100 ಪುಟಗಳ ಬಜೆಟ್‌ ಪ್ರತಿ ಕೈಯಲ್ಲೇ ಬರೆದು ಮಂಡಿಸಿದ ಛತ್ತೀಸ್‌ಗಢ ಸಚಿವ!

Published : Mar 05, 2025, 07:20 AM ISTUpdated : Mar 05, 2025, 11:33 AM IST
100 ಪುಟಗಳ ಬಜೆಟ್‌ ಪ್ರತಿ ಕೈಯಲ್ಲೇ ಬರೆದು ಮಂಡಿಸಿದ ಛತ್ತೀಸ್‌ಗಢ ಸಚಿವ!

ಸಾರಾಂಶ

ಛತ್ತೀಸ್‌ಗಢದ ಹಣಕಾಸು ಸಚಿವ ಒ.ಪಿ.ಚೌಧರಿ ಕೈಬರಹದಲ್ಲಿ ಬಜೆಟ್ ಮಂಡಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಡಿಜಿಟಲ್ ಯುಗದಲ್ಲಿ ಕೈಬರಹದ ಬಜೆಟ್ ಮಂಡಿಸುವ ಮೂಲಕ ಸ್ವಂತಿಕೆಗೆ ಉತ್ತೇಜನ ನೀಡಿದ್ದಾರೆ.

ರಾಯ್‌ಪುರ (ಮಾ.5): ಅಕ್ಷರಗಳೆಲ್ಲ ಕೀಲಿಮಣೆಯಲ್ಲೇ ಕಳೆದುಹೋಗುತ್ತಿರುವ ಇಂದಿನ ಡಿಜಿಟಲ್‌ ಯುಗದಲ್ಲೂ ಕೈಬರಹಗಳೇ ಬೆಸ್ಟ್‌. ಇದು ಸೃಜನಾತ್ಮಕತೆ ಉತ್ತೇಜಿಸಿ, ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ ಎಂದು ಹಲವು ಸಂಶೋಧನೆಗಳೇ ಹೇಳಿವೆ. ಇದಕ್ಕೆ ಪೂರಕ ಎಂಬಂತೆ ಛತ್ತೀಸ್‌ಗಢದ ಹಣಕಾಸು ಸಚಿವ ಒ.ಪಿ.ಚೌಧರಿ ಅವರು ಕೈಬರಹದಲ್ಲೇ ಸಿದ್ಧಪಡಿಸಿದ ಬಜೆಟ್‌ ಪ್ರತಿ ಮಂಡಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಹೊಸ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದಾರೆ.

ಕಂಪ್ಯೂಟರ್‌ ಮುದ್ರಿತ ಬಜೆಟ್‌ ಪ್ರತಿ ಮಂಡಿಸುವ ಪರಿಪಾಠ ಸಾಮಾನ್ಯವಾಗಿರುವಾಗ ಸ್ವತಃ ಹಣಕಾಸು ಸಚಿವರೇ ಕೈಬರಹದಲ್ಲಿ ಸಿದ್ಧಪಡಿಸಿದ 100 ಪುಟಗಳ ಬಜೆಟ್‌ ಪ್ರತಿ ಮಂಡಿಸಿದ್ದು ಛತ್ತೀಸ್‌ಗಡದ ಇತಿಹಾಸದಲ್ಲಿ ಇದೇ ಮೊದಲು.

ಇದನ್ನೂ ಓದಿ: ಆರ್ಥಿಕ ಸಂಕಷ್ಟದಲ್ಲಿದ್ದ ಪಾಕಿಸ್ತಾನದಲ್ಲಿ ಬೃಹತ್ ಚಿನ್ನದ ನಿಕ್ಷೇಪ ಪತ್ತೆ! ಅದರ ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತಾ?

ಬರವಣಿಗೆಯ ಮೂಲ ಸಂಪ್ರದಾಯವನ್ನು ಪಾಲಿಸಿ ಈ ಬಾರಿಯ ಬಜೆಟ್‌ ಮಂಡಿಸಲಾಗಿದೆ. ಈ ಮೂಲಕ ಸ್ವಂತಿಕೆಗೆ ಉತ್ತೇಜನ ನೀಡಲಾಗಿದೆ. ಈಗಿನ ಡಿಜಿಟಲ್‌ ಯುಗದಲ್ಲಿ ಕೈಬರಹದ ಬಜೆಟ್‌ ಪ್ರತಿ ಮಂಡಿಸುವುದು ಮಹತ್ವ ಪಡೆದಿದೆ. ಇದು ವಿಶ್ವಾರ್ಹತೆ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುತ್ತದೆ ಎಂದು ಮಾಜಿ ಐಎಎಸ್‌ ಅಧಿಕಾರಿಯೂ ಆಗಿರುವ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.

ಕೈಬರಹದಲ್ಲೇ ಬಜೆಟ್‌ ಪ್ರತಿ ಸಿದ್ಧಪಡಿಸುವುದು ಸುಲಭದ ಕೆಲಸವೇನಲ್ಲ. ಯಾಕೆಂದರೆ ಬಜೆಟ್‌ ಪ್ರತಿ ಸರ್ಕಾರದ ಅಧಿಕೃತ ದಾಖಲೆ. ಹೀಗಾಗಿ ಯಾವುದಾದರೂ ಒಂದು ಪದ ಅಥವಾ ಸಾಲು ತಪ್ಪಾಗಿದ್ದರೂ ಸ್ಪಷ್ಟತೆಗಾಗಿ ಚೌಧರಿ ಅವರು ಅದನ್ನು ಸಂಪೂರ್ಣವಾಗಿ ಹೊಸದಾಗಿ ಬರೆಯುತ್ತಿದ್ದರು. ಬಜೆಟ್‌ ಪ್ರತಿ ಪೂರ್ಣಗೊಳಿಸಲು ಮೂರು ರಾತ್ರಿ ಬಿಡುವಿಲ್ಲದೆ ಕೆಲಸ ಮಾಡಿದ್ದಾರೆ ಎನ್ನುತ್ತಾರೆ ಆಪ್ತರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ