ಮೊಹಲ್ಲಾ ಕ್ಲಿನಿಕ್‌ ಟೀಕಿಸಿದ ದಿನೇಶ್‌ ಗುಂಡೂರಾವ್‌, ಟ್ವಿಟರ್‌ನಲ್ಲಿ ಆಪ್‌ ಫುಲ್‌ ಟ್ರೋಲ್‌!

By Santosh NaikFirst Published Aug 4, 2023, 4:55 PM IST
Highlights

ಕರ್ನಾಟಕದ ಆರೋಗ್ಯ ಸಚಿವ ದೆಹಲಿಯಲ್ಲಿ ಶನಿವಾರ ಆಮ್‌ ಆದ್ಮಿ ಸರ್ಕಾರದ ಪ್ರಾಯೋಜಿತ ಮೊಹಲ್ಲಾ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ಈ ಭೇಟಿಯನ್ನು ಆಪ್‌ ಸರ್ಕಾರ ಹೆಮ್ಮೆ ಎನ್ನುವಂತೆ ಟ್ವೀಟ್‌ ಮಾಡಿದ್ದರೆ, ಸ್ವತಃ ದಿನೇಶ್‌ ಗುಂಡೂರಾವ್‌ ಮಾಡಿರುವ ಟ್ವೀಟ್‌ ಆಪ್‌ ಸರ್ಕಾರದ ಕಾಲೆಳೆದಿದೆ.

ಬೆಂಗಳೂರು (ಆ.4): ಕರ್ನಾಟಕದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌  ಶುಕ್ರವಾರ ನವದೆಹಲಿಯ ಪಂಚಶೀಲ ಪಾರ್ಕ್‌ನಲ್ಲಿರುವ ಆಮ್‌ ಆದ್ಮಿ ಮೊಹಲ್ಲಾ ಕ್ಲಿನಿಕ್‌ಗೆ ಭೇಟಿ ನೀಡಿದರು. ಇದರ ಫೋಟೋಗಳನ್ನು ಟ್ವೀಟ್‌ ಮಾಡಿದ್ದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ದೆಹಲಿಯ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಹೊಸ ಹೊಸ ಯೋಜನೆಯನ್ನು ಪರಸ್ಪರ ಕಲಿಯುವುದರಲ್ಲಿ ಉತ್ಸುಕವಾಗಿದೆ ಎಂದು ದಿನೇಶ್‌ ಗುಂಡೂರಾವ್‌ ಕ್ಲಿನಿಕ್‌ಗೆ ಭೇಟಿ ನೀಡಿದ ಚಿತ್ರಗಳನ್ನು ಟ್ವೀಟ್‌ ಮಾಡುವ ಮೂಲಕ ಬರೆದುಕೊಂಡಿದ್ದರು. ಮೊಹಲ್ಲಾ ಕ್ಲಿನಿಕ್‌ಗೆ ಭೇಟಿ ನೀಡುವ ವೇಳೆ ದಿನೇಶ್‌ ಗುಂಡೂರಾವ್‌ ಅವರೊಂದಿಗೆ ದೆಹಲಿಯ ಆರೋಗ್ಯ ಸಚಿವ ಸೌರಭ್‌ ಭಾರದ್ವಾಜ್‌ ಕೂಡ ಜೊತೆಯಾಗಿದ್ದರು. ಅದರೊಂದಿಗೆ ಕರ್ನಾಟಕ ಭವನದ ವೈದ್ಯಕೀಯ ಅಧಿಕಾರಿ ಕಾರ್ತಿಕ್‌ ಕೂಡ ಗುಂಡೂರಾವ್‌ ಅವರ ಜೊತೆಯಲ್ಲಿದ್ದರು. ಮೊಹಲ್ಲಾ ಕ್ಲಿನಿಕ್‌ನಲ್ಲಿದ್ದ ಸಿಬ್ಬಂದಿಗಳ ಬಗ್ಗೆ ವಿಚಾರಿಸಿದ ದಿನೇಶ್‌ ಗುಂಡೂರಾವ್‌, ಕ್ಲಿನಿಕ್‌ನಲ್ಲಿದ್ದ ವಿವಿಧ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ.

ಮೊಹಲ್ಲಾ ಕ್ಲಿನಿಕ್‌ಗೆ ಹೋಗಿ ಬಂದ ಬಳಿಕ ಈ ಕುರಿತಾಗಿ ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿದ್ದು, 'ಇಂದು ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್‌ಗೆ ಭೇಟಿ ನೀಡಿದ್ದೆ. ಆದರೆ, ಅಲ್ಲಿ ಯಾರೂ ಜನರೇ ಇದ್ದಿರಲಿಲ್ಲ. ಕರ್ನಾಟಕದಲ್ಲಿ ಇರುವ ನಮ್ಮ ಕ್ಲಿನಿಕ್‌ಗಳಲ್ಲಿ ಹೆಚ್ಚಿನ ಸೌಲಭ್ಯಗಳಿದೆ. ರೋಗಿಗಳಿಗೆ ತಕ್ಷಣವೇ ಅಲ್ಲಿಯೇ ಟೆಸ್ಟ್‌ ಮಾಡುವಂಥ ಪ್ರಯೋಗಾಲಯಗಳೂ ಕೂಡ ಇದೆ. ನನ್ನ ಪ್ರಕಾರ ಮೊಹಲ್ಲಾ ಕ್ಲಿನಿಕ್‌ಅನ್ನು ಓವರ್‌ ಹೈಪ್‌ ಮಾಡಲಾಗಿದ್ದು, ನಾನು ನಿರಾಸೆಯಿಂದಲೇ ವಾಪಸಾದೆ' ಎಂದು ಬರೆದುಕೊಂಡಿದ್ದಾರೆ.

Visited a Mohalla Clinic in Delhi with hardly any people there.

Our Clinics in Karnataka have more facilities including a laboratory to do immediate tests for patients.

I guess it is overhyped and I came back feeling disappointed. pic.twitter.com/z9VywnmB3z

— Dinesh Gundu Rao/ದಿನೇಶ್ ಗುಂಡೂರಾವ್ (@dineshgrao)

ದೆಹಲಿಯಲ್ಲಿ ಪ್ರವಾಹ, ಸಿಎಂ ಪ್ರವಾಸ: ಅರವಿಂದ್‌ ಕೇಜ್ರಿವಾಲ್‌ ಬೆಂಗಳೂರು ಸಭೆ ಟೀಕಿಸಿದ ಬಿಜೆಪಿ!

Latest Videos

ದಿನೇಶ್‌ ಗುಂಡೂರಾವ್‌ ಮಾಡಿರುವ ಟ್ವೀಟ್‌ಅನ್ನು ಹೆಚ್ಚಿನವರು ಟ್ರೋಲ್‌ ಮಾಡಿದ್ದು, ಆಮ್‌ ಆದ್ಮಿ ಸರ್ಕಾರಕ್ಕೆ ಇದಕ್ಕಿಂತ ದೊಡ್ಡ ಅವಮಾನ ಬೇಕಿರಲಿಲ್ಲ ಎಂದು ಟೀಕಿಸಿದ್ದಾರೆ. ಇದಕ್ಕೆ ಕರ್ನಾಟಕ ಆಮ್‌ ಆದ್ಮಿ ಪಾರ್ಟಿ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು,  ಸ್ವಾಮಿ ದಿನೇಶ್‌  ಗುಂಡೂರಾವ್‌ ಅವರೇ, ಮೊಹಲ್ಲಾ ಕ್ಲಿನಿಕ್ ನೋಡಬೇಕು ಅಂತ ದೆಹಲಿ ಸರ್ಕಾರಕ್ಕೆ ನೀವೇ ಪತ್ರ ಬರೆದು ಮೊಹಲ್ಲಾ ಕ್ಲಿನಿಕ್ ನೋಡಲು ಹೋಗಿರುತ್ತೀರಿ, ನೋಡಿದ ಮೇಲೆ ಮಾಧ್ಯಮಗಳ ಮುಂದೆ ದೆಹಲಿಯ ವ್ಯವಸ್ಥೆಯನ್ನು ಹೊಗಳಿ, ಮೊಹಲ್ಲಾ ಕ್ಲಿನಿಕ್‌ನಿಂದ ಕಲಿಯುವುದು ಮತ್ತು ಕರ್ನಾಟಕದಲ್ಲೂ  ಅಳವಡಿಸುವುದು ಬಹಳಷ್ಟಿದೆ ಅಂತ ನೀವೇ ನಿಮ್ಮ ಬಾಯಿಂದಲೇ ಹೇಳಿರುತ್ತೀರಿ. ಈಗ ಅದ್ಯಾರ ಸೂಚನೆ ಸಿಕ್ಕಿತು ಅಂತ ಈ ರೀತಿ   ಹಿಪ್ರಾಕಸಿ ತೋರುತ್ತಿದ್ದೀರಿ?' ಎಂದು ಕಾಮೆಂಟ್‌ ಮಾಡಿದೆ.

ಸಿಸೋಡಿಯಾ ನೆನೆದು ಕೇಜ್ರಿ​ವಾಲ್‌ ಕಣ್ಣೀರು: 103 ದಿನದ ನಂತರ ಪತ್ನಿ ಭೇಟಿ ಮಾಡಿದ ಸಿಸೋಡಿಯಾ

'ದಿನೇಶ್‌ ಗುಂಡುರಾವ್‌ ಅವರು, ಆಪ್‌ ಜೊತೆಗೆ ಒಂದು ಸಣ್ಣ ಪ್ರ್ಯಾಂಕ್‌ ಮಾಡಿದ್ದಾರಷ್ಟೇ' ಎಂದು ಕೆಲವರು ಕಾಮೆಂಟ್‌ ಮಾಡಿದ್ದರೆ, ಐಎನ್‌ಡಿಐಎ ಅಲ್ಲಿ ಇರುವ ಕ್ರ್ಯಾಕ್‌ಅನ್ನು ದಿನೇಶ್‌ ಗುಂಡೂರಾವ್‌ ಎತ್ತಿ ತೋರಿಸಿದ್ದಾರೆ.  'ಒಂದೇ ಒಂದು ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಇಡೀ ಕಾಂಗ್ರೆಸ್‌ ನಾಯಕರು ಮಾತನಾಡುವ ಶೈಲಿಯೇ ಬದಲಾಗಿ ಹೋಗಿದೆ' ಎಂದು ಇನ್ನೊಬ್ಬರು ಟ್ವೀಟ್‌ ಮಾಡಿದ್ದಾರೆ.

 

click me!