ಪ್ರಾಣಿಗಳ ಚಿತಾಗಾರದಲ್ಲಿಯೇ ಸೋಂಕಿತರ ಮೃತದೇಹ ಅಂತ್ಯಸಂಸ್ಕಾರ

By Suvarna NewsFirst Published Apr 30, 2021, 3:23 PM IST
Highlights

ಹೆಚ್ಚಿದ ಕೊರೋನಾ ಸಾವಿನ ಪ್ರಕರಣ | ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲ | ಪ್ರಾಣಿಗಳ ಚಿತಾಗಾರದಲ್ಲಿಯೇ ಸೋಂಕಿತರ ಅಂತ್ಯ ಸಂಸ್ಕಾರ

ದೆಹಲಿ(ಏ.30): ದೆಹಲಿಯಲ್ಲಿ ಕೊರೋನಾ ಸಾವಿನ ಪ್ರಕರಣ ಹೆಚ್ಚಾಗಿದ್ದು, ಇದೀಗ ಸೋಂಕಿತರ ಮೃತದೇಹದ ಅಂತ್ಯ ಸಂಸ್ಕಾರಕ್ಕೆ ಸಮಸ್ಯೆ ಶುರುವಾಗಿದೆ. ಈಗಾಗಲೇ ದೆಹಲಿ ಪಾರ್ಕ್, ಪಾರ್ಕಿಂಗ್ ಸ್ಲಾಟ್‌, ಮೈದಾನಗಳಂತ ಪ್ರದೇಶದಲ್ಲಿ ಮೃತದೇಹ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದೆ. ಆದರೂ ಸಮಸ್ಯೆಗೆ ಮುಕ್ತಿ ದೊರೆತಿಲ್ಲ.

ಕಳೆದ 11 ದಿನಗಳಿಂದ ದೆಹಲಿಯಲ್ಲಿ ಚಿತಾಗಾರದಲ್ಲಿ ಮಿತಿಗೂ ಹೆಚ್ಚಿನ ಮೃತದೇಹ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಇದೀಗ ಅನಿವಾರ್ಯವಾಗಿ ದೆಹಲಿಯ ಮೊದಲ ಪ್ರಾಣಿಗಳ ಚಿತಾಗಾರದಲ್ಲಿ ಸೋಂಕಿತರ ಮೃತದೇಹದ ಅಂತ್ಯಸಂಸ್ಕಾರ ನಿರ್ವಹಿಸಲಾಗುತ್ತಿದೆ.

ಪಾರ್ಕ್, ಪಾರ್ಕಿಂಗ್ ಸ್ಲಾಟ್ ಎಲ್ಲವೂ ಈಗ ಸ್ಮಶಾನ..!

ಏಪ್ರಿಲ್ 19ರಿಂದ 29ರ ತನಕ ದ್ವಾರಕಾ ವಿಭಾಗ 24ರ ಚಿತಾಗಾರದಲ್ಲಿ ಶೇ 140ರಷ್ಟು ಮೃತದೇಹ ಸಂಸ್ಕಾರ ಹೆಚ್ಚಳವಾಗಿದೆ. ಈ ಅವಧಿಯಲ್ಲಿ 400ಕ್ಕೂ ಹೆಚ್ಚು ಸೋಂಕಿತರ ಮೃತದೇಹದ ಅಂತ್ಯಸಂಸ್ಕಾರವನ್ನು ಇಲ್ಲಿ ನಿರ್ವಹಿಸಲಾಗಿದೆ.

ಇಲ್ಲಿಯವರೆಗೆ ಐದು ಡಜನ್‌ನಷ್ಟು ಮೃತದೇಹ ಅಂತ್ಯಕ್ರಿಯೆ ಸ್ಥಳ ನಿರ್ಮಿಸಲಾಗಿದೆ. ದ್ವಾರಕಾದ ಅಂದಾಜು ನಾಲ್ಕು ಎಕರೆ ಪ್ರದೇಶದಲ್ಲಿ ಹರಡಿರುವ ಒಂದು ರುದ್ರ ಭೂಮಿಯಲ್ಲಿ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಡಿಎಂಸಿ) ನಿರ್ಮಿಸುತ್ತಿದ್ದ ಶ್ವಾನ ಸ್ಮಶಾನವನ್ನು ಬಳಸಿಕೊಳ್ಳಲಾಗುತ್ತದೆ. ಇದನ್ನು ಕಳೆದ ವರ್ಷ ದಕ್ಷಿಣ ನಾಗರಿಕ ಸಂಸ್ಥೆ ಸಾಕು ಪ್ರಾಣಿಗಳ ಶವಸಂಸ್ಕಾರವಾಗಿ ಪ್ರಸ್ತಾಪಿಸಿತ್ತು.

ದಕ್ಷಿಣ ನಾಗರಿಕ ಸಂಸ್ಥೆ ದಾಖಲಿಸಿದ ಮಾಹಿತಿಯ ಪ್ರಕಾರ, ಹತ್ತಿರದ ದ್ವಾರಕಾ ಸೆಕ್ಟರ್ -24 ಶವಾಗಾರದಲ್ಲಿ ಏಪ್ರಿಲ್ 19 ಮತ್ತು ಏಪ್ರಿಲ್ 29 ರ ನಡುವೆ 413 ಶವಗಳ ಅಂತ್ಯಕ್ರಿಯೆ ನಡೆದಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!