ಪ್ರಧಾನಿ ಮೋದಿ ಬಳಸಿದ ಪದ ಕಡತದಿಂದ ತೆಗೆದ ರಾಜ್ಯಸಭೆ| NPR ಕುರಿತ ಉಲ್ಲೇಖದಲ್ಲಿ ಅಸಂಸದೀಯ ಪದ ಬಳಕೆ| NPR ಕುರಿತು ವಿಪಕ್ಷಗಳು ಸುಳ್ಳು ಹೇಳುತ್ತಿವೆ ಎಂದಿದ್ದ ಮೋದಿ| ಸುಳ್ಳು ಪದ ಅಸಂಸದೀಯ ಎಂದ ರಾಜ್ಯಸಭೆ| ಪ್ರಧಾನಿ ಭಾಷಣದ ಉಲ್ಲೇಖ ಕಡತದಿಂದ ತೆಗೆದು ಹಾಕುವುದು ಅಪರೂಪ|
ನವದೆಹಲಿ(ಫೆ.07): NPR ಕುರಿತ ತಮ್ಮ ಉಲ್ಲೇಖದಲ್ಲಿ ಪ್ರಧಾನಿ ಮೋದಿ ಬಳಸಿದ್ದ ಪದವೊಂದನ್ನು ರಾಜ್ಯಸಭೆಯ ಕಡತದಿಂದ ತೆಗೆದು ಹಾಕಿದ ಅಪರೂಪದ ಪ್ರಸಂಗ ನಡೆದಿದೆ.
NPR ಕುರಿತು ಮಾತನಾಡುತ್ತಿದ್ದಾಗ ಈ ಕುರಿತು ವಿಪಕ್ಷಗಳು ಸುಳ್ಳು ಹೇಳುತ್ತಿವೆ ಎಂದು ಆರೋಪಿಸಿದ್ದರು. ಸುಳ್ಳು ಅಸಂಸದೀಯ ಪದವಾಗಿದ್ದು, ಈ ಹಿನ್ನೆಲೆಯಲ್ಲಿ ಕಡತದಿಂದ ತೆಗೆದು ಹಾಕಲಾಗಿದೆ ಎಂದು ರಾಜ್ಯಸಭೆ ಸ್ಪಷ್ಟಪಡಿಸಿದೆ.
undefined
ಇದೇ ವೇಳೆ ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ತಮ್ಮ ಭಾಷಣದಲ್ಲಿ ಬಳಸಿದ್ದ ಪದವನ್ನೂ ಕೂಡ ಕಡತದಿಂದ ತೆಗೆದು ಹಾಕಲಾಗಿದೆ.
NPR ಕುರಿತ ‘ಸತ್ಯ’ ಬಿಚ್ಚಿಟ್ಟ ಮೋದಿ: ಬೆಚ್ಚಿ ಬಿದ್ದ ಸದನ!
ಸಾಮಾನ್ಯವಾಗಿ ಪ್ರಧಾನಿ ಭಾಷಣದ ಉಲ್ಲೇಖಗಳನ್ನು ಕಡತದಿಂದ ತೆಗೆದು ಹಾಕುವುದು ಅಪರೂಪ ಎನ್ನಲಾಗಿದ್ದು, ಆದರೂ ಈ ಕುರಿತು ಲೋಕಸಭೆ ಮತ್ತು ರಾಜ್ಯಸಭೆ ಎಚ್ಚರದಿಂದ ಇರುತ್ತದೆ.
ಈ ಹಿಂದೆ 2018ರಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ಸಂಸದ ಬಿಕೆ ಹರಿಪ್ರಸಾದ್ ಕುರಿತು ಉಲ್ಲೇಖಿಸಿದ್ದ ಪದವನ್ನೂ ಕಡತದಿಂದ ತೆಗೆದು ಹಾಕಲಾಗಿತ್ತು.
ಅಂತೆಯೇ 2013ರಲ್ಲಿ ರಾಜ್ಯಸಭೆಯಲ್ಲಿ ಅರುಣ್ ಜೇಟ್ಲಿ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಡುವೆ ನಡೆದ ವಾಕ್ಸಮರದ ವೇಳೆ ಡಾ.ಸಿಂಗ್ ಬಳಸಿದ ಪದವನ್ನೂ ಕೂಡ ಕಡತದಿಂದ ತೆಗೆದು ಹಾಕಲಾಗಿತ್ತು.