500 ಸಾವು, 15000 ಸೋಂಕು| ನಿನ್ನೆ ಮತ್ತೆ 1144 ಹೊಸ ಕೇಸು, 39 ಜನರ ಸಾವು
ನವದೆಹಲಿ(ಏ.19): ಶನಿವಾರ ದೇಶಾದ್ಯಂತ 1144 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 15317ಕ್ಕೆ ಜಿಗಿದಿದೆ. ಇನ್ನು ಶನಿವಾರ 39 ಸೋಂಕಿತರು ಸಾವನ್ನಪ್ಪಿದ್ದು, ಈವರೆಗೆ ಭಾರತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 5183ಕ್ಕೆ ತಲುಪಿದೆ. ಇದೇ ವೇಳೆ ಸೋಂಕಿತರ ಪೈಕಿ ಈವರೆಗೆ 2135 ಗುಣಮುಖರಾಗಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 328 ಪ್ರಕರಣ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 3648ಕ್ಕೆ ಏರಿದೆ. ಶನಿವಾರ ದಾಖಲಾದ 328 ಹೊಸ ಕೊರೋನಾ ಪ್ರಕರಣಗಳಲ್ಲಿ 184 ಮಂದಿ ಕೊರೋನಾ ಪೀಡಿತರು ಮುಂಬೈಗರು ಎಂಬುದು ಆತಂಕಕ್ಕೆ ಕಾರಣವಾಗಿದೆ. ಗುಜರಾತ್‌ನಲ್ಲಿ 280 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಇದು ಇಲ್ಲಿ ಈವರೆಗೂ ದಾಖಲಾದ ಗರಿಷ್ಠ ಪ್ರಮಾಣವಾಗಿದೆ.
ಕಾರ್ಮಿಕರಿಗೆ ಕೊರೋನಾಕ್ಕಿಂತ ಹೆಚ್ಚು ಕಾಡುತ್ತಿದೆ ಹಸಿವಿನ ಭೀತಿ!
ಒಟ್ಟು ಕೇಸಲ್ಲಿ ತಬ್ಲೀಘಿಗಳ ಪಾಲು ಶೇ.30
ದೇಶದಲ್ಲಿ ಇಲ್ಲಿಯವರೆಗೆ 14,378 ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಅವುಗಳ ಪೈಕಿ ದೆಹಲಿಯ ನಿಜಾಮುದ್ದೀನ್ ಮರ್ಕಜ್‌ನ ತಬ್ಲೀಘಿ ಜಮಾತ್‌ನಿಂದ ಹರಡಿರುವ ಪ್ರಕರಣಗಳ ಸಂಖ್ಯೆ 4,291 (ಶೇ.30) ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಕುರಿತು ಶನಿವಾರ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಅತಿ ಹೆಚ್ಚು ಸೋಂಕು ಕಂಡುಬಂದ ರಾಜ್ಯಗಳ ಪೈಕಿ ಬಹುತೇಕ ರಾಜ್ಯಗಳಲ್ಲಿ ತಬ್ಲೀಘಿಗಳಿಂದಾಗಿಯೇ ಪ್ರಮಾಣ ಹೆಚ್ಚಿದೆ. ಉದಾಹರಣೆಗೆ ತಮಿಳುನಾಡಿನ ಒಟ್ಟು ಪ್ರಕರಣದಲ್ಲಿ ಶೇ.84, ತೆಲಂಗಾಣದಲ್ಲಿ ಶೇ.79, ದೆಹಲಿಯಲ್ಲಿ ಶೇ.63, ಉತ್ತರಪ್ರದೇಶದಲ್ಲಿ ಶೇ.59, ಆಂಧ್ರಪ್ರದೇಶದಲ್ಲಿ ಶೇ.61ಕ್ಕೂ ಹೆಚ್ಚು ಕೇಸು ತಬ್ಲೀಘಿಗಳದ್ದೇ ಆಗಿದೆ. ಅರುಣಾಚಲಪ್ರದೇಶ ಹೊರತುಪಡಿಸಿದರೆ ಇನ್ನೆಲ್ಲಾ ರಾಜ್ಯಗಳಲ್ಲೂ ಕನಿಷ್ಠ ಒಂದು ಪ್ರಕರಣವಾದರೂ ತಬ್ಲೀಘಿಗಳಿಗೆ ಸೇರಿದ್ದು ಕಂಡುಬಂದಿದೆ.