜನೆಯಡಿ 50 ಕೋಟಿಗೂ ಅಧಿಕ ಜನರು ಲಾಭ ಪಡೆದಿದ್ದಾರೆ. ಆಯುಷ್ಮಾನ್ ಕಾರ್ಡ್ ಪಡೆಯಲು ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಬೇಕು. ಕೆಲವು ವಸ್ತುಗಳನ್ನು ಹೊಂದಿರುವವರು ಈ ಯೋಜನೆಗೆ ಅನರ್ಹರಾಗಿರುತ್ತಾರೆ.


ನವದೆಹಲಿ: ಆಯುಷ್ಮಾನ್ ಭಾರತ್ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಇದೀಗ ಮತ್ತೊಮ್ಮೆ ಆಯುಷ್ಮಾನ್ ಭಾರತ್ ಚರ್ಚೆಗೆ ಗ್ರಾಸವಾಗಿದೆ. ಸ್ವಾಸ್ಥ ಮತ್ತು ಆರೋಗ್ಯಕರ ಸಮಾಜಕ್ಕಾಗಿ ಮೋದಿ ಸರ್ಕಾರ ಈ ಯೋಜನೆಯನ್ನು ತಂದಿದೆ. ಇದುವರೆಗೂ 50 ಕೋಟಿಗೂ ಅಧಿಕ ಜನರು ಆಯುಷ್ಮಾನ್ ಭಾರತ್ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ನೀವೂ ಸಹ ಆಯುಷ್ಮಾನ್ ಭಾರತ್ ಯೋಜನೆಯ ಲಾಭ ಪಡೆಬೇಕೆಂದು ಯೋಚಿಸುತ್ತಿದ್ದರೆ ಆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಆಯುಷ್ಮಾನ್ ಕಾರ್ಡ್ ಯಾರಿಗೆ ನೀಡಬೇಕು ಎಂಬುದಕ್ಕೆ ಸರ್ಕಾರ ಕೆಲವೊಂದು ಮಾನದಂಡಗಳನ್ನು ರೂಪಿಸಿದೆ. ಈ ಮಾನದಂಡಗಳ ಪ್ರಕಾರ ಫಲಲಾನುಭವಿ ಎಸ್‌ಸಿ-ಎಸ್‌ಟಿ ಅಥವಾ ಇಡಬ್ಲ್ಯೂಎಸ್ ಶ್ರೇಣಿಯಲ್ಲಿರಬೇಕು. ಇದರ ಜೊತೆಗೆ ನಿಮ್ಮ ಮಾಸಿಕ ಆದಾಯ 10 ಸಾವಿರ ರೂಪಾಯಿಗಿಂತ ಅಧಿಕವಾಗಿರಬಾರದು. ಯಾರ ಬಳಿ ಸ್ವಂತ ಮನೆ, ನಿವೇಶನ, ಕೃಷಿ ಜಮೀನು ಇಲ್ಲವೋ ಅಂತಹವರನ್ನು ಆಯುಷ್ಮಾನ್ ಯೋಜನೆಯಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಆಯುಷ್ಮಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮೊದಲು ಸರ್ಕಾರದ ಬಗ್ಗೆ ತಿಳಿದುಕೊಳ್ಳಬೇಕು. 

Tap to resize

Latest Videos

ಆಯುಷ್ಮಾನ್ ಕಾರ್ಡ್ ಹೊಂದಿರುವ ಜನರಿಗೆ ವಿವಿಧ ಚಿಕಿತ್ಸೆಯ ಸೌಲಭ್ಯಗಳು ಸಿಗುತ್ತವೆ. ಆಯುಷ್ಮಾನ್ ಕಾರ್ಡ್ ಬಳಸಿ ರೋಗ ತಪಾಸಣೆ, ವೈದ್ಯರ ಸಲಹೆ, ಆಸ್ಪತ್ರೆಗೆ ದಾಖಲು ಸೇರಿದಂತೆ ಹಲವು ಆರೋಗ್ಯ ಸೇವೆಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಚಿಕಿತ್ಸೆಯಲ್ಲಿ ಬಳಸುವ ಉಪಕರಣಗಳು, ಪ್ರಯೋಗಾಲಯ ಪರೀಕ್ಷೆಗಳು, ಹಾಸಿಗೆ ಸೌಲಭ್ಯಗಳು, ಆಸ್ಪತ್ರೆಯಲ್ಲಿ ಆಹಾರ ಮತ್ತು ಪಾನೀಯ ಸೌಲಭ್ಯಗಳು ನಿಮಗೆ ಲಭ್ಯವಾಗುತ್ತವೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ 15 ದಿನಗಳವರೆಗೂ ನೀವೂ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.

ಪಿಎಂ ಮೋದಿಯನ್ನ ನನ್ನ ವೈರಿಯೆಂದು ಪರಿಗಣಿಸಿಲ್ಲ ಎಂದ ರಾಹುಲ್ ಗಾಂಧಿ

ಒಂದು ಆಯುಷ್ಮಾನ್ ಕಾರ್ಡ್ ಅಡಿಯಲ್ಲಿ ಕುಟುಂಬದ ಓರ್ವ ಸದಸ್ಯರಿಗೆ 5 ಲಕ್ಷ ರೂಪಾಯಿವರೆಗೂ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು. ಕೆಲ ದಿನಗಳಿಂದ ಚಿಕಿತ್ಸಾ ವೆಚ್ಚದ ಬಗ್ಗೆ ಚರ್ಚೆಗಳು ನಡೆದಿದ್ದವು. ವೈದ್ಯಕೀಯ ಖರ್ಚುಗಳು ಏರಿಕೆಯಾಗಿರುವ ಕಾರಣ ಈ ಮೊತ್ತವನ್ನು 10 ಲಕ್ಷ ರೂಪಾಯಿಯವರೆಗೆ ಹೆಚ್ಚಳ ಮಾಡಬೇಕೆಂಬ ಆಗ್ರಹಗಳು ಕೇಳಿ ಬರುತ್ತಿವೆ. ದೇಶದ 50 ಕೋಟಿ ಜನರು ಮತ್ತು ಸುಮಾರು ಐದರಿಂದ ಏಳು ಕೋಟಿ ಹಿರಿಯರು   ಗಂಭೀರ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ನಿಮಗೆ ಆಯುಷ್ಮಾನ್ ಕಾರ್ಡ್ ಬೇಕಿದ್ದರೆ ನಿಮ್ಮ ಬಳಿ ಈ ವಸ್ತುಗಳು ಇರಬಾರದು. 

*ಯಾರ ಬಳಿ ಬೈಕ್, ಕಾರ್ ಅಥವಾ ಆಟೋ ರಿಕ್ಷಾ ಇದ್ರೆ ನಿಮಗೆ ಆಯುಷ್ಮಾನ್ ಕಾರ್ಡ್ ಸಿಗಲ್ಲ.
*ಮೀನು ಹಿಡಿಯಲು ನಿಮ್ಮ ಬಳಿ ಸ್ವಂತದ್ದು ಬೋಟ್ ಇದ್ದರೆ ನೀವು ಈ ಯೋಜನೆಗೆ ಅನರ್ಹರಾಗುತ್ತೀರಿ.
*ಜಮೀನಿನಲ್ಲಿ ಕೆಲಸ ಮಾಡಲು ಕೃಷಿ ಉಪಕರಣಗಳನ್ನು ಹೊಂದಿದ್ರೆ ನೀವು ಅನರ್ಹರು. 
*ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗಿಗಳು ಸಹ ಅರ್ಹರಲ್ಲ.
*ಯಾರ ಬಳಿ 50 ಸಾವಿರಕ್ಕೂ ಅಧಿಕ ಬೆಲೆಯ ಕಿಸಾನ್ ಕ್ರೆಡಿಟ್ ಕಾರ್ಡ್ ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಯಾಗಲು ಸಾಧ್ಯವಿಲ್ಲ.
*ಸರ್ಕಾರಿ ಒಡೆತನದ ನಾನ್ ಅಗ್ರಿಕಲ್ಚರ್ ಇಂಟರ್‌ಪ್ರೊಸೆಸಜ್ ಕೆಲಸ ಮಾಡುವವರು. 
*ಪ್ರತಿ ತಿಂಗಳು 10 ಸಾವಿರ ರೂಪಾಯಿ ಆದಾಯ ಹೊಂದಿರುವವರು. 
*ಮನೆಯಲ್ಲಿ ಫ್ರಿಡ್ಜ್ ಅಥವಾ ಲ್ಯಾಂಡ್‌ಲೈನ್ ಫೋನ್ ಹೊಂದಿರುವವರು. 
*ಯಾರ ಬಳಿ ಸ್ವಂತ ಮನೆ ಅಥವಾ 5 ಎಕರೆಗೂ ಅಧಿಕ ಕೃಷಿ ಜಮೀನು ಹೊಂದಿರುವವರು ಸಹ ಆಯುಷ್ಮಾನ್ ಭಾರತ್ ಯೋಜನಗೆ ಅನರ್ಹರು.

ಆ ವಿಷಯ ಎಲ್ಲಿಯೂ ಹೇಳಿಕೊಳ್ಳಲು ಆಗ್ತಿರಲಿಲ್ಲ: ಕೈ ನಾಯಕನ ಹೇಳಿಕೆಗೆ ಸತ್ಯ ಹೊರ ಬಂತಲ್ವಾ ಎಂದ ಬಿಜೆಪಿ

click me!