ಪುರುಷರಿಗಿಂತ ಮಹಿಳೆಯರೇ ಬೆಸ್ಟ್‌ ಡ್ರೈವರ್ಸ್‌, ಸರ್ಕಾರದ ವರದಿ!

By Santosh Naik  |  First Published Nov 17, 2023, 10:03 PM IST

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಶುಕ್ರವಾರ ವರದಿಯನ್ನು ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಆಂಧ್ರ ಪ್ರದೇಶದಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೇ ಸೇಫ್‌ & ಬೆಸ್ಟ್‌ ಡ್ರೈವರ್ಸ್‌ ಎನ್ನಲಾಗಿದೆ.
 


ನವದೆಹಲಿ (ನ.17): ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿಗಳ ಪ್ರಕಾರ, ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ ಪುರುಷರಿಗಿಂತ ಮಹಿಳೆಯರು ಉತ್ತಮ ಡ್ರೈವರ್‌ ಎಂದು ಬಹಿರಂಗಪಡಿಸಿದೆ. ಪುರುಷ ಚಾಲಕರಿಗೆ ಹೋಲಿಸಿದರೆ ರಾಜ್ಯದಲ್ಲಿ ರಸ್ತೆ ಅಪಘಾತಗಳಲ್ಲಿ ಮಹಿಳಾ ಚಾಲಕರ ಸಾವಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದೆ. 2019 ಮತ್ತು 2022 ರ ನಡುವೆ ಆಂಧ್ರಪ್ರದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ ಒಟ್ಟು 14,217 ಚಾಲಕರ ಪೈಕಿ 462 ಡ್ರೈವರ್‌ಗಳು ಮಾತ್ರ ಮಹಿಳೆಯರಾಗಿದ್ದಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿ ಬಹಿರಂಗಪಡಿಸಿದೆ. ಮಾಧ್ಯಮ ವರದಿಯ ಪ್ರಕಾರ, ಈ ಅವಧಿಯಲ್ಲಿ ರಾಜ್ಯದಲ್ಲಿ ಸಂಭವಿಸಿದ ಒಟ್ಟು ಡ್ರೈವರ್‌ಗಳ ಸಾವುಗಳಲ್ಲಿ ಇದು ನಾಲ್ಕು ಪ್ರತಿಶತಕ್ಕಿಂತ ಕಡಿಮೆಯಾಗಿದೆ. ವೈಜಾಗ್ ನಗರದ ಟ್ರಾಫಿಕ್ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಹಿಳಾ ವಾಹನ ಚಾಲಕರು ತಮ್ಮ ಪುರುಷ ಸಹವರ್ತಿಗಳಿಗೆ ಹೋಲಿಸಿದರೆ ಹೆಚ್ಚಿನ ಅಪಾಯಗಳನ್ನು ತಪ್ಪಿಸುವ ಮೂಲಕ ರಸ್ತೆಗಳಲ್ಲಿ ಹೆಚ್ಚು ಜಾಗರೂಕರಾಗಿರುತ್ತಾರೆ ಎನ್ನುವುದನ್ನು ಗಮನಿಸಿದ್ದಾರೆ.

"ನಗರದ ರಸ್ತೆಗಳಲ್ಲಿ ಚಾಲನೆ ಮಾಡುವಾಗ 90 ಪ್ರತಿಶತದಷ್ಟು ಮಹಿಳಾ ವಾಹನ ಡ್ರೈವರ್‌ಗಳು ಹೆಡ್ ಗಾರ್ಡ್ ಮತ್ತು ಸೀಟ್ ಬೆಲ್ಟ್ ಧರಿಸಿರುವುದನ್ನು ನಾವು ಗಮನಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ. ರಸ್ತೆ ಅಪಘಾತಗಳ ಡೇಟಾವು ಆಂಧ್ರ ಪ್ರದೇಶ ರಾಜ್ಯದಲ್ಲಿ ಅಪಘಾತಗಳಲ್ಲಿ ಸಾವನ್ನಪ್ಪಿದ ಮಹಿಳಾ ಚಾಲಕರ ಸಂಖ್ಯೆಯಲ್ಲಿ ಹೆಚ್ಚಳವನ್ನು ತೋರಿಸಿದೆ, ಇದು 2019 ರಲ್ಲಿ 97 ರಿಂದ 2022 ರಲ್ಲಿ 154 ಕ್ಕೆ ಏರಿದೆ. ಇದು ಶೇಕಡಾ 58 ಕ್ಕಿಂತ ಹೆಚ್ಚಿನ ಹೆಚ್ಚಳವನ್ನು ಸೂಚಿಸುತ್ತದೆ.

Tap to resize

Latest Videos

"ಲಿಂಗದ ಆಧಾರದ ಮೇಲೆ ಚಾಲಕರಿಂದ ರಸ್ತೆ ಅಪಘಾತಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿದ್ದರೂ, ರಾಜ್ಯದಲ್ಲಿ ಸುಮಾರು 90 ಪ್ರತಿಶತದಷ್ಟು ರಸ್ತೆ ಅಪಘಾತಗಳು, ಸಾವುಗಳು ಮತ್ತು ಸಾವುನೋವುಗಳಲ್ಲಿ ಪುರುಷರು ಹೆಚ್ಚಿನ ಪಾಲನ್ನು ಹೊಂದಿದ್ದಾರೆ, ಆದರೆ ಮಹಿಳೆಯರು ಶೇಕಡಾ 10 ಕ್ಕಿಂತ ಕಡಿಮೆ" ಎಂದು ರಸ್ತೆ ಸಾರಿಗೆ ಪ್ರಾಧಿಕಾರ ( ಆರ್ಟಿಎ) ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಪುರುಷರಲ್ಲಿ ರಸ್ತೆ ಅಪಘಾತಗಳ ಹೆಚ್ಚಾಗುತ್ತಿರುವುದು ಡ್ರೈವಿಂಗ್ ನಡವಳಿಕೆಯಲ್ಲಿನ ವ್ಯತ್ಯಾಸಗಳಿಗೆ ಕಾರಣವೆಂದು ಹೇಳಬಹುದು. ಪುರುಷರು ಹೆಚ್ಚು ನಿರ್ಲಕ್ಷ್ಯ ಮತ್ತು ಅತಿವೇಗದ ಪ್ರವೃತ್ತಿಯನ್ನು ಹೊಂದಿರುತ್ತಾರೆ ಎಂದು ವರದಿಯಾಗಿದೆ, ಆದರೆ ಮಹಿಳಾ ಚಾಲಕರು ಕಡಿಮೆ ವೇಗದಲ್ಲಿ ಚಾಲನೆ ಮಾಡಲು ಮತ್ತು ಹೆಚ್ಚು ಎಚ್ಚರಿಕೆಯಿಂದ ವಾಹನಗಳನ್ನು ಹಿಂದಿಕ್ಕಲು ಹೆಸರುವಾಸಿಯಾಗಿದ್ದಾರೆ. ಹೆಚ್ಚುವರಿಯಾಗಿ, ರಾಜ್ಯದಲ್ಲಿ ಪುರುಷ ವಾಹನ ಚಾಲಕರಿಗಿಂತ ಮಹಿಳಾ ವಾಹನ ಚಾಲಕರ ಸಂಖ್ಯೆ ಕಡಿಮೆಯಾಗಿದೆ.

ಖಾಸಗಿ ಉದ್ಯೋಗಗಳಲ್ಲಿ ಶೇ.75ರಷ್ಟು ಮೀಸಲಾತಿ ರದ್ದು ಮಾಡಿದ ಹೈಕೋರ್ಟ್‌!

ಸಾಮಾನ್ಯವಾಗಿ, ಮಹಿಳೆಯರು ವಾಹನ ಚಲಾಯಿಸುವಾಗ ಪುರುಷರಿಗಿಂತ ರಸ್ತೆ ನಿಯಮಗಳನ್ನು ಉತ್ತಮವಾಗಿ ಅನುಸರಿಸುತ್ತಾರೆ ಮತ್ತು ಮಹಿಳಾ ವಾಹನ ಚಾಲಕರಲ್ಲಿ ಟಿಪ್ಸಿ ಡ್ರೈವಿಂಗ್ (ಡ್ರಿಂಕ್‌ & ಡ್ರೈವ್‌) ಮಾಡುವ ಘಟನೆಗಳು ರಾಜ್ಯದಲ್ಲಿ ಬಹಳ ಕಡಿಮೆ ಎಂದು ಪೊಲೀಸರು ವರದಿ ಮಾಡಿದ್ದಾರೆ.

'ನಾನು ಹಾಡುತ್ತಿರುವ ವಿಡಿಯೋ ನೋಡಿದ್ದೇನೆ..' ಡೀಪ್‌ಫೇಕ್‌, ಎಐ ಬಗ್ಗೆ ಮೋದಿ ಮಾತು!

click me!