Asianet Suvarna News Asianet Suvarna News

ಮುಸ್ಲಿಂ ಮಹಿಳೆಗೆ ಇಷ್ಟವಾದ್ರೆ ಆತನ ರೇಪ್ ಗ್ಯಾರಂಟಿ : ಕತ್ತಲಲ್ಲೇ ನಡೆಯುತ್ತೆ ಕೆಲಸ

ಮಹಿಳೆಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂಬ ದೇಶ, ಜನಾಂಗದ ಸಿಗೋದು ಬಹಳ ಅಪರೂಪ. ಆದ್ರೆ ಈ ಜಾಗದಲ್ಲಿ ಮಾತ್ರ ಮಹಿಳೆಯರದ್ದೇ ಮೇಲುಗೈ. ಅವ್ರು ಮಾಡಿದ್ದೇ ಶಾಸನ. ಬುರ್ಖಾ ಧರಿಸುವ ಪುರುಷರಿಗೆ ರೇಪ್ ಆಗೋ ಭಯ.

men raped every day muslim women give horrific punishment  roo
Author
First Published Sep 12, 2024, 3:02 PM IST | Last Updated Sep 14, 2024, 10:45 AM IST

ವಿಶ್ವದ ಬಹುತೇಕ ದೇಶಗಳಲ್ಲಿ ಮಹಿಳೆ (Women)ಯರು ಸೇಫ್ (safe) ಅಲ್ವೇ ಅಲ್ಲ. ಅಲ್ಲಿ ಅತ್ಯಾಚಾರ ಪ್ರಕರಣ (Rape Case) ನಿತ್ಯ ನಿರಂತರವಾಗಿದೆ. ಪುರುಷರ ಕ್ರೌರ್ಯಕ್ಕೆ ಬಳಲಿ ಬೆಂಡಾಗಿರುವ ಮಹಿಳೆಯರಿಗೆ ಇಲ್ಲೊಂದು ಅಚ್ಚರಿ ಸುದ್ದಿಯಿದೆ. ಆಫ್ರಿಕಾದ ಒಂದು ದೇಶದಲ್ಲಿ ಮಹಿಳೆ ಬದಲು ಪುರುಷರು ಲೈಂಗಿಕ ದೌರ್ಜನ್ಯಕ್ಕೊಳಗಾಗ್ತಿದ್ದಾರೆ. ಅಲ್ಲಿ ಪುರುಷರ ಮೇಲೆ ಅತ್ಯಾಚಾರ ನಡೆಯುತ್ತದೆ.  ಇಲ್ಲಿ ಪುರುಷರ ಮೇಲೆ ಅತ್ಯಾಚಾರ ಎಸಗುವ ಮಹಿಳೆಯರು ಮುಸ್ಲಿಂ ಸಮುದಾಯ (Muslim Community) ಕ್ಕೆ ಸೇರಿದವರು ಎಂಬುದು ಮತ್ತೊಂದು ವಿಶೇಷ. ಮಹಿಳೆಗೆ ಒಬ್ಬ ಪುರುಷ ಇಷ್ಟವಾದ ಅಂದ್ರೆ ಕಥೆ ಮುಗಿತು. ಆತನಿಗೆ ಇಷ್ಟ ಇರ್ಲಿ ಬಿಡಲಿ, ಆತನ ಜೊತೆ ಶಾರೀರಿಕ ಸಂಬಂಧ ಬೆಳೆಸಿಯೇ ಕೈ ಬಿಡ್ತಾಳೆ ಮಹಿಳೆ. 

ಬುಡಕಟ್ಟು ಸಮುದಾಯದಲ್ಲಿ ಲೇಡಿಸ್ ಸ್ಟ್ರಾಂಗ್ (Ladies strong) : ಲೇಡಿಸ್ ಇಷ್ಟೊಂದು ಸ್ಟ್ರಾಂಗ್ ಆಗಿರುವ ದೇಶ ನೈಜರ್‌. ಇಲ್ಲಿನ ಟುವಾರೆಗ್ ಬುಡಕಟ್ಟಿನ (Tuareg tribes) ಮುಸ್ಲಿಂ ಸಮುದಾಯದ ಮಹಿಳೆಯರು, ಈ ವಿಷ್ಯದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಪಡೆದಿದ್ದಾರೆ. ಟುವಾರೆಗ್ ಬುಡಕಟ್ಟು ಮುಸ್ಲಿಂ ಸಮುದಾಯ ಸಹರಾ ಮರುಭೂಮಿಯಲ್ಲಿ ವಾಸಿಸುತ್ತದೆ. ಮದುವೆ ಆದ್ಮೇಲೆಯೇ ದೈಹಿಕ ಸಂಪರ್ಕ ಬೆಳೆಸಬೇಕು ಎನ್ನುವ ನಿಯಮ ಇಲ್ಲಿನ ಮಹಿಳೆಯರಿಗೆ ಅನ್ವಯವಾಗೋದಿಲ್ಲ. ಮದುವೆಗೆ ಮುನ್ನವೂ ಈ ಬುಡಕಟ್ಟು ಸಮುದಾಯದ ಹುಡುಗಿಯರು, ಲೈಂಗಿಕ ಸಂಬಂಧ ಬೆಳೆಸಬಹುದು. ಅವರಿಗೆ ಇಷ್ಟವಾದ ಪುರುಷನ ಜೊತೆ ರಾತ್ರಿ ಕಳೆಯಬಹುದು. 

ಪುರುಷರು ಧರಿಸ್ತಾರೆ ಬುರ್ಖಾ : ಟುವಾರೆಗ್ ಬುಡಕಟ್ಟು ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅವರು ಬುರ್ಖಾ ಧರಿಸೋದಿಲ್ಲ. ಮದುವೆ ನಂತ್ರ ಕೂಡ ಅವರು ಪರಪುರುಷನ ಜೊತೆ ಸಂಬಂಧ ಬೆಳೆಸಬಹುದು. ಇದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಅವರು ಇಸ್ಲಾಮಿಕ್ ಸಂಪ್ರದಾಯ, ಪದ್ಧತಿಯನ್ನು ಪಾಲಿಸೋದಿಲ್ಲ. ಮಹಿಳೆಯರ ಬದಲು ಪುರುಷರು ಬುರ್ಖಾ ಧರಿಸ್ತಾರೆ. ಟುವಾರೆಗ್ ಮಹಿಳೆಯರು ಸುಂದರವಾಗಿದ್ದು, ಅವರ ಮುಖವನ್ನು ನಾವು ಸದಾ ನೋಡ್ಬೇಕು ಎನ್ನುವ ಕಾರಣಕ್ಕೆ ಅವರಿಗೆ ಬುರ್ಖಾ ನಿಷೇಧಿಸಲಾಗಿದೆ ಎನ್ನುತ್ತಾರೆ ಇಲ್ಲಿನ ಪುರುಷರು. ಚಿಕ್ಕ ಹುಡುಗರಿಗೆ ಬುರ್ಖಾ ಇಲ್ಲ. ವಯಸ್ಕರಾಗ್ತಿದ್ದಂತೆ ಪುರುಷರು ಬುರ್ಖಾ ಧರಿಸಲು ಶುರು ಮಾಡ್ತಾರೆ. ಮಹಿಳೆಯರ ಮುಂದೆ ಪುರುಷರು ಆಹಾರ ಸೇವನೆ ಮಾಡೋದಿಲ್ಲ. 

ಡಿವೋರ್ಸ್ ನಂತ್ರ ಪಾರ್ಟಿ : ಇಲ್ಲಿನ ಮಹಿಳೆಯರು ಪತಿಗೆ ವಿಚ್ಛೇದನ ನೀಡಬಹುದು. ಡಿವೋರ್ಸ್ ಆದ್ಮೇಲೆ ಎಲ್ಲ ಆಸ್ತಿ ಮಹಿಳೆ ಪಾಲಿಗೆ ಹೋಗುತ್ತೇ ವಿನಃ ಅದನ್ನು ಮಾಜಿ ಪತಿ ಇಟ್ಕೊಳ್ಳುವಂತಿಲ್ಲ.  ಡಿವೋರ್ಸ್ ಸಿಕ್ಕಿದ ಮೇಲೆ, ಹುಡುಗಿಯರ ಪಾಲಕರು, ತಮ್ಮ ಮಕ್ಕಳಿಗೆ ಪಾರ್ಟಿ ನೀಡ್ತಾರೆ. ಈ ಬುಡಕಟ್ಟು ಸಮುದಾಯದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ನೂರಾರು ವರ್ಷಗಳಷ್ಟು ಹಳೆಯದಾದ ಈ ಬುಡಕಟ್ಟು ಜನಾಂಗದಲ್ಲಿ ಅನೇಕ ಭಿನ್ನ ಪದ್ಧತಿಗಳಿವೆ. 

ಕತ್ತಲೆಯಲ್ಲೇ ನಡೆಯಬೇಕು ವ್ಯವಹಾರ : ಮಹಿಳೆ, ಆಕರ್ಷಕ ಪುರುಷನ ಜೊತೆ ಅಕ್ರಮ ಸಂಬಂಧ ಬೆಳೆಸಬಹುದು. ಇಲ್ಲವೇ ಅತ್ಯಾಚಾರವೆಸಗಬಹುದು. ಆದ್ರೆ ಇದೆಲ್ಲವೂ ಕತ್ತಲೆಯಲ್ಲೇ ನಡೆಯಬೇಕು. ರಾತ್ರಿ ಮಾತ್ರ ಪರಪುರುಷನ ಜೊತೆ ಸಂಬಂಧ ಬೆಳೆಸುವ ಅಧಿಕಾರ ಮಹಿಳೆಗೆ ಇರುತ್ತದೆ. ರಾತ್ರಿ ಮನೆ ಮಗಳು ಮನೆಯಿಂದ ಹೊರಗಿದ್ರೂ ಪಾಲಕರು ಚಕಾರ ಎತ್ತೋದಿಲ್ಲ. ವಿವಾಹಕ್ಕಿಂತ ಮೊದಲೇ ಸಾಕಷ್ಟು ಬಾಯ್ ಫ್ರೆಂಡ್ ಹೊಂದಿರುವ ಹುಡುಗಿಯರು, ಅತ್ಯಂತ ಬುದ್ಧಿವಂತರು. ಈ ಬುಡಕಟ್ಟು ಜನಾಂಗದ ಮಂದಿ ಸಭ್ಯರು. ಅವರ ಮಧ್ಯೆ ಗಲಾಟೆ, ಜಗಳಗಳು ಬಹಳ ವಿರಳ. ಮುಖ್ಯ ಸಮುದಾಯದಿಂದ ದೂರ ಇರುವ ಅವರು ಈಗ್ಲೂ ತಮ್ಮ ಸಂಪ್ರದಾಯ, ಪದ್ಧತಿಗಳನ್ನು ಪಾಲಿಸಿಕೊಂಡು ಬರ್ತಿದ್ದಾರೆ. ಇಲ್ಲಿನ ಹುಡುಗಿಯರು 20 ವರ್ಷವಾಗೋವರೆಗೂ ಮದುವೆ ಆಗೋದಿಲ್ಲ. 
 

Latest Videos
Follow Us:
Download App:
  • android
  • ios